ಗ್ವಾಲಿಯರ್: 'ಹಿಂದೂಗಳಿಲ್ಲದ ಭಾರತವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳಿಲ್ಲ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತ ಮತ್ತು ಹಿಂದೂಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರ ಮತ್ತು ಅದರ ಮೂಲ ಹಿಂದುತ್ವ. ಹಿಂದೂಗಳು ಭಾರತದಿಂದ ಬೇರ್ಪಡಿಸಲಾಗದವರು ಮತ್ತು ಭಾರತವು ಹಿಂದೂಗಳಿಂದ ಬೇರ್ಪಡಿಸಲಾಗದು ಎಂದು ಹೇಳಿದರು.
ಭಾರತದ ವಿಭಜನೆಯ ಬಗ್ಗೆ ಮಾತನಾಡಿದ ಭಾಗವತ್, "ವಿಭಜನೆಯ ನಂತರ, ಭಾರತ ಒಡೆದು ಪಾಕಿಸ್ತಾನ ರೂಪುಗೊಂಡಿತು. ನಾವು ಹಿಂದೂಗಳು ಎಂಬ ಕಲ್ಪನೆಯನ್ನು ಮರೆತಿದ್ದರಿಂದ ಇದು ಸಂಭವಿಸಿದೆ. ಅಲ್ಲಿನ ಮುಸ್ಲಿಮರು ಇದನ್ನು ಮರೆತಿದ್ದಾರೆ ಎಂದರು.
ಇದನ್ನೂ ಓದಿ: India Covid Report: ದೇಶದಲ್ಲಿ ಹೊಸದಾಗಿ 8,774 ಕೋವಿಡ್ ಕೇಸ್ ಪತ್ತೆ, 621 ಸಾವು