ETV Bharat / bharat

ಈಶಾನ್ಯದ 3 ರಾಜ್ಯಗಳಲ್ಲಿ AFSPA ವ್ಯಾಪ್ತಿ ಕಡಿತ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ - AFSPA act empowers security forces

ದಶಕಗಳ ನಂತರ ದೇಶದ ಈಶಾನ್ಯ ರಾಜ್ಯಗಳಾದ ಅಸ್ಸೋಂ, ಮೇಘಾಲಯ ಹಾಗೂ ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿ, ಮಹತ್ವದ ಆದೇಶ ಹೊರಹಾಕಿದೆ.

Number of areas under AFSPA
Number of areas under AFSPA
author img

By

Published : Mar 31, 2022, 3:57 PM IST

ನವದೆಹಲಿ: ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದುಕೊಂಡಿದ್ದ ಅಸ್ಸೋಂ-ಮೇಘಾಲಯ ನಡುವಿನ ಅಂತರರಾಜ್ಯ ಗಡಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈಶಾನ್ಯ ರಾಜ್ಯಗಳಾಗಿರುವ ಅಸ್ಸೋಂ, ನಾಗಾಲ್ಯಾಂಡ್​ ಮತ್ತು ಮಣಿಪುರದಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA) ವ್ಯಾಪ್ತಿಯನ್ನು ಕಡಿತಗೊಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಮೂರು ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಉಂಟಾಗುತ್ತಿದ್ದ ಗಲಭೆಯನ್ನು ಶಾಸ್ವತವಾಗಿ ಕೊನೆಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅನೇಕ ಒಪ್ಪಂದಗಳನ್ನು ಜಾರಿಗೆ ತಂದಿದ್ದು, ಇದೀಗ ಎಎಫ್​​ಎಸ್​ಪಿಎ ವ್ಯಾಪ್ತಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

  • Reduction in areas under AFSPA is a result of the improved security situation and fast-tracked development due to the consistent efforts and several agreements to end insurgency and bring lasting peace in North East by PM @narendramodi government.

    — Amit Shah (@AmitShah) March 31, 2022 " class="align-text-top noRightClick twitterSection" data=" ">

ಇದನ್ನೂ ಓದಿ: ದಶಕಗಳ ಅಸ್ಸೋಂ-ಮೇಘಾಲಯ ಗಡಿ ಸಮಸ್ಯೆ ಇತ್ಯರ್ಥ: ಮಹತ್ವದ ಒಪ್ಪಂದಕ್ಕೆ ಅಮಿತ್‌ ಶಾ ಸಮ್ಮುಖದಲ್ಲಿ ಸಹಿ

ಈಶಾನ್ಯ ಭಾರತದ ಗಲಭೆ ಮತ್ತು ಸಂಘರ್ಷಪೀಡಿತ ರಾಜ್ಯಗಳಾದ ನಾಗಾಲ್ಯಾಂಡ್​, ಮಣಿಪುರ, ಅಸ್ಸೋಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸೇನೆಗಳಿಗೆ ವಿಶೇಷ ಅಧಿಕಾರವಿದೆ. 1958ರ ಸಶಸ್ತ್ರ ಪಡೆಗಳ ಕಾಯ್ದೆಯ ಮೂಲಕ ವಿಶೇಷ ಅಧಿಕಾರ ನೀಡಲಾಗಿದೆ. ಅಲ್ಲಿ ವಾಸ ಮಾಡುವ ವ್ಯಕ್ತಿ ಕಾನೂನು ನಿಯಮ ಉಲ್ಲಂಘನೆ ಮಾಡಿದ್ದಾನೆಂದು ಭಾವಿಸಿದರೆ ಯೋಧರಿಗೆ ಆತನ ಮೇಲೆ ಗುಂಡು ಹಾರಿಸುವ, ವಾರಂಟ್​ ಇಲ್ಲದೆ ಆತನ ಮನೆ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಈ ನಿಯಮ ವಾಪಸ್ ಪಡೆದುಕೊಳ್ಳುವಂತೆ ಈ ಹಿಂದಿನಿಂದಲೂ ಭಾರಿ ಒತ್ತಡ ಕೇಳಿ ಬರುತ್ತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.