ETV Bharat / bharat

ಅಕ್ಕಿ, ಬೇಳೆ, ಮೊಸರು ಸೇರಿ ಈ ಎಲ್ಲ ವಸ್ತುಗಳ ಲೂಸ್​​​​​​ ಮಾರಾಟದ ಮೇಲೆ ಜಿಎಸ್​ಟಿ ಇಲ್ಲ: ಸೀತಾರಾಮನ್ ಟ್ವೀಟ್​​ - Nirmala Sitharaman tweet

ಕಳೆದ ತಿಂಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಗಳ ಹಣಕಾಸು ಸಚಿವರುಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅನೇಕ ಅಗತ್ಯ ವಸ್ತುಗಳ ಜಿಎಸ್​ಟಿ ಹೆಚ್ಚಿಸಲಾಗಿದೆ.

No GST on these food items
No GST on these food items
author img

By

Published : Jul 19, 2022, 6:49 PM IST

Updated : Jul 19, 2022, 7:28 PM IST

ನವದೆಹಲಿ: ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ನಿನ್ನೆಯಿಂದ ಏರಿಕೆಯಾಗಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಚಿಲ್ಲರೆ ಮಾರಾಟ, ಪ್ಯಾಕ್ ಮಾಡದ ಅಥವಾ ಲೇಬಲ್​ ಇಲ್ಲದ ಕೆಲ ಪದಾರ್ಥಗಳನ್ನ ಜಿಎಸ್​​ಟಿಯಿಂದ ಹೊರಗಿಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ಪ್ಯಾಕ್​ ಆದ ಆಹಾರ ಉತ್ಪನ್ನಗಳು ಮತ್ತು ಲೇಬಲ್​ ಮಾಡಿದ ವಸ್ತುಗಳ ಮೇಲೆ ಶೇ. 5ರಷ್ಟು ಜಿಎಸ್​​ಟಿ ವಿಧಿಸಲಾಗಿದೆ. ಬ್ರಾಂಡೆಡ್​ ಕಾಳು, ಧಾನ್ಯ ಮತ್ತು ಹಿಟ್ಟಿನ ಮೇಲೆ ಜಿಎಸ್​​ಟಿ ಅನ್ವಯವಾಗಲಿದೆ ಎಂದು ತಿಳಿಸಿರುವ ನಿರ್ಮಲಾ ಸೀತಾರಾಮನ್​, ಚಿಲ್ಲರೆ ಮಾರಾಟ, ಪ್ಯಾಕ್ ಮಾಡದ ಅಥವಾ ಲೇಬಲ್ ಇಲ್ಲದ ಪದಾರ್ಥಗಳ ಮೇಲೆ ಜಿಎಸ್​​ಟಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • It must also be noted that items specified below in the list, when sold loose, and not pre-packed or pre-labeled, will not attract any GST. (10/14) pic.twitter.com/NM69RbU13I

    — Nirmala Sitharaman (@nsitharaman) July 19, 2022 " class="align-text-top noRightClick twitterSection" data=" ">

ಸರಣಿ ಟ್ವೀಟ್ ಮೂಲಕ ಈ ವಿಷಯ ಬಹಿರಂಗಗೊಳಿಸಿರುವ ಕೇಂದ್ರ ಹಣಕಾಸು ಸಚಿವೆ, ಬ್ರಾಂಡ್​ ರಹಿತ , ಲೇಬಲ್​ ಇಲ್ಲದ ಕಾಳುಗಳು, ಹಿಟ್ಟು ಮತ್ತು ಮೊಸರು, ಲಸ್ಸಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆಹಾರ ಪದಾರ್ಥಗಳ ಮೇಲೆ ಜಿಎಸ್​​ಟಿ ಹೇರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಇದರ ಬೆನ್ನಲ್ಲೇ ಯಾವೆಲ್ಲ ವಸ್ತುಗಳಿಗೆ ಜಿಎಸ್​​ಟಿ ವಿನಾಯ್ತಿ ನೀಡಲಾಗಿದೆ ಎಂಬುದರ ಬಗ್ಗೆ ಕೇಂದ್ರ ಹಣಕಾಸು ಸಚಿವೆ ಟ್ವೀಟ್ ಮಾಡಿದ್ದಾರೆ.

ಜಿಎಸ್​​ಟಿ ಅನ್ವಯವಾಗದ ವಸ್ತುಗಳು(ಬಿಡಿಬಿಡಿಯಾಗಿ ಮಾರಾಟ): ದ್ವಿದಳ ಧಾನ್ಯಗಳು, ಗೋಧಿ, ಓಟ್ಸ್​, ಮೈದಾ, ಅಕ್ಕಿ, ಗೋಧಿ ಹಿಟ್ಟು, ರವಾ, ಕಡಲೆ ಹಿಟ್ಟು, ಮಂಡಕ್ಕಿ, ಮೊಸರು, ಲಸ್ಸಿ ಆದಾಗ್ಯೂ, ರೋಪ್‌ವೇಗಳು ಮತ್ತು ಕೆಲವು ಶಸ್ತ್ರಚಿಕಿತ್ಸಾ ಉಪಕರಣಗಳು, ಸರಕು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆ ದರವನ್ನು ಶೇ.12ರಿಂದ 5ಕ್ಕೆ ಇಳಿಸಲಾಗಿದೆ.

ಇತ್ತೀಚೆಗೆ ಚಂಡೀಗಢದಲ್ಲಿ ಜಿಎಸ್​​ಟಿ ಮಂಡಳಿಯ 27ನೇ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಯಾವೆಲ್ಲ ವಸ್ತುಗಳ ಮೇಲೆ ಜಿಎಸ್​ಟಿ ಏರಿಕೆ ಮಾಡಬೇಕು ಎಂಬುದರ ಕುರಿತಾಗಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿರಿ: ಇಂದಿನಿಂದ ಹೊಸ GST: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಲಿಸ್ಟ್

Last Updated : Jul 19, 2022, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.