ETV Bharat / bharat

4ನೇ ಡೋಸ್ ಈಗಲೇ ಬೇಡ, ಆದ್ರೆ ಮಾಸ್ಕ್​ ಧರಿಸಿ: ಐಎಂಎ - ಐಎಂಎ ಜಂಟಿ ಕಾರ್ಯದರ್ಶಿ

ಹಲವಾರು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಆತಂಕ ಆವರಿಸಿದೆ. ಆದರೆ ಸದ್ಯಕ್ಕೆ ಕೋವಿಡ್​ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಐಎಂಎ ಅಧ್ಯಕ್ಷರು ಹೇಳಿದ್ದಾರೆ.

4ನೇ ಡೋಸ್ ಅಗತ್ಯವಿಲ್ಲ, ಲಸಿಕೆ ಉತ್ತಮವಾಗಿ ಕೆಲಸ ಮಾಡುತ್ತಿವೆ: ಐಎಂಎ
No need for 4th dose, vaccine is working well: IMA
author img

By

Published : Jan 6, 2023, 2:08 PM IST

ನವದೆಹಲಿ: ಕೋವಿಡ್ 19 ರ ಎಲ್ಲಾ ರೂಪಾಂತರಗಳ ವಿರುದ್ಧ ಭಾರತೀಯ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಬಲವಾಗಿ ಪ್ರತಿಪಾದಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗುರುವಾರ ಕೋವಿಡ್ ಸೂಕ್ತ ನಡವಳಿಕೆಯನ್ನು (Covid appropriate behavior) ಅನುಸರಿಸುವಂತೆ ಜನರಿಗೆ ಮನವಿ ಮಾಡಿದೆ. ಸದ್ಯಕ್ಕೆ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೋವಿಡ್‌ನ ಯಾವ ರೂಪಾಂತರವು ಭಾರತದಲ್ಲಿನ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಹಿಂದೆ, ನಾವು ಇತರ ದೇಶಗಳಲ್ಲಿ ತೀವ್ರವಾಗಿದ್ದ ಹಲವು ರೂಪಾಂತರಗಳನ್ನು ನೋಡಿದ್ದೇವೆ. ಆದರೆ ಅವು ಭಾರತದಲ್ಲಿ ತೀವ್ರವಾಗಿ ಕಂಡು ಬಂದಿಲ್ಲ. ಇದು ವೈರಲ್ ಮ್ಯುಟೇಶನ್ ಸ್ಟ್ರೈನ್ ಆಗಿದ್ದು, ಇದು ಯಾವಾಗಲೂ ವಿಕಸನಗೊಳ್ಳುತ್ತಿದೆ ಎಂದು ಐಎಂಎ ಅಧ್ಯಕ್ಷ ಡಾ. ಶರದ್ ಕುಮಾರ್ ಅಗರ್ವಾಲ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಐಎಂಎ ಅಧ್ಯಕ್ಷರಾಗಿ ಅಗರ್ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಅವರು, ಭಾರತೀಯ ಲಸಿಕೆಗಳು ಉತ್ತಮವಾಗಿವೆ. ಇದರಿಂದಾಗಿ ರೂಪಾಂತರಗಳ ತೀವ್ರತೆಯು ಕನಿಷ್ಠವಾಗಿದೆ. ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ಯಾವುದೇ ಸಮಾರಂಭದಲ್ಲಿ ಜನತೆ ಯಾವಾಗಲೂ ಮಾಸ್ಕ್ ಬಳಸಬೇಕು ಮತ್ತು ಯಾರಿಗಾದರೂ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಅವರು ಜನಸಂದಣಿಯ ಸ್ಥಳಗಳಿಂದ ದೂರವಿರಬೇಕು ಎಂದು ಡಾ.ಅಗರ್ವಾಲ್ ತಿಳಿಸಿದರು.

ಕೋವಿಡ್ ಒಂದು ಸಾಂಕ್ರಾಮಿಕ ರೋಗ. ಇದರ ಸೋಂಕು ಖಂಡಿತವಾಗಿಯೂ ಹರಡಬಹುದು. ಆದರೆ, ಪ್ರಸ್ತುತ ಅದು ಎಷ್ಟು ಸಾಂಕ್ರಾಮಿಕವಾಗಿದೆ ಎಂದು ನಮಗೆ ತಿಳಿದಿಲ್ಲ. ಕೋವಿಡ್‌ನ ಹಿಂದಿನ ಎಲ್ಲಾ ಮೂರು ಅಲೆಗಳನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಈಗ ನಾವು ಸುಸಜ್ಜಿತರಾಗಿದ್ದೇವೆ ಮತ್ತು ಎಂಥ ಪರಿಸ್ಥಿತಿ ಎದುರಾದರೂ ನಾವು ನಿಭಾಯಿಸಬಹುದು ಎಂದು ಹೇಳಿದರು.

