ETV Bharat / bharat

ಅಪಪ್ರಚಾರದಿಂದ ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ: ಸೆಲೆಬ್ರಿಟಿಗಳ ಟ್ವೀಟ್​ಗೆ ಅಮಿತ್​ ಶಾ ಕಿಡಿ

ಪ್ರಗತಿ ಸಾಧಿಸಲು ಭಾರತ ಎಂದಿಗೂ ಒಗ್ಗಟ್ಟಾಗಿರುತ್ತದೆ ಹಾಗೂ ಒಟ್ಟಾಗಿಯೇ ನಿಲ್ಲುತ್ತದೆ ಎಂದು ಟ್ವಿಟರ್​ನಲ್ಲಿ ಶಾ ಹೇಳಿದರು.

ಅಮಿತ್ ಶಾ
ಅಮಿತ್ ಶಾ
author img

By

Published : Feb 4, 2021, 4:41 AM IST

Updated : Feb 4, 2021, 6:20 AM IST

ನವದೆಹಲಿ: ಭಾರತದಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರು 70 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಹಾಲಿವುಡ್​ ಗಾಯಕಿ ರಿಹಾನಾ ಸೇರಿದಂತೆ ವಿಶ್ವದ ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಇಂತಹ ಅಪಪ್ರಚಾರಗಳಿಂದ ಭಾರತದ ಐಕ್ಯತೆಯನ್ನು ಒಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಪ್ರಗತಿ ಸಾಧಿಸಲು ಭಾರತ ಎಂದೆಂದಿಗೂ ಒಗ್ಗಟ್ಟಾಗಿರುತ್ತದೆ ಹಾಗೂ ಒಟ್ಟಾಗಿಯೇ ನಿಲ್ಲುತ್ತದೆ ಎಂದು ಟ್ವಿಟರ್​ನಲ್ಲಿ ಶಾ ಹೇಳಿದ್ದಾರೆ.

"ಯಾವುದೇ ಅಪಪ್ರಚಾರ ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ! ಯಾವುದೇ ಅಪಪ್ರಚಾರ ಹೊಸ ಎತ್ತರಕ್ಕೇರುತ್ತಿರುವ ಭಾರತವನ್ನು ತಡೆಯಲು ಸಾಧ್ಯವಿಲ್ಲ! ಅಪಪ್ರಚಾರದಿಂದ ಭಾರತದ ಭವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ, ಅದು ಪ್ರಗತಿಯಿಂದ ಮಾತ್ರ ಸಾಧ್ಯ. ಭಾರತ ಒಟ್ಟಾಗಿ ನಿಂತಿದೆ ಮತ್ತು ಒಟ್ಟಾಗಿಯೇ ಪ್ರಗತಿಪಥದತ್ತ ಸಾಗುತ್ತದೆ" ಎಂದು ಟ್ವೀಟ್​ ಮಾಡಿದ್ದಾರೆ.

ಇದಕ್ಕು ಮೊದಲು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್​ ಸುದೀರ್ಘವಾದ ಟ್ವೀಟ್​ನಲ್ಲಿ" ಸತ್ಯಾಂಶ ತಿಳಿದುಕೊಳ್ಳದೆ ಟ್ವೀಟ್​ ಮಾಡಬಾರದು, ಇಂತಹ ವಿಚಾರಗಳಲ್ಲಿ ಪ್ರತಿಕ್ರಿಯೆ ನೀಡುವ ಮುನ್ನ ಸತ್ಯಾಂಶವೇನು ಎಂಬುದನ್ನು ಪರಿಶೀಲಿಸಬೇಕು. ವಿಚಾರದ ಬಗ್ಗೆ ಸರಿಯಾದ ಗ್ರಹಿಕೆ ರೂಪಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಉದ್ವೇಗಗೊಳಿಸುವ ಹ್ಯಾಷ್‌ಟ್ಯಾಗ್‌ ಮೂಲಕ ಪ್ರತಿಕ್ರಿಯೆ ನೀಡಬಾರದು. ಅಂತಹ ಪ್ರತಿಕ್ರಿಯೆ ನಿಖರವಾಗಿರುವುದಿಲ್ಲ ಎಂದು ತಿಳಿಸಿದ್ದರು.

ಅಲ್ಲದೆ #IndiaTogether , #IndiaAgainstPropaganda ಎಂದ ಹ್ಯಾಶ್​ ಟ್ಯಾಗ್​ಗಳನ್ನು ಟ್ವೀಟ್ ಮಾಡುವ ಮೂಲಕ ಗ್ಲೋಬಲ್​ ಸೆಲೆಬ್ರಿಟಿಗಳಿಗೆ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಿಹಾನಾ ಅಲ್ಲದೆ, ಗಾಯಕರಾದ ಜೈ ಶಾನ್, ಡಾ.ಜ್ಯೂಸ್​, ನೀಲಿ ಚಿತ್ರತಾರೆ ಮಿಯಾ ಖಲೀಫಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಪ್ರತಿಭಟನಾ ಸ್ಥಳದಲ್ಲಿ ಇಂಟರ್​ನೆಟ್ ಸ್ಥಗಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನು ಓದಿ:ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನ ಸೃಷ್ಟಿಸುವವರಿಗೆ ಗಮನ ಕೊಡಬೇಡಿ : ಅಕ್ಷಯ್​-ಅಜಯ್​ ಕರೆ​

Last Updated : Feb 4, 2021, 6:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.