ETV Bharat / bharat

ಹೋಳಿ ಆಚರಣೆಗೆ ಗುಜರಾತ್​ ಸರ್ಕಾರ ನಿರ್ಬಂಧ.. 'ಹೋಲಿಕಾ ದಹನ್'ಗೆ ಅನುಮತಿ

ಗುಜರಾತ್​ನಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, 'ಹೋಳಿ' ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ. ಆದರೆ, ಜನಸಂದಣಿಯ ನಿರ್ಬಂಧದೊಂದಿಗೆ 'ಹೋಲಿಕಾ ದಹನ್' ಧಾರ್ಮಿಕ ಆಚರಣೆ ಮಾಡಬಹುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ.

Deputy Chief Minister Nitin Patel
ಉಪಮುಖ್ಯಮಂತ್ರಿ ನಿತಿನ್ ಪಟೇಲ್
author img

By

Published : Mar 22, 2021, 7:18 AM IST

ಗಾಂಧಿನಗರ್ (ಗುಜರಾತ್): ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ 'ಹೋಳಿ' ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಗುಜರಾತ್ ಸರ್ಕಾರ ಸ್ಪಷ್ಟಪಡಿಸಿದೆ.

'ಹೋಳಿ' ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ. ಆದರೆ, ಜನಸಂದಣಿಯ ನಿರ್ಬಂಧದೊಂದಿಗೆ 'ಹೋಲಿಕಾ ದಹನ್' ಧಾರ್ಮಿಕ ಆಚರಣೆ ಮಾಡಬಹುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಮಾರ್ಚ್ 29ರಂದು ಹೋಳಿ ಮತ್ತು 28ರಂದು ಹೋಲಿಕಾ ದಹನ್ ಆಚರಿಸಲಾಗುತ್ತದೆ.

ಹೋಳಿ ಹಿಂದಿನ ದಿನ ಕೆಟ್ಟದ್ದನ್ನು ತೊಡೆದು ಹಾಕಿ, ಒಳ್ಳೆಯದನ್ನು ಗೆಲ್ಲುವ ಸಂಕೇತದ ಆಚರಣೆಯಾದ 'ಹೋಲಿಕಾ ದಹನ್'ಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಅದೂ ವಸತಿ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿ ಸೀಮಿತ ಸಂಖ್ಯೆಯ ಜನಸಂದಣಿಯ ನಿರ್ಬಂಧದೊಂದಿಗೆ ನಡೆಸಬೇಕು. ಜನರು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಆಡಲು ಅನುಮತಿ ಇಲ್ಲ.

ಸರ್ಕಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು. ಗುಜರಾತ್ ಜನತೆ ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾರೆ ಎಂಬ ಭರವಸೆಯಿದೆ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.

ಓದಿ: ಕೊರೊನಾ ಕಾಟ: ಛತ್ತೀಸ್​ಗಢದಲ್ಲಿ ಶಾಲಾ-ಕಾಲೇಜು ಮತ್ತೆ ಬಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.