ETV Bharat / bharat

ನೀವು ಧೂಮಪಾನ ವ್ಯಸನಿಗಳೇ?.. ಇಲ್ಲಿದೆ ನೋಡಿ ಆಯುರ್ವೇದಿಕ್​ ಸಿಗರೇಟ್​ - ಭಾರತೀಯ ಪೇಟೆಂಟ್ ಪಡೆದುಕೊಂಡ ಸಿಗರೇಟ್

ಪುಣೆ ಮೂಲದ ಅನಂತವೇದ ಆಯುರ್ವೇದ ಸಂಶೋಧನಾ ಸಂಸ್ಥೆಯೊಂದು ಹೊಸ ರೀತಿಯ ಪ್ರಯೋಗ ನಡೆಸಿ ಆಯುರ್ವೇದ ಸಿಗರೇಟ್​ಅನ್ನು ಅಭಿವೃದ್ಧಿಪಡಿಸಿದ್ದು, ಪೇಟೆಂಟ್ ಪಡೆದುಕೊಂಡಿದೆ.

Ayurvedic cigarette, ಆಯುರ್ವೇದ ಸಿಗರೇಟ್​
Ayurvedic cigarette
author img

By

Published : Nov 27, 2021, 11:33 AM IST

Updated : Nov 27, 2021, 11:55 AM IST

ಪುಣೆ: ಸಿಗರೇಟ್​ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಎಲ್ಲರಿಗೂ ಸಲಹೆ ನೀಡುತ್ತಾರೆ. ಆದರೆ ಧೂಮಪಾನ ಚಟಕ್ಕೆ ಅಂಟಿಕೊಂಡಿರುವ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುಣೆ ಮೂಲದ ಅನಂತವೇದ ಆಯುರ್ವೇದ ಸಂಶೋಧನಾ ಸಂಸ್ಥೆಯೊಂದು ಹೊಸ ರೀತಿಯ ಪ್ರಯೋಗ ನಡೆಸಿ ಆಯುರ್ವೇದ ಸಿಗರೇಟ್​ಅನ್ನು ಅಭಿವೃದ್ಧಿಪಡಿಸಿದೆ.

ಸಂಶೋಧಕ ಡಾ.ರಾಜಸ್ ನಿಟ್ಸೂರ್ ಅವರು ಸಂಶೋಧನೆ ನಡೆಸಿ ಈ ಆಯುರ್ವೇದಿಕ್​ ಸಿಗರೇಟ್ ಅನ್ನು ಅಭಿವೃದ್ಧಿಪಡಿಸಿದ್ದು, ಪೇಟೆಂಟ್ ಪಡೆದುಕೊಂಡಿದೆ. ಹಾಗಾಗಿ, ಧೂಮಪಾನದ ಚಟ ಇರುವವರಿಗೆ ಈ ಸಿಗರೇಟ್ ವರದಾನವಾಗಲಿದೆ ಎನ್ನುತ್ತಾರೆ ರಾಜಸ್.

ಆಯುರ್ವೇದ ಸಿಗರೇಟ್​
ಆಯುರ್ವೇದ ಸಿಗರೇಟ್​

ವೈದ್ಯ ಅನಂತ್ ನಿಟ್ಸೂರ್ ಮತ್ತು ಅವರ ಮಗ ವೈದ್ಯ ಉದಯ್ ನಿಟ್ಸೂರ್ ಸುಮಾರು ಹತ್ತು ವರ್ಷಗಳ ಹಿಂದೆಯೇ ಈ ಸಿಗರೇಟ್ ಸಂಶೋಧನೆ ಆರಂಭಿಸಿ, ಅಭಿವೃದ್ಧಿಪಡಿಸಿದ್ದರು. ಸದ್ಯಕ್ಕೆ ಡಾ.ಅನಂತ್ ನಿಟ್ಸೂರ್ ಅವರ ಮೊಮ್ಮಗ ರಾಜಾಸ್ ನಿಟ್ಸೂರ್ ಅವರು ಪೇಟೆಂಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಪರಿಸ್ಥಿತಿ.. ಅಧಿಕಾರಿಗಳೊಂದಿಗೆ ಪ್ರಧಾನಿ ಇಂದು ಮಹತ್ವದ ಸಭೆ

ಹಿಂದಿನ ಕಾಲದಿಂದಲೂ ಆಯುರ್ವೇದ ಸಂಪ್ರದಾಯದ ಹೊಂದಿರುವ ನಮ್ಮ ಭಾರತಕ್ಕೆ ಇದು ಕೊಡುಗೆಯಾಗಲಿದೆ. ಈ ಸಿಗರೇಟ್​ಗಳಲ್ಲಿ ತಂಬಾಕಿನ ಬದಲಾಗಿ ತುಳಸಿ, ದಾಲ್ಚಿನಿ, ಲವಂಗ ಮುಂತಾದ ಆಯುರ್ವೇದ ಔಷಧೀಯ ಪದಾರ್ಥಗಳನ್ನು ಬಳಸಲಾಗಿದೆ. ಆದ್ದರಿಂದ ನಿಕೋಟಿನ್ ಅಂಶಗಳಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು. ಜೊತೆಗೆ ಕೆಮ್ಮು ಮತ್ತು ಮೇಲ್ಭಾಗದ ಗಂಟಲಿನ ಸಮಸ್ಯೆ, ಎದೆ, ಶ್ವಾಸಕೋಶ ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ಇದು ನಿಯಂತ್ರಿಸಲು ಸಹಕಾರಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ..ಟೊಮೇಟೊ ಬೆಲೆ ಕೊಂಚ ಇಳಿಕೆ

Last Updated : Nov 27, 2021, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.