ETV Bharat / bharat

'370ನೇ ಕಲಂ ರದ್ದು ಕುರಿತಾದ ವಾಟ್ಸ್​ಆ್ಯಪ್ ಚಾಟ್ ಸೋರಿಕೆ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ' - 370ನೇ ಕಲಂ ರದ್ದು ಕುರಿತಾದ ವಾಟ್ಸಾಪ್ ಚಾಟ್ ಸೋರಿಕೆ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ

ಕಲಂ 370 ರದ್ದು ಸೇರಿದಂತೆ ಸೂಕ್ಷ್ಮ ಮಾಹಿತಿಯ ಬಗ್ಗೆ ವಾಟ್ಸ್​ಆ್ಯಪ್​ ಚಾಟ್ ಸೋರಿಕೆಯಾಗಿದೆ ಎಂದು ಸರ್ಕಾರದ ಗಮನಕ್ಕೆ ಬಂದಿಲ್ಲ ಅಂತಾ ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

WhatsApp chat
WhatsApp chat
author img

By

Published : Mar 17, 2021, 9:02 AM IST

ನವದೆಹಲಿ: ಮುಂಬೈ ಪೊಲೀಸರು ಟಿಆರ್‌ಪಿ ಹಗರಣದ ಕುರಿತು ತನಿಖೆ ನಡೆಸುತ್ತಿದ್ದ ವೇಳೆ ಕಲಂ 370 ರದ್ದು ಸೇರಿದಂತೆ ಸೂಕ್ಷ್ಮ ಮಾಹಿತಿಯ ಬಗ್ಗೆ ವಾಟ್ಸ್​ಆ್ಯಪ್​ ಚಾಟ್ ಸೋರಿಕೆಯಾಗಿದೆ ಎಂದು ಸರ್ಕಾರದ ಗಮನಕ್ಕೆ ಬಂದಿಲ್ಲ ಅಂತಾ ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

ಟಿಆರ್‌ಪಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಈ ವರ್ಷದ ಆರಂಭದಲ್ಲಿ ವಾಟ್ಸ್​ಆ್ಯಪ್​ ಸಂಭಾಷಣೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹಾಗಾಗಿ ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಯೇ ಎಂದು ಪ್ರಶ್ನಿಸಲಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ, ಅಂತಹ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.