ETV Bharat / bharat

ವಾರ್ಷಿಕ ಬಜೆಟ್ ಮಂಡನೆ ಪಂಚ ರಾಜ್ಯಗಳ ಚುನಾವಣೆಗೆ ಅಡ್ಡಿಯಾಗದು: ಚು.ಆಯೋಗ - ಕೇಂದ್ರ ಬಜೆಟ್ ಬಗ್ಗೆ ಸಿಇಸಿ ಸುಶೀಲ್ ಚಂದ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಮಂಡನೆ ಪಂಚ ರಾಜ್ಯಗಳ ಚುನಾವಣೆಗೆ ಅಡ್ಡಿಯಾಗುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದ್ದಾರೆ.

Chief Election Commissioner Sushil Chandra
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ
author img

By

Published : Jan 9, 2022, 9:08 AM IST

ನವದೆಹಲಿ: ಕೇಂದ್ರ ಬಜೆಟ್ ಇಡೀ ಭಾರತಕ್ಕೆ ಅನ್ವಯಿಸುವಂಥದ್ದು. ಅದು ಕೇವಲ ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಅಲ್ಲ ಎಂದು ತಿಳಿಸಿರುವ ಕೇಂದ್ರ ಚುನಾವಣಾ ಆಯೋಗವು ಫೆ.1 ರಂದು ಬಜೆಟ್ ಮಂಡನೆಯನ್ನು ಮುಂದೂಡುವ ಅಗತ್ಯವಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಚುನಾವಣಾ ಆಯೋಗವು ಬಜೆಟ್ ಮಂಡನೆಯಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ತಿಳಿಸಿದ್ದಾರೆ.

ಫೆ.1 ರಂದು ಕೇಂದ್ರ ಬಜೆಟ್ ಮಂಡನೆಯಾದರೆ, ಅದಕ್ಕೂ ಮೊದಲು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಸಭಾಧ್ಯಕ್ಷರ ಭಾಷಣವು ಚುನಾವಣೆಗೆ ಅಡ್ಡಿಪಡಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಇಸಿ, ಕೇಂದ್ರ ಬಜೆಟ್ ಸಂಸತ್ತಿನ ಮುಂದಿಡಬೇಕಾದ ವಾರ್ಷಿಕ ಹೇಳಿಕೆಯಾಗಿದೆ. ಚುನಾವಣಾ ಆಯೋಗವು ಬಜೆಟ್ ಮಂಡನೆಯಲ್ಲಿ ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ಈ ಐದು ರಾಜ್ಯಗಳಿಗೆ ಸೀಮಿತವಾಗಿರದೆ ಇಡೀ ದೇಶಕ್ಕೆ ಸಂಬಂಧಿಸಿದೆ ಎಂದರು.

ಇದನ್ನೂ ಓದಿ: Assembly Election 2022: ಪಂಚರಾಜ್ಯ ಫೈಟ್.. ಫೆ. 10ರಿಂದ 7 ಹಂತದಲ್ಲಿ ಮತದಾನ, ಮಾರ್ಚ್​ 10ಕ್ಕೆ ರಿಸಲ್ಟ್​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.