ETV Bharat / bharat

ರೈಲ್ವೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ: 78 ದಿನಗಳ ಬೋನಸ್ ಘೋಷಣೆ - ಭಾರತೀಯ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇಲಾಖೆಯ ನೌಕರರಿಗೆ 78 ದಿನಗಳ ಬೋನಸ್ ​ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ರೈಲ್ವೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ: 78 ದಿನಗಳ ಬೋನಸ್ ಘೋಷಣೆ
Non-gazetted railway employees to get bonus equivalent to 78 days' wages
author img

By PTI

Published : Oct 18, 2023, 4:43 PM IST

Updated : Oct 18, 2023, 5:03 PM IST

ನವದೆಹಲಿ: ಕೇಂದ್ರ ಸರ್ಕಾರ ತನ್ನ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಜೊತೆಗೆ ರೈಲ್ವೆ ಇಲಾಖೆಯ ನೌಕರರಿಗೂ ಖುಷಿ ಸುದ್ದಿ ನೀಡಿದೆ. ರೈಲ್ವೆ ನೌಕರರಿಗೆ ತಮ್ಮ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್​ ಘೋಷಣೆ ಮಾಡಲಾಗಿದೆ. ಇದರ ಪ್ರಯೋಜನವನ್ನು 11.07 ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಅಲ್ಲದ ಸಿಬ್ಬಂದಿ ಪಡೆಯಲಿದ್ದಾರೆ ಎಂದು ಸರ್ಕಾರ ಬುಧವಾರ ಪ್ರಕಟಿಸಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಗೆಜೆಟೆಡ್​ ಅಲ್ಲದ ಎಲ್ಲ ಅರ್ಹ ರೈಲ್ವೆ ಉದ್ಯೋಗಿಗಳಿಗೆ 2022-23ರ ಹಣಕಾಸು ವರ್ಷಕ್ಕೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆಗೆ ಸಂಬಂಧಿಸಿದ ಬೋನಸ್ (Productivity Linked Bonus-PLB) ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ತಿಳಿಸಿದರು.

ಈ ನಿರ್ಧಾರವು ಆರ್‌ಪಿಎಫ್ (ರೈಲ್ವೆ ರಕ್ಷಣಾ ಪಡೆ)​ ಮತ್ತು ಆರ್‌ಪಿಎಸ್‌ಎಫ್ (ರೈಲ್ವೆ ರಕ್ಷಣಾ ವಿಶೇಷ ಪಡೆ) ಸಿಬ್ಬಂದಿಯನ್ನು ಹೊರತುಪಡಿಸಿ ಟ್ರ್ಯಾಕ್​ ನಿರ್ವಾಹಕರು, ಲೋಕೊ ಪೈಲಟ್‌ಗಳು, ರೈಲು ನಿರ್ವಾಹಕರು (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ಟೆಕ್ನಿಷಿಯನ್​ಗಳು, ಟೆಕ್ನಿಷಿಯನ್​ಗಳ ಸಹಾಯಕರು, ಪಾಯಿಂಟ್‌ಮನ್‌ಗಳು, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ಮುಂದುವರೆದು, ಈ ಬೋನಸ್ ಪಾವತಿಯಿಂದ ಬೊಕ್ಕಸಕ್ಕೆ 1,968.87 ಕೋಟಿ ರೂಪಾಯಿ ಹೊರೆಯಾಗಲಿದೆ. ಆದರೆ, ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ, ಕೇಂದ್ರ ಸರ್ಕಾರವು 11,07,346 ರೈಲ್ವೆ ಉದ್ಯೋಗಿಗಳಿಗೆ 1,968.87 ಕೋಟಿ ರೂ.ಗಳ ಬೋನಸ್​ ಪಾವತಿಗೆ ಅನುಮೋದನೆ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದರು.

2022-2023ನೇ ಸಾಲಿನಲ್ಲಿ ರೈಲ್ವೆಯ ಕಾರ್ಯಕ್ಷಮತೆ ಉತ್ತಮವಾಗಿದೆ. ರೈಲ್ವೆ ಇಲಾಖೆಯು 1,509 ಮಿಲಿಯನ್ ಟನ್​ಗಳಷ್ಟು ದಾಖಲೆಯ ಸರಕುಗಳನ್ನು ಲೋಡ್ ಮಾಡಿದೆ. ಸುಮಾರು 650 ಕೋಟಿ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಸರ್ಕಾರದ ಬಂಡವಾಳ ವೆಚ್ಚದ ಒಳಹರಿವು, ಕಾರ್ಯಾಚರಣೆಯಲ್ಲಿನ ದಕ್ಷತೆ ಮತ್ತು ಉತ್ತಮ ತಂತ್ರಜ್ಞಾನದಿಂದಾಗಿ ಮೂಲಸೌಕರ್ಯದಲ್ಲಿನ ಸುಧಾರಣೆಗಳು ದಾಖಲೆಯ ಕಾರ್ಯಕ್ಷಮತೆಗೆ ಕಾರಣವಾಗಿದೆ. ಈಗ ಬೋನಸ್​ ಪಾವತಿಯಿಂದ ರೈಲ್ವೆ ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಂಡು ಕರ್ತವ್ಯ ನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹಬ್ಬದ ಭರ್ಜರಿ ಗಿಫ್ಟ್​​... ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ: ಜುಲೈ 1ರಿಂದಲೇ ಪೂರ್ವಾನ್ವಯ

Last Updated : Oct 18, 2023, 5:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.