ETV Bharat / bharat

ಈ ಮಾವಿನಹಣ್ಣಿನ ಬೆಲೆ ಬರೋಬ್ಬರಿ 1000 ರೂಪಾಯಿ! - ಮಾವಿನಕಾಯಿಗೆ ಜನರು 500 ರಿಂದ 1,000 ರೂ.

ಕಳೆದ ಬಾರಿ ಮಿಸ್​ ಮಾಡಿಕೊಂಡಿದ್ದ 'ನೂರ್ ಜಹಾನ್ ತಳಿಯ ಮಾವಿನ ಹಣ್ಣು ಈ ಬಾರಿ ಮಿಸ್​ ಆಗೋ ಚಾನ್ಸ್​ ಇಲ್ಲ, ಏಕೆಂದರೆ ಈ ಬಾರಿ ಇದು ಹೆಚ್ಚಿನ ಫಸಲು ಬಿಟ್ಟಿದ್ದು, ಮಾವಿನಹಣ್ಣಿನ ಪ್ರೇಮಿಗಳು ಈಗಾಗಲೇ ಹೆಚ್ಚು ಹಣ ನೀಡಿ 'ನೂರ್ ಜಹಾನ್' ಮಾವಿನಹಣ್ಣುಗಳನ್ನು ಅಡ್ವಾನ್ಸ್​ ಆಗಿ ಕಾಯ್ದಿರಿಸಿದ್ದಾರೆ.

mango
mango
author img

By

Published : Jun 7, 2021, 9:44 PM IST

Updated : Jun 8, 2021, 11:27 AM IST

ಇಂದೋರ್​; 'ಮಾವಿನ ಮಾಲೀಕ' ಎಂದು ಕರೆಯಲ್ಪಡುವ 'ನೂರ್ ಜಹಾನ್' ಮಾವಿನ ತಳಿ ಈ ಬಾರಿ ಉತ್ತಮ ಫಸಲು ಬಿಟ್ಟಿದೆ. ಹೆಚ್ಚು ತೂಕವುಳ್ಳ ಈ ಮಾವಿನಕಾಯಿಗಳನ್ನು ಈಗಾಗಲೇ ಹಣ್ಣಾಗುವ ಮೊದಲೇ ಹೆಚ್ಚಿನ ಬೆಲೆಗೆ ಜನ ಮುಂಗಡ ಬುಕ್ಕಿಂಗ್​ ಮಾಡ್ತಿದ್ದಾರೆ.

ಅಫ್ಘಾನ್ ಮೂಲದ್ದು ಎನ್ನಲಾಗುವ ಮಾವಿನ ತಳಿಯಾದ ನೂರ್ ಜಹಾನ್​​ನ ಕೆಲವು ಮರಗಳು ಮಧ್ಯಪ್ರದೇಶದ ಅಲಿರಾಜ್​​ಪುರ್ ಜಿಲ್ಲೆಯ ಕಟ್ಟಿವಾಡ ಪ್ರದೇಶದಲ್ಲಿ ಕಂಡು ಬರುತ್ತವೆ. ಈ ಪ್ರದೇಶವು ಗುಜರಾತ್ ಪಕ್ಕದಲ್ಲಿದೆ. ಇಂದೋರ್‌ನಿಂದ 250 ಕಿ.ಮೀ ದೂರದಲ್ಲಿರುವ ಕಟ್ಟಿವಾಡಾದ ಮಾವಿನ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್, ತಮ್ಮ ತೋಟದಲ್ಲಿ ಮೂರು ನೂರ್ ಜಹಾನ್ ಮಾವಿನ ಮರಗಳಲ್ಲಿ ಒಟ್ಟು 250 ಹಣ್ಣುಗಳಿವೆ ಎಂದು ಹೇಳಿದ್ದು, ಅವೆಲ್ಲವೂ ಈಗಾಗಲೇ ಹಣ್ಣಾಗುವ ಮೊದಲೇ ಬುಕ್​ ಆಗಿವೆಯಂತೆ.

ನೂರ್ ಜಹಾನ್‌ನ ಒಂದು ಮಾವಿನಕಾಯಿಗೆ ಜನರು 500 ರಿಂದ 1,000 ರೂ. ನೀಡಿ ಈಗಾಗಲೇ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಹೀಗೆ ಕಾಯ್ದಿರಿಸಿದವರಲ್ಲಿ ಮಧ್ಯಪ್ರದೇಶ ಮತ್ತು ನೆರೆಯ ಗುಜರಾತ್‌ನ ಮ್ಯಾಂಗೋ ಪ್ರೇಮಿಗಳೇ ಹೆಚ್ಚಾಗಿದ್ದಾರೆ ಎಂದು ಶಿವರಾಜ್ ಸಿಂಗ್ ಜಾಧವ್ ಹೇಳಿದರು. ಕೋವಿಡ್​​ ಬಿಕ್ಕಟ್ಟು ಈ ತಳಿಯ ಹಣ್ಣಿನ ಮಾರಾಟದ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲವಾದರೂ ಅಲ್ಪ ಪ್ರಮಾಣದ ಪರಿಣಾಮ ಉಂಟು ಮಾಡಿದೆ ಎಂದು ಅವರು ಹೇಳಿದ್ರು. ಒಂದು ನೂರ್​ಜಹಾನ್​ ಹಣ್ಣು ಸುಮಾರು ಎರಡೂವರೆ ಇಂದ ಮೂರು ಕೆಜಿ ತೂಕ ಬರುತ್ತದೆ.

2020 ರಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಈ ನೂರ್​​ಜಹಾನ್​ ಮರಗಳು ಹೂವನ್ನೇ ಬಿಡಲಿಲ್ಲ, ಹೀಗಾಗಿ ನೂರ್​ಜಹಾನ್​ ಪ್ರೇಮಿಗಳು ನಿರಾಸೆ ಅನುಭವಿಸಿದ್ದರು.

Last Updated : Jun 8, 2021, 11:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.