ETV Bharat / bharat

ಪ್ರತಿಪಕ್ಷಗಳ ಮೈತ್ರಿಯ ಹೆಸರು ಕಾನೂನು ಬಾಹಿರ ಅಲ್ಲ: ಇಂಡಿಯಾ ರಚನೆಯಿಂದ ಬಿಜೆಪಿ ಬೆದರಿದೆ -ಕಾಂಗ್ರೆಸ್​ ಟೀಕೆ - ಮುಂಬರುವ ಲೋಕಸಭೆ ಚುನಾವಣೆ

ಪ್ರತಿಪಕ್ಷಗಳ ಮೈತ್ರಿಯ ಹೆಸರು ಯಾವುದೇ ಕಾನೂನು ಬಾಹಿರಕ್ಕೆ ಒಳಪಟ್ಟಿಲ್ಲ. ಕೇರಳ ಹೈಕೋರ್ಟ್‌ನ ಜುಲೈ ಆದೇಶವು ರಾಜಕೀಯ ಪಕ್ಷಗಳ ಸಂಘಟನೆಯು ಕೇರಳ ಸೇರಿದಂತೆ ಯಾವುದೇ ಸಂಕ್ಷಿಪ್ತ ರೂಪವನ್ನು ಬಳಸಬಹುದು ಎಂದು ಹೇಳುತ್ತದೆ. ಮೈತ್ರಿಯ ಹೆಸರು ರಚನೆಯ ಹೆಸರೇ ಹೊರತು ಪಕ್ಷವಲ್ಲ. ಪಕ್ಷಗಳನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗುತ್ತದೆ. ಮೈತ್ರಿಯು ಚುನಾವಣಾ ಆಯೋಗ ನಿಯಮಗಳಿಗೆ ಒಳಪಟ್ಟಿಲ್ಲ ಎಂದು ಹೇಳುತ್ತಾರೆ ಕಾಂಗ್ರೆಸ್​ ಮುಖಂಡರು.

Nothing illegal in opposition alliance name, BJP rattled by INDIA, says Congress

author img

By

Published : Jul 29, 2023, 8:22 PM IST

ನವದೆಹಲಿ: ಇತ್ತೀಚೆಗೆ ನೂತನವಾಗಿ ರಚನೆಗೊಂಡ ಪ್ರತಿಪಕ್ಷ 'ಇಂಡಿಯಾ' ಮೈತ್ರಿಕೂಟ ಗುರಿಯಾಗಿಸಿಕೊಂಡಿರುವ ಬಿಜೆಪಿಯನ್ನು ಕಾಂಗ್ರೆಸ್ ಪಕ್ಷ ಶನಿವಾರ ತರಾಟೆಗೆ ತೆಗೆದುಕೊಂಡಿದೆ. 'ಇಂಡಿಯಾ' ಕೂಟ ಯಾವುದೇ ಕಾನೂನು ಅಂಶಗಳನ್ನು ಮೀರಿಲ್ಲ ಎಂದು ಹೇಳಿದೆ.

