ನವದೆಹಲಿ: ಕೇರಳದ ವಿದ್ಯಾರ್ಥಿನಿಯೊಬ್ಬಳು ಸೋಮವಾರ ಪರೀಕ್ಷೆಗೆ ಹಾಜರಾಗುವ ಮುನ್ನ ತನ್ನ ಒಳಉಡುಪುಗಳನ್ನು ತೆಗೆಯುವಂತೆ ಹೇಳಲಾಗಿದೆ ಎಂಬ ಆರೋಪವನ್ನು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಟ್) ತಳ್ಳಿಹಾಕಿದೆ.
ಪರೀಕ್ಷೆಯ ಸಮಯದಲ್ಲಿ ಅಥವಾ ತಕ್ಷಣವೇ ಯಾರಿಂದಲೂ ಯಾವುದೇ ಇ-ಮೇಲ್ ಆಗಲಿ ಅಥವಾ ದೂರನ್ನು ಸ್ವೀಕರಿಸಿಲ್ಲ. ನೀಟ್‌ನ ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಪೋಷಕರು ಆರೋಪಿಸಿದಂತೆ ಯಾವುದೇ ಚಟುವಟಿಕೆಯನ್ನು ಅನುಮತಿಸುವುದಿಲ್ಲ ಎಂದು ನ್ಯಾಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಂಗ/ಧಾರ್ಮಿಕ/ಸಾಂಸ್ಕೃತಿಕ/ಪ್ರಾದೇಶಿಕ ಸೂಕ್ಷ್ಮತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಪರೀಕ್ಷೆಯನ್ನು ನಡೆಸುವ ಪಾವಿತ್ರ್ಯತೆ ಮತ್ತು ನ್ಯಾಯಸಮ್ಮತೆಯನ್ನು ಖಾತ್ರಿಪಡಿಸಿಕೊಳ್ಳಲು ಡ್ರೆಸ್ ಕೋಡ್ ಒದಗಿಸುತ್ತದೆ. ಇದು ಅಭ್ಯರ್ಥಿಗಳ ಪರೀಕ್ಷೆ ಮತ್ತು ಬಯೋಮೆಟ್ರಿಕ್ ಪ್ರವೇಶವನ್ನು ಸುಲಭಗೊಳಿಸುತ್ತದೆ ಎಂದು ನ್ಯಾಟ್ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಮುನ್ನ ತನ್ನ ಒಳಉಡುಪುಗಳನ್ನು ತೆಗೆಯುವಂತೆ ಕೇಳಲಾಗಿತ್ತು ಎಂದು ಕೇರಳದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು. ಈ ಆರೋಪವನ್ನು ನ್ಯಾಟ್ ತಳ್ಳಿಹಾಕಿದೆ.
ಓದಿ: ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದವರ ವಿರುದ್ಧ ಪ್ರಕರಣ ದಾಖಲು