ತಿರುವನಂತಪುರಂ (ಕೇರಳ) : ಭಾರತ ಸರ್ಕಾರವು ಶ್ರೀಲಂಕಾಕ್ಕೆ ಯಾವಾಗಲೂ ಬೆಂಬಲ ನೀಡುತ್ತಿದೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನೆರೆಯ ದೇಶಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ನಿರಾಶ್ರಿತರ ಬಿಕ್ಕಟ್ಟು ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಮೂರು ದಿನಗಳ ಭೇಟಿಗಾಗಿ ರಾಜ್ಯ ರಾಜಧಾನಿಗೆ ಆಗಮಿಸಿದ ನಂತರ ತಿರುವನಂತಪುರಂ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಬೆಂಬಲ ಮತ್ತು ಸಹಾಯ ಮಾಡುತ್ತದೆ. ಆ ದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದ್ದಾರೆ.
ಅಲ್ಲಿ ಇದೀಗ ತಮ್ಮ ಸಮಸ್ಯೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ, ಪರಿಣಾಮ ಅವರು ಏನು ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಸದ್ಯ ನಿರಾಶ್ರಿತರ ಬಿಕ್ಕಟ್ಟು ಇಲ್ಲ ಎಂದು ಸ್ಪಷ್ಟನೆ ನೀಡಿದರು.
ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಭವಿಷ್ಯವನ್ನು ನೀವು ಹೇಗೆ ನೋಡುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ, ಪಕ್ಷದ ಭವಿಷ್ಯವು ದೇಶಾದ್ಯಂತ ತುಂಬಾ ಉತ್ತಮವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಶಿವಸೇನೆಯ ನಿಜವಾದ ಶಾಸಕ ಯಾರು: ಎಲ್ಲರಿಗೂ ನೋಟಿಸ್ ನೀಡಿದ ಶಾಸಕಾಂಗ ಕಾರ್ಯದರ್ಶಿ