ETV Bharat / bharat

ಕಚೇರಿಯಲ್ಲಿ ಬಿಯರ್, ವೈನ್ ಕುಡಿಯಬಹುದು!.. ಸದ್ಯ ಇದು ಹರಿಯಾಣದಲ್ಲಿ ಮಾತ್ರ!

ಹರಿಯಾಣದಲ್ಲಿ ಇನ್ನು ಮುಂದೆ ಕಾರ್ಪೊರೇಟ್ ಕಚೇರಿಗಳಲ್ಲಿ ಬಿಯರ್ ಮತ್ತು ವೈನ್ ಕುಡಿಯಲು ಅವಕಾಶ ಸಿಗಲಿದೆ. ಈ ಬಗ್ಗೆ ಸರ್ಕಾರ ಹೊಸ ಅಬಕಾರಿ ನೀತಿ ಜಾರಿಗೊಳಿಸಿದೆ.

Now corporate offices in Haryana can serve beer, wine

author img

By

Published : May 12, 2023, 5:41 PM IST

ಚಂಡೀಗಢ : ಜೂನ್ 12ರಿಂದ ಹರಿಯಾಣದಲ್ಲಿರುವ ಕಾರ್ಪೊರೇಟ್ ಕಂಪನಿಗಳು ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಅತಿಥಿಗಳಿಗೆ ಬಿಯರ್ ಮತ್ತು ವೈನ್‌ನಂತಹ ಕಡಿಮೆ ಕಂಟೆಂಟ್ ಆಲ್ಕೋಹಾಲ್ ಪಾನೀಯಗಳನ್ನು ನೀಡಬಹುದು. ಹರಿಯಾಣ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಇಂಥದೊಂದು ಅವಕಾಶ ನೀಡಲಾಗಿದೆ. ಈ ಹಣಕಾಸು ವರ್ಷದ ಹೊಸ ಅಬಕಾರಿ ನೀತಿಯ ಪ್ರಕಾರ, ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಮತ್ತು ಒಂದೇ ಆವರಣದಲ್ಲಿ ಸ್ವಯಂ ಒಡೆತನದ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆದ ಕನಿಷ್ಠ ಒಂದು ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಇಟ್ಟುಕೊಳ್ಳಬಹುದು ಮತ್ತು ಕುಡಿಯಬಹುದು ಎಂದು ಹೇಳಲಾಗಿದೆ.

ಅಲ್ಲದೆ, ಬಿಜೆಪಿ ನೇತೃತ್ವದ ಸರ್ಕಾರ ತನ್ನ ಹೊಸ ನೀತಿಯಡಿ ಪರಿಸರ ಮತ್ತು ಪ್ರಾಣಿ ಕಲ್ಯಾಣಕ್ಕಾಗಿ 400 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಹೊಸ ಅಬಕಾರಿ ನೀತಿಯಡಿ ಮದ್ಯ ಮಾರಾಟಕ್ಕಾಗಿ ಪೆಟ್ ಬಾಟಲಿಗಳ ಬಳಕೆಯನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಕ್ಯಾಬಿನೆಟ್ ಈ ವಾರ ಹೊಸ ಅಬಕಾರಿ ನೀತಿಯನ್ನು ಅನುಮೋದಿಸಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ. ಪರಿಸರ ಮತ್ತು ಪ್ರಾಣಿ ಕಲ್ಯಾಣವನ್ನು ರಕ್ಷಿಸುವ ಸರ್ಕಾರದ ಬದ್ಧತೆಯ ಅಡಿಯಲ್ಲಿ ಹೊಸ ಅಬಕಾರಿ ನೀತಿಯಲ್ಲಿ ರಿಟೇಲ್ ಪರವಾನಗಿ ಶುಲ್ಕವನ್ನು ವಿಧಿಸಲಾಗಿದ್ದು, ಇದರಿಂದ 400 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

