ETV Bharat / bharat

ಸದನದಲ್ಲಿ ಯಾರದೇ ಜಾತಿ, ಧರ್ಮ ಉಲ್ಲೇಖಿಸುವಂತಿಲ್ಲ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚನೆ - ಈಟಿವಿ ಭಾರತ ಕನ್ನಡ

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ ಆರ್ ರೆಡ್ಡಿ ತಮ್ಮ ಜಾತಿಯನ್ನು ಉಲ್ಲೇಖಿಸಿ ಬಳಸಿರುವ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಜನತೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಂಸದರಾಗಿ ಲೋಕಸಭೆಗೆ ಆಯ್ಕೆ ಮಾಡಿಲ್ಲ ಎಂದು ಹೇಳಿದರು.

ಸದನದಲ್ಲಿ ಯಾರದೇ ಜಾತಿ, ಧರ್ಮ ಉಲ್ಲೇಖಿಸುವಂತಿಲ್ಲ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚನೆ
no-one-caste-religion-can-be-mentioned-in-the-house-lok-sabha-speaker-om-birla-instructs
author img

By

Published : Dec 12, 2022, 6:23 PM IST

ನವ ದೆಹಲಿ: ಸಂಸತ್ತಿನಲ್ಲಿ ಯಾವುದೇ ಸದಸ್ಯರ ಜಾತಿ ಮತ್ತು ಧರ್ಮಗಳನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಲ್ಲ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ತಾವು ಕೆಳ ಜಾತಿಗೆ ಸೇರಿದವರಾಗಿರುವುದರಿಂದಲೇ ತಮ್ಮ ಹಿಂದಿ ಭಾಷೆಯ ಪ್ರಾವೀಣ್ಯತೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲ ನಿರ್ದಿಷ್ಟ ಟಿಪ್ಪಣಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಆಕ್ಷೇಪಿಸಿದ ನಂತರ ಸ್ಪೀಕರ್ ಈ ಸೂಚನೆ ನೀಡಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ ಆರ್ ರೆಡ್ಡಿ ತಮ್ಮ ಜಾತಿಯನ್ನು ಉಲ್ಲೇಖಿಸಿ ಬಳಸಿರುವ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಜನತೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಮ್ಮನ್ನು ಸಂಸದರಾಗಿ ಲೋಕಸಭೆಗೆ ಆಯ್ಕೆ ಮಾಡಿಲ್ಲ ಎಂದು ಹೇಳಿದರು. ಯಾರೇ ಆಗಲಿ ಸದನದಲ್ಲಿ ಇಂಥ ಪದಗಳನ್ನು ಬಳಸಬಾರದು, ಇಲ್ಲವಾದರೆ ಅಂಥ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರು.

ಅಲ್ಲದೆ ಕಾಂಗ್ರೆಸ್ ಸಂಸದ ರೆಡ್ಡಿ ತಾವು ಪ್ರಶ್ನೆಯೊಂದನ್ನು ಕೇಳುತ್ತಿರುವಾಗ ಸ್ಪೀಕರ್ ಮಧ್ಯದಲ್ಲಿ ಮಾತನಾಡಕೂಡದು ಎಂದು ಹೇಳಿದ್ದರು. ಸಂಸದರ ಈ ವರ್ತನೆಗೂ ಸ್ಪೀಕರ್ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದ ಸದಸ್ಯರು ಸ್ಪೀಕರ್ ಬಗ್ಗೆ ಇಂಥ ಟೀಕೆಗಳನ್ನು ಎಂದಿಗೂ ಮಾಡಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಸದನದಲ್ಲಿ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಬಿರ್ಲಾ ಸೂಚಿಸಿದರು.

ಇದನ್ನೂ ಓದಿ: ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.