ಲಖಿಂಪುರ (ಉತ್ತರ ಪ್ರದೇಶ) : ಲಖೀಂಪುರ ವೈದ್ಯಕೀಯ ಕಾಲೇಜು ಮತ್ತೆ ವಿವಾದಕ್ಕೆ ಸಿಲುಕಿದೆ. ನೂತನವಾಗಿ ಉದ್ಘಾಟನೆಗೊಂಡ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಹಲವು ಅಹಿತಕರ ಘಟನೆಗಳು ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆಯೇ ಲಖೀಂಪುರ ವೈದ್ಯಕೀಯ ಕಾಲೇಜಿನಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋನಿತ್‌ಪುರ ಜಿಲ್ಲೆಯ ಗಹ್ಪುರ್‌ನ ಪ್ರಾಣೇ ಪಟಗಿರಿ ಅವರು ಮೇ 31ರ ಬೆಳ್ಳಂಬೆಳಗ್ಗೆ ಲಖಿಂಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆರಿಗೆಗೆಂದು ಅವರ ಪತ್ನಿ ಕನ್ಯಾ ಪಟಗಿರಿ ಅವರನ್ನು ದಾಖಲು ಮಾಡಿದ್ದರು. ಗರ್ಭಿಣಿಯ ಚಿಕಿತ್ಸೆಗೆ ವೈದ್ಯರು ಮೊದಲಿನಿಂದಲೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂತಿಮವಾಗಿ ಜೂನ್ 2 ರಂದು ಮಹಿಳೆಗೆ ಸಿಸೇರಿಯನ್ ವಿಧಾನದಲ್ಲಿ ಹೆರಿಗೆ ಮಾಡಲು ಶಸ್ತ್ರಚಿಕಿತ್ಸೆ ಕೋಣೆಗೆ ಕರೆದೊಯ್ಯಲಾಯಿತು. ಈ ಮಧ್ಯೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವಿದ್ಯುತ್ ಸೇವೆಗಳು ಇದ್ದಕ್ಕಿದ್ದಂತೆ ವ್ಯತ್ಯಯಗೊಂಡವು. ನಂತರ ಜನರೇಟರ್‌ನಲ್ಲಿ ಇಂಧನ ಇಲ್ಲದ ಕಾರಣ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ವಿಳಂಬ ಮಾಡಿದರು. ಪರಿಣಾಮ ಮಹಿಳೆ ಹಾಗೂ ಆಕೆಯ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದೆ. ಎಂದು ಮಹಿಳೆಯ ಸಂಬಂಧಿಕರು ಆರೋಪ ಮಾಡಿದ್ದಾರೆ.
ಮೃತ ಮಹಿಳೆಯ ಪತಿ ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಮತ್ತೊಂದೆಡೆ, ಸ್ಥಳೀಯ ಸಂಘಟನೆಗಳು ಕೂಡ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿವೆ. ಘಟನೆಯ ಕುರಿತು ಜಿಲ್ಲಾ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್ನಿಂದ ಜೂ.4 ರಂದು ಶ್ರೀರಂಗಪಟ್ಟಣ ಚಲೋ