''ಬಿಜೆಪಿ ನೂತನ ಪ್ರತಿಪಕ್ಷ 'ಇಂಡಿಯಾ' ಒಕ್ಕೂಟವನ್ನು ಗುರಿಯಾಗಿಸಿಕೊಂಡು ಕೆಳಮಟ್ಟದ ಪ್ರಚಾರದಲ್ಲಿ ತೊಡಗಿದೆ. ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಜರ್ಜರಿತಗೊಂಡಿದೆ. ಅವರ ರಾಜಕೀಯ ಒತ್ತಡವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ, 'ಇಂಡಿಯಾ' ಅನ್ನೋದು ಕಾನೂನು ಬಾಹಿರ ಒಕ್ಕೂಟ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿಗರಿಗೆ ಕಾನೂನಿನ ಅರಿವೇ ಇಲ್ಲ. ನಮ್ಮ ಪ್ರತಿಕ್ಷದ ಮೈತ್ರಿಕೂಟ ಯಾವುದೇ ಕಾನೂನು ಬಾಹಿರತೆಗೆ ಒಳಪಟ್ಟಿಲ್ಲ. ಇದೊಂದು ವಿಸ್ತೃತ ಹೆಸರಿನ ಸಂಕ್ಷಿಪ್ತ ರೂಪವಾಗಿದೆ, ಆದರೆ, ಪದವಲ್ಲ. ಅಲ್ಲದೆ, ಇದು 1950ರ ಕಾಯ್ದೆಗೆ ಒಳಪಟ್ಟಿದ್ದು ಯಾವುದೇ ರೀತಿಯ ಲಾಂಛನ ಹಾಗೂ ಹೆಸರುಗಳನ್ನು ಹೊಂದಿಲ್ಲ.'' ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಸುಪ್ರೀಂ ಕೋರ್ಟ್ ವಕೀಲ ವಿವೇಕ್ ಟಂಖಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರಕ್ಕಾಗಿ ಜುಲೈ 18 ರಂದು ಬೆಂಗಳೂರಿನಲ್ಲಿ ಸಭೆ ಸೇರಿದ್ದ 26 ಪಕ್ಷಗಳು ಪ್ರತಿಪಕ್ಷಗಳ ಮೈತ್ರಿಕೂಟವನ್ನು 'ಇಂಡಿಯಾ' ಎಂದು ನಾಮಕರಣ ಮಾಡಿವೆ. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್‌ನ ಸಂಕ್ಷಿಪ್ತ ರೂಪವೇ ಇಂಡಿಯಾ. ಆದರೆ, ಇದನ್ನು ಪ್ರಶ್ನಿಸಿ ಅದೇ ದಿನ, ಬಾಂಬೆ ಹೈಕೋರ್ಟ್ ವಕೀಲ ಹಾಗೂ ಬಿಜೆಪಿ ಮಹಾರಾಷ್ಟ್ರ ಸಾಮಾಜಿಕ ಮಾಧ್ಯಮ ಕಾನೂನು ಮತ್ತು ಸಲಹಾ ವಿಭಾಗದ ಮುಖ್ಯಸ್ಥ ಅಶುತೋಷ್ ಜೆ ದುಬೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮೈತ್ರಿ ಹೆಸರಿಗೆ ತನ್ನ ಆಕ್ಷೇಪಣೆಯನ್ನು ದಾಖಲಿಸಿದ್ದರು.

“ರಾಷ್ಟ್ರದ ಘನತೆಗೆ ಅಗೌರವ ತೋರುವ ನಿಟ್ಟಿನಲ್ಲಿ ಹಾಗೂ ರಾಜಕೀಯ ಲಾಭಕ್ಕಾಗಿ ಇಂಡಿಯಾ ಹೆಸರನ್ನು ಬಳಸುವ ಬಗ್ಗೆ ನಾನು ಭಾರತದ ಚುನಾವಣಾ ಆಯೋಗಕ್ಕೆ ಆಕ್ಷೇಪಣೆಯನ್ನು ದಾಖಲಿಸಿದ್ದೇನೆ. ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ಪೋಷಿಸುವ ಭಾರತದ ಚುನಾವಣಾ ಆಯೋಗದ ಬದ್ಧತೆಯನ್ನು ನಾನು ನಂಬುತ್ತೇನೆ. ಈ ವಿಷಯದಲ್ಲಿ ನಿಮ್ಮ ಮಧ್ಯಸ್ಥಿಕೆಯು ನಮ್ಮ ರಾಷ್ಟ್ರದ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ದೇಶ ನಿಂತಿರುವ ಪ್ರಜಾಸತ್ತಾತ್ಮಕ ತತ್ವಗಳನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ದುಬೆ ಟ್ವೀಟ್ ಸಹ ಮಾಡಿದ್ದಾರೆ.