ಯಾವುದೇ ಸಂಭವನೀಯ ಅಲೆಯನ್ನು ನಿಭಾಯಿಸಲು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧವಾಗಿವೆ. ನಮ್ಮ 4 ಲಕ್ಷ ವೈದ್ಯರು ಎಲ್ಲ ಸಂದರ್ಭಗಳಲ್ಲೂ ಸರ್ಕಾರಕ್ಕೆ ಸಹಾಯ ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹೊಸದಾಗಿ ಅನುಮೋದಿಸಲಾದ ಮೂಗಿನ ಲಸಿಕೆ ಸರಿಯಾದ ದಿಕ್ಕಿನಲ್ಲಿ ಒಂದು ಸೂಕ್ತ ಹೆಜ್ಜೆಯಾಗಿದೆ ಎಂದು ನುಡಿದರು.

ವಿವಿಧ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಉಲ್ಬಣವು ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ ಹಿಂದಿನ ಪ್ರವೃತ್ತಿಗಳನ್ನು ನೋಡಿದರೆ ಭಾರತದಲ್ಲಿ ಪ್ರಕರಣಗಳು ಇದ್ದಕ್ಕಿದ್ದಂತೆ ಸ್ಫೋಟಗೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ ಐಎಂಎ ಜಂಟಿ ಕಾರ್ಯದರ್ಶಿ ಡಾ. ಮುನೀಶ್ ಪ್ರಭಾಕರ್, ಜನರು ಆದಷ್ಟು ಬೇಗ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಳ್ಳಬೇಕು. ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ಮೂರನೇ ಡೋಸ್ ತೆಗೆದುಕೊಳ್ಳಬೇಕು. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಆದರೆ ದೇಶದಲ್ಲಿ H3 ಮತ್ತು M1 ಇನ್ ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಡಾ. ಪ್ರಭಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಏತನ್ಮಧ್ಯೆ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಪ್ರಾರಂಭವಾದ ನಂತರ ಕಳೆದ 11 ದಿನಗಳಲ್ಲಿ 124 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 24 ರಿಂದ 9,05,647 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ ಮತ್ತು 5228 ಅಂತಾರಾಷ್ಟ್ರೀಯ ವಿಮಾನಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್ ಪರೀಕ್ಷೆಗಳಿಗಾಗಿ 19,227 ಸ್ಯಾಂಪಲ್​ ಸಂಗ್ರಹಿಸಲಾಗಿದೆ, ಅದರಲ್ಲಿ 124 ಕೋವಿಡ್ ಪಾಸಿಟಿವ್ ಬಂದಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಎಲ್ಲ 124 ಪ್ರಕರಣಗಳನ್ನು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (WGS) ಗಾಗಿ INSACOG ಗೆ ಕಳುಹಿಸಲಾಗಿದೆ ಮತ್ತು ಇದರಲ್ಲಿ 40 ವರದಿಗಳು ಬಂದಿವೆ. ಇವುಗಳಲ್ಲಿ (XBB.1, XBB.2, ಮತ್ತು XBB.3.4.5 ಸೇರಿದಂತೆ) 14 XBB ರೂಪಾಂತರಗಳಿವೆ ಮತ್ತು ಎರಡು BA5. 2 ರೂಪಾಂತರಗಳಿವೆ. ಒಂಬತ್ತು BQ 1.1, 1.122, 1.1.5, ಒಂದು BF 7.4.1 ರೂಪಾಂತರ, ಒಂದು BB.3 ರೂಪಾಂತರ, ಒಂದು BF 5 ವೇರಿಯಂಟ್ ಇವೆ.

ಇದನ್ನೂ ಓದಿ: ಕೋವಿಡ್ ಬಿಎಫ್-7 ಉಪತಳಿ ನಿಯಂತ್ರಣಕ್ಕೆ ಸರ್ಕಾರ ಸರ್ವ ಸನ್ನದ್ದ: ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.