ಕಾರ್ಪೊರೇಟ್ ಕಂಪನಿಗಳು ತಮ್ಮ ಕಚೇರಿಗಳಲ್ಲಿ ಬಿಯರ್ ಅಥವಾ ವೈನ್ ಪೂರೈಕೆ ಮಾಡಲು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಕಾರ್ಪೊರೇಟ್ ಕಚೇರಿಗಳಲ್ಲಿ ಮದ್ಯದ ಪರವಾನಿಗೆಯನ್ನು ಪಡೆದುಕೊಳ್ಳುವ ನಿಬಂಧನೆಗಳಿಗೆ ಸಂಬಂಧಿಸಿದಂತೆ, ಕಚೇರಿಯಲ್ಲಿನ ಕ್ಯಾಂಟೀನ್ ಅಥವಾ ಉಪಾಹಾರ ಗೃಹವು ಕನಿಷ್ಠ 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಷ್ಟು ಪ್ರದೇಶವನ್ನು ಹೊಂದಿರಬೇಕು. ಪರವಾನಗಿ ನೀಡುವ ಪ್ರಕ್ರಿಯೆಯು (L-10F) ಬಾರ್ ಪರವಾನಗಿಗಳಿಗೆ ಅನ್ವಯಿಸುವ ನಿಯಮಗಳಡಿಯಲ್ಲಿಯೇ ನಡೆಯುತ್ತದೆ. ಅಬಕಾರಿ ಮತ್ತು ತೆರಿಗೆ ಆಯುಕ್ತರು ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳ ಮೇಲೆ 10 ಲಕ್ಷ ರೂಪಾಯಿ ವಾರ್ಷಿಕ ನಿಗದಿತ ಶುಲ್ಕವನ್ನು ಪಾವತಿಸಿದ ನಂತರ ಪರವಾನಗಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬಿಯರ್ ಮತ್ತು ವೈನ್ ಸೇವನೆಗೆ ಮಾತ್ರ ಪಬ್ ವರ್ಗದ ಪರವಾನಗಿ ಶುಲ್ಕವನ್ನು ಮತ್ತಷ್ಟು ಕಡಿಮೆ ಮಾಡಲಾಗಿದೆ. ಸಗಟು ಪರವಾನಗಿದಾರರಿಂದ ಮದ್ಯದ ಕಳ್ಳತನವನ್ನು ತಡೆಯಲು, ದಂಡದ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಪರವಾನಗಿದಾರರ ವಿವಿಧ ವೇದಿಕೆಗಳಲ್ಲಿ ಮದ್ಯ ಪ್ರಚಾರದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊಸ ನೀತಿಯಲ್ಲಿ, 2023-24ರಲ್ಲಿ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಚಿಲ್ಲರೆ ಮದ್ಯ ಮಾರಾಟಗಳ ಮಿತಿಯನ್ನು 2,500ರಿಂದ 2,400ಕ್ಕೆ ಅನುಕ್ರಮವಾಗಿ ಕಡಿಮೆ ಮಾಡಲಾಗಿದೆ. 2022-23ರಲ್ಲಿ 2,600ರಿಂದ 2,500ಕ್ಕೆ ಇಳಿಕೆಯಾಗಿದೆ. ಹರಿಯಾಣದಲ್ಲಿ 2023-24ರಲ್ಲಿ ಒಟ್ಟು ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳ ಸಂಖ್ಯೆಯನ್ನು 2,500ರಿಂದ 2,400ಕ್ಕೆ ಇಳಿಸಲಾಗಿದೆ. 2022-23ರಲ್ಲಿ ಇದನ್ನು 2,600ರಿಂದ 2,500ಕ್ಕೆ ಇಳಿಸಲಾಗಿತ್ತು.

ಇದನ್ನೂ ಓದಿ : ರಿಯಲ್​ಮಿ Narzo N53; ಅತ್ಯಂತ ತೆಳುವಾದ ಸ್ಮಾರ್ಟ್​ಫೋನ್ ಶೀಘ್ರ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.