ನುಹ್(ಹರಿಯಾಣ): ಶ್ರಾವಣ ಮಾಸದಲ್ಲಿ ಕನ್ವರ್ ಯಾತ್ರೆಗೆ ಹೋಗುವ ಯಾತ್ರಿಕರು ನೂರಾರು ಕಿಲೋಮೀಟರ್ ನಡೆಯಬೇಕಾಗುತ್ತದೆ. ಈ ಪಯಣದಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಯಾತ್ರಿಗಳ ಕಾಲುಗಳಿಗೆ ನೋವಾದರೆ, ಇನ್ನು ಕೆಲವರ ಪಾದಗಳು ದಪ್ಪವಾಗುತ್ತವೆ. ಇಂತವರಿಗಾಗಿ ಇಲ್ಲೊಬ್ಬರು ಶಿಬಿರವನ್ನು ಸ್ಥಾಪಿಸಿ, ಅವರ ಸೇವೆ ಮಾಡುತ್ತಿದ್ದಾರೆ.
ನೂಹ್ ನಿವಾಸಿಯಾಗಿರುವ ಯಾಮೀನ್ ಖಾನ್ ಹಿಂದೂ - ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದಾರೆ. ನೂರಾರು ಕಿಲೋಮೀಟರ್‌ಗಳಷ್ಟು ದೂರ ನಡೆದು, ನೋವಿನಿಂದ ಬಳಲುವ ಯಾತ್ರಿಗಳ ಸೇವೆಯನ್ನು ಮಾಡುತ್ತಿದ್ದಾರೆ. ಇವರು ಯಾತ್ರಿಗಳಿಗೆ ಆಕ್ಯುಪ್ರೆಶರ್ ಥೆರಪಿ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಯಾಮೀನ್ ಅವರು ವೃತ್ತಿಯಲ್ಲಿ ಆಕ್ಯುಪ್ರೆಶರ್ ಥೆರಪಿಸ್ಟ್ ಆಗಿದ್ದಾರೆ.
ಈ ಚಿಕಿತ್ಸೆಯಿಂದ ಅವರು ಯಾತ್ರಿಗಳನ್ನು ನೋವಿನಿಂದ ಮುಕ್ತಗೊಳಿಸುತ್ತಾರೆ. ಇದರಿಂದಾಗಿ ಶಿವನಿಗೆ ನೀರು ಅರ್ಪಿಸಲು ಬರುವವರಿಗೆ ಯಾವುದೇ ದೈಹಿಕ ನೋವು ಇಲ್ಲದಂತೆ ಮಾಡುತ್ತಿದ್ದಾರೆ. 2001 ರಲ್ಲಿ ಆರೋಗ್ಯ ಇಲಾಖೆಯಲ್ಲಿ ನೇಮಕಗೊಂಡ ಅವರು 2019 ರವರೆಗೂ ಯಾತ್ರಿಕರ ಸೇವೆ ಮಾಡಿದ್ದು, ನಿವೃತ್ತರಾದ ನಂತರವೂ ಅವರ ಸೇವಾ ಕೈಂಕರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಸಲಹೆ ಮೇರೆಗೆ ವರ್ಕೌಟ್ ಆರಂಭ.. ವಿಡಿಯೋ ಹಂಚಿಕೊಂಡ ತೇಜಸ್ವಿ ಯಾದವ್
ಕಾಲ್ನಡಿಗೆಯಲ್ಲಿ ನಡೆಯುವ ಯಾತ್ರಿಗಳು ತಮ್ಮ ಆಯಾಸವನ್ನು ನಿವಾರಿಸಿಕೊಳ್ಳಲು ನೂಹ್‌ನಲ್ಲಿರುವ ಶಿಬಿರಕ್ಕೆ ಬರುತ್ತಾರೆ. ನಿತ್ಯ ಸುಮಾರು 1000 ಯಾತ್ರಿಗಳು ಇಲ್ಲಿಗೆ ಬರುತ್ತಾರೆ. ಕಾಲು, ಮೊಣಕಾಲು, ಭುಜ ಅಥವಾ ಬೆನ್ನು ನೋವು ಇರಲಿ, ಯಾಮೀನ್ ಅವಕ್ಕೆಲ್ಲ ಮುಕ್ತಿಯನ್ನು ನೀಡುತ್ತಿದ್ದಾರೆ. ಯಾಮೀನ್ ಅವರು ಕಳೆದ 22 ವರ್ಷಗಳಿಂದ ಈ ಸೇವೆ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಯಾತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.