ETV Bharat / bharat

ನೇಪಾಳದಲ್ಲಿ UPI ಪಾವತಿ ವ್ಯವಸ್ಥೆ ಅಳವಡಿಸಲಿರುವ NPCI - ನೇಪಾಳದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಅಳವಡಿಸಲಿರುವ ಎನ್‌ಪಿಸಿಐ

ಮುಂದಿನ ಕೆಲವು ತಿಂಗಳುಗಳಲ್ಲಿ ನೇಪಾಳದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ ಅಳವಡಿಸುವುದಾಗಿ ಎನ್‌ಪಿಸಿಐ ತಿಳಿಸಿದೆ. ಭಾರತದ ಹೊರಗೆ ಯುಪಿಐ ಅಳವಡಿಕೆ ಮಾಡಲಾಗುತ್ತಿರುವ ಮೊದಲ ರಾಷ್ಟ್ರ ನೇಪಾಳವಾಗಿದೆ.

UPI
UPI
author img

By

Published : Feb 17, 2022, 7:08 PM IST

ಮುಂಬೈ: ನೇಪಾಳದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ - ಯುಪಿಐ) ಅನ್ನು ಅಳವಡಿಸುವುದಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಇಂದು ಘೋಷಿಸಿದೆ.

ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ಇಂಟರ್‌ಆಪರೇಬಲ್ ಮಾಡುವ ಮೂಲಕ ಇದು ನೇಪಾಳ ಮತ್ತು ಭಾರತದ ನಡುವಿನ ನಗದು ವಹಿವಾಟುಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಲಿದೆ. ಭಾರತದ ಹೊರಗೆ ಯುಪಿಐ ಅಳವಡಿಕೆ ಮಾಡಲಾಗುತ್ತಿರುವ ಮೊದಲ ರಾಷ್ಟ್ರ ನೇಪಾಳವಾಗಿದೆ.

ಇದರಿಂದಾಗಿ ನೇಪಾಳದೊಳಗಿನ ಗ್ರಾಹಕರು ಅತ್ಯಾಧುನಿಕ ಯುಪಿಐ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ತ್ವರಿತವಾಗಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಮುಖ್ಯವಾಗಿ ಇದು ನೇಪಾಳ ಮತ್ತು ಭಾರತದ ನಡುವೆ ನೈಜ-ಸಮಯದ ಗಡಿಯಾಚೆಗಿನ P2P ರವಾನೆಗೆ ಮುಂದಿನ ದಾರಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಎನ್‌ಪಿಸಿಐನ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಸಿಇಒ ರಿತೇಶ್ ಶುಕ್ಲಾ ಹೇಳಿದರು.

ಇದನ್ನೂ ಓದಿ: ಅಫ್ಘಾನ್​ನಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ: ಭಾರತ ಕಳವಳ

ಎನ್ಐಪಿಎಲ್, ಗೇಟ್‌ವೇ ಪೇಮೆಂಟ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮನಮ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ ಈ ಮೂರು ಕಂಪನಿಗಳು ಜೊತೆಗೂಡಿ ಮುಂದಿನ ಕೆಲವು ತಿಂಗಳುಗಳಲ್ಲಿ ನೇಪಾಳದಲ್ಲಿ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಯುಪಿಐ ಅಳವಡಿಸಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.