ETV Bharat / bharat

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ಗೆ ಕೋವಿಡ್​ ದೃಢ - ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಮೃರ್ತ್ಯ ಸೇನ್​ಗೆ ಕೋವಿಡ್​

ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​ ಅವರಿಗೆ ಕೋವಿಡ್​ ಸೋಂಕು ತಗುಲಿದೆ.

Nobel Laureate economist Amartya Sen news  Amartya Sen tests Covid positive  Amartya sen tour scheduled cancel  ನೊಬೆಲ್ ಪ್ರಶಸ್ತಿ ವಿಜೇತ ಸೇನ್​ಗೆ ಕೋವಿಡ್​ ದೃಢ  ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಮೃರ್ತ್ಯ ಸೇನ್​ಗೆ ಕೋವಿಡ್​ ಅಮರ್ತ್ಯ ಸೇನ್ ಪ್ರವಾಸ ರದ್ದು
ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸೇನ್​ಗೆ ಕೋವಿಡ್​ ದೃಢ
author img

By

Published : Jul 9, 2022, 1:06 PM IST

ಶಾಂತಿನಿಕೇತನ(ಪಶ್ಚಿಮ ಬಂಗಾಳ): ತಮ್ಮ ಪೂರ್ವಜರ ಮನೆಯಲ್ಲಿ ತಂಗಿದ್ದ ಅಮರ್ತ್ಯ ಸೇನ್​ ಅವರಿಗೆ ಕೋವಿಡ್​ ದೃಢಪಟ್ಟಿದೆ. ಅರ್ಥಶಾಸ್ತ್ರಜ್ಞದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾಗಿರುವ ಸೇನ್​ಗೆ ಕೋವಿಡ್​ ಸೌಮ್ಯ ರೋಗಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್​ನಿಂದಾಗಿ ಸತತ ಎರಡು ವರ್ಷಗಳ ಕಾಲ ಅವರು ತಮ್ಮ ಪೂರ್ವಜರ ಮನೆಗೆ ಭೇಟಿ ಕೊಟ್ಟಿರಲಿಲ್ಲ. ಹೀಗಾಗಿ ಜುಲೈ 1 ರಂದು ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗಿದ್ದರು. 88 ವರ್ಷದ ಸೇನ್​ ಅವರಿಗೆ ಸೋಂಕು ತಗುಲಿದೆ ಎಂದು ಶುಕ್ರವಾರ ತಡವಾಗಿ ವರದಿಯಾಗಿದೆ.

ಓದಿ: India COVID report.. ದೇಶದಲ್ಲಿ ಮತ್ತೆ 18,840 ಹೊಸ ಕೇಸ್ ಪತ್ತೆ, ಸೋಂಕಿಗೆ 43 ಮಂದಿ ಬಲಿ

ಸೇನ್​ ಅವರು ಇಂದು ತಮ್ಮ ನಿವಾಸದಿಂದಲೇ ಕೋಲ್ಕತ್ತಾದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ವರ್ಜುವಲ್​ ಆಗಿ ಪಾಲ್ಗೊಳ್ಳಬೇಕಿತ್ತು. ಅಷ್ಟೇ ಅಲ್ಲ, ಪ್ರೊಫೆಸರ್ ಸೇನ್ ಜುಲೈ 10 ರಂದು ಲಂಡನ್‌ಗೆ ತೆರಳಬೇಕಾಗಿತ್ತು. ಆದರೆ ಪರಿಸ್ಥಿತಿ ಹಠಾತ್ ಬದಲಾವಣೆಯಿಂದ ಅವರ ಎಲ್ಲಾ ಪ್ರಯಾಣದ ಯೋಜನೆಗಳನ್ನು ನಿಲ್ಲಸಲಾಗಿದೆ. ವೈದ್ಯರು ನಿತ್ಯ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.