ಆದರೆ, ಈ ದುಬೆ ಸೇರಿದಂತೆ ಬಿಜೆಪಿಗರಿಗೆ ಕಾನೂನಿನ ಬಗ್ಗೆಯಾಗಲಿ ಅಥವಾ ತೀರ್ಪಿನ ಬಗ್ಗೆ ಆಗಲಿ ಸಾಮಾನ್ಯ ಜ್ಞಾನ ಕೂಡ ಇಲ್ಲ ಎಂದು ಕಾಂಗ್ರೆಸ್ ನಾಯಕ ಪ್ರತಿಕ್ರಿಯಿಸಿದ್ದಾರೆ.

“ಈ ವಿಷಯದಲ್ಲಿ ಕೇರಳ ಹೈಕೋರ್ಟ್‌ನ ಎರಡು ನೇರ ತೀರ್ಪುಗಳಿವೆ. ಒಂದು ಡಿಸೆಂಬರ್‌ನಲ್ಲಿ ಮತ್ತು ಇನ್ನೊಂದು ಜುಲೈನಲ್ಲಿ ಬಂದಿವೆ. ರಾಜಕೀಯ ಪಕ್ಷಗಳ ಸಂಘಟನೆಯು ಕೇರಳ (KERALA) ಸೇರಿದಂತೆ ಯಾವುದೇ ಸಂಕ್ಷಿಪ್ತ ರೂಪವನ್ನು ಬಳಸಬಹುದು ಎಂದು ಜುಲೈ ಆದೇಶವು ಹೇಳುತ್ತದೆ. ಮೈತ್ರಿಯ ಹೆಸರು ಒಕ್ಕೂಟ ರಚನೆಯ ಹೆಸರೇ ಹೊರತು ಅದೊಂದು ಪಕ್ಷವಲ್ಲ. ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗುತ್ತದೆ. ಮೈತ್ರಿಯು ಚುನಾವಣಾ ಆಯೋಗದ ನಿಯಮಗಳಿಗೆ ಒಳಪಡುವುದಿಲ್ಲ. ಅವರು ತಮ್ಮ ಮೈತ್ರಿ ಹೆಸರನ್ನು ಚುನಾವಣಾ ಆಯೋಗದಲ್ಲಿ ಎನ್‌ಡಿಎ ಎಂದು ನೋಂದಾಯಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳನ್ನು ರಾಜಕೀಯವಾಗಿ ಗುರಿಯಾಗಿಸಿಕೊಳ್ಳುವುದಕ್ಕೂ ಮತ್ತು ವಾಸ್ತವ ಸಂಗತಿಗಳೊಂದಿಗೆ ವ್ಯವಹರಿಸುವುದಕ್ಕೂ ವ್ಯತ್ಯಾಸವಿದೆ. ರಾಷ್ಟ್ರೀಯ ಪಕ್ಷವು ತನ್ನ ಜನರಿಗೆ ಸತ್ಯ ಹೇಳಲು ಬಿಡಬೇಕು. ಆದರೆ, ಇಲ್ಲಿ ವಿರುದ್ಧವಾಗುತ್ತಿದೆ. ಇಂಡಿಯಾ ಎಂಬ ಹೆಸರು ಇಟ್ಟಿದ್ದಕ್ಕೆ ವಿನಾ ಕಾರಣ ಹೇಳಿಕೆ ನೀಡುತ್ತಿದ್ದಾರೆ. ಇಂಡಿಯಾ ಭ್ರಷ್ಟಾಚಾರದ ಪರ ಎಂದು ಏಕೆ ಹೇಳುತ್ತಿದ್ದೀರಿ? ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ತೊಡಗಬಹುದು. ಆದರೆ, ಇಂಡಿಯಾ ಎಂದಿಗೂ ಭ್ರಷ್ಟಾಚಾರದ ಪರವಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಟಂಖಾ ಹೇಳಿದ್ದಾರೆ.

ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿ ಅರಿಯಲು ಇಂಫಾಲ್‌ಗೆ ಬಂದಿಳಿದ INDIA ಮೈತ್ರಿಕೂಟದ ನಿಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.