ETV Bharat / bharat

ಶಾಲೆಗಳನ್ನು ತೆರೆಯಲು ಆತುರ ಪಡುವ ಅಗತ್ಯವಿಲ್ಲ: ತೆಲಂಗಾಣ ಮುಖ್ಯಮಂತ್ರಿ KCR - ಆನ್‌ಲೈನ್ ತರಗತಿ

ಆಫ್​ಲೈನ್ ತರಗತಿಗಳನ್ನು ಕೆಲವು ದಿನಗಳವರೆಗೆ ಮುಂದೂಡಲು ಮತ್ತು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೂಚಿಸಿದ್ದಾರೆ.

KCR
KCR
author img

By

Published : Jun 26, 2021, 10:52 PM IST

ತೆಲಂಗಾಣ: ಶಾಲೆಗಳನ್ನು ತೆರೆಯುವ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸ್ಪಷ್ಟತೆ ನೀಡಿದ್ದಾರೆ. ಆಫ್​ಲೈನ್ ತರಗತಿಗಳನ್ನು ಕೆಲವು ದಿನಗಳವರೆಗೆ ಮುಂದೂಡಲು ಮತ್ತು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಶಿಕ್ಷಕರ ಸಂಘದ ಪ್ರತಿನಿಧಿಗಳು ಸಿಎಂ ಕೆಸಿಆರ್‌ಗೆ ಸೂಚಿಸಿದ್ದಾರೆ. ದಿನಕ್ಕೆ ಅರ್ಧದಷ್ಟು ಶಿಕ್ಷಕರಿಗೆ ಮಾತ್ರ ಹಾಜರಾಗಲು ಅವಕಾಶ ನೀಡಬೇಕೆಂದು ಕೋರಲಾಯಿತು.

ಈ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಭೌತಿಕ ತರಗತಿಗಳನ್ನು ಮುಂದೂಡಲಾಗುವುದು ಎಂದು ಅವರು ಬಹಿರಂಗಪಡಿಸಿದ್ದಾರೆ. ಜುಲೈ 1ರಿಂದ ಆನ್‌ಲೈನ್‌ನಲ್ಲಿ ಕಲಿಸಲು ಸಿಎಂ ಒಪ್ಪಿದ್ದಾರೆ. ಶಾಲೆಗಳನ್ನು ತೆರೆಯುವ ಬಗ್ಗೆ ಆತುರ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಶಿಕ್ಷಕರ ಸಂಘದ ಪ್ರತಿನಿಧಿಗಳು ಇದಕ್ಕೆ ಒಪ್ಪಿದ್ದು, ಅರ್ಧದಷ್ಟು ಶಿಕ್ಷಕರಿಗೆ ಪ್ರತಿದಿನವೂ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಸಿಎಂ ಒಪ್ಪಿಗೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.