ETV Bharat / bharat

ಶಾಸಕರ ಬರ್ತ್​ಡೇ ಕಾರ್ಯಕ್ರಮದಲ್ಲಿ ಯುವತಿಯರ ಅಶ್ಲೀಲ ನೃತ್ಯ - ವೈಎಸ್​ಆರ್​ಸಿಪಿ ಶಾಸಕ

ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಬರ್ತ್​ಡೇ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಆಯೋಜಿಸಲಾಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ವೈಎಸ್​ಆರ್ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯದ ಶಾಸಕರ ವಿರುದ್ಧ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಬರ್ತ್​ಡೇ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ
Obscene dance at MLA's birthday event
author img

By

Published : Aug 4, 2022, 10:22 AM IST

ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ದಾರ್ಶಿ ಕ್ಷೇತ್ರದ ಶಾಸಕ ಮದ್ದಿಸೆಟ್ಟಿ ವೇಣುಗೋಪಾಲ ಅವರ ಜನ್ಮದಿನ ಆಚರಣೆಯ ಸಮಾರಂಭದಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸಲಾಗಿದ್ದು, ಈಗ ವಿವಾದ ಸೃಷ್ಟಿಸಿದೆ. ವೈಎಸ್​ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಥಳೀಯ ಕ್ಲಾಕ್ ಟವರ್ ಜಂಕ್ಷನ್​ನಲ್ಲಿ ರಸ್ತೆ ಮಧ್ಯದಲ್ಲಿ ಕಾರ್ಯಕ್ರಮಕ್ಕಾಗಿ ಪೆಂಡಾಲ್ ಹಾಕಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಇದೇ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಕೆಲ ಯುವ ವೈಎಸ್​ಆರ್​ಸಿಪಿ ಕಾರ್ಯಕರ್ತರು ಯುವತಿಯರೊಂದಿಗೆ ಅಶ್ಲೀಲ ನೃತ್ಯ ಮಾಡಿದ್ದಾರೆ. ಮಧ್ಯರಾತ್ರಿ ಶಾಸಕರು ಕೇಕ್ ಕಟ್ ಮಾಡಿದ ನಂತರವೂ ಈ ಡಾನ್ಸ್ ಮುಂದುವರಿದಿದ್ದವು. ಆದರೆ, ಸ್ಥಳದಲ್ಲೇ ಇದ್ದ ಶಾಸಕರು ಇದಾವುದನ್ನೂ ತಡೆಯದೇ ಸುಮ್ಮನೆ ಇರುವುದು ಸಂಶಯ ಮೂಡಿಸಿತು.

ಇಷ್ಟು ಮಾತ್ರವಲ್ಲದೇ ಈ ಅಶ್ಲೀಲ ನೃತ್ಯ ನಡೆಯುತ್ತಿದ್ದ ಸ್ಥಳ ಪೊಲೀಸ್ ಠಾಣೆಗೆ ತುಂಬಾ ಹತ್ತಿರದಲ್ಲೇ ಇತ್ತು. ಅಷ್ಟಾದರೂ ಪೊಲೀಸರು ಕೂಡ ಮೂಕ ಪ್ರೇಕ್ಷಕರಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.