ETV Bharat / bharat

4G ಮತ್ತು 5G ಗಿಂತಲೂ 'ಮಾತಾಜಿ' ಮತ್ತು 'ಪಿತಾಜಿ' ಶ್ರೇಷ್ಠ: ಮುಖೇಶ್ ಅಂಬಾನಿ

author img

By

Published : Dec 4, 2022, 12:41 PM IST

ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಯುವಕನೂ 4G ಮತ್ತು 5G ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಈ ಜಗತ್ತಿನಲ್ಲಿ ಮಾತಾಜಿ ಮತ್ತು ಪಿತಾಜಿಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟರು.

mukesh ambani
ಮುಖೇಶ್ ಅಂಬಾನಿ

ಗುಜರಾತ್​: ಗಾಂಧಿನಗರದ ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿಯಲ್ಲಿ ಹಮ್ಮಿಕೊಂಡ ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಬಿಲಿಯನೇರ್ ಮುಖೇಶ್ ಅಂಬಾನಿ ಅವರು, 4G ಮತ್ತು 5G ಗಿಂತಲೂ ಮಾತಾಜಿ ಮತ್ತು ಪಿತಾಜಿ ದೊಡ್ಡವರು ಎಂದು ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದ ಸನ್ನಿವೇಶ ನಡೆಯಿತು.

ದೇಶದಲ್ಲಿ 4G ಮತ್ತು 5G ನೆಟ್‌ವರ್ಕ್‌ಗಳ ಪ್ರಗತಿಯ ಕುರಿತು ಮಾತನಾಡಿದ ಅಂಬಾನಿ, ಯುವಕರಿಗೆ (G/ji) ವ್ಯತ್ಯಾಸದ ಕುರಿತಾದ ಒಂದು ವಿಷಯವನ್ನು ಹೇಳುತ್ತೇನೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ 4G ಮತ್ತು 5G ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ ಈ ಜಗತ್ತಿನಲ್ಲಿ ಮಾತಾಜಿ ಮತ್ತು ಪಿತಾಜಿಗಿಂತ ಶ್ರೇಷ್ಠವಾದದ್ದಿಲ್ಲ. ಅವರು ನಿಮ್ಮ ಶಕ್ತಿಯ ಅತ್ಯಂತ ವಿಶ್ವಾಸಾರ್ಹ ಸ್ತಂಭಗಳಾಗಿದ್ದಾರೆ. ನಿಮ್ಮ ಜೊತೆ ಈಗಲೂ ಇದ್ದಾರೆ, ಯಾವಾಗಲೂ ಇರುತ್ತಾರೆ ಎಂದರು.

"ಇಂದು ಬೆಳಕು ನಿಮ್ಮ ಮೇಲೆ ಬಿದ್ದಿರಬಹುದು. ಆದರೆ, ಕನಸುಗಳಿಗೆ ರೆಕ್ಕೆಗಳಾಗಿ ನಿಂತಿರುವುದು ನಿಮ್ಮ ಪೋಷಕರು ಮತ್ತು ಹಿರಿಯರು. ನೀವು ವೇದಿಕೆಯ ಮೇಲೆ ಬಂದು ಪದವಿ ಪ್ರಮಾಣಪತ್ರ ಸ್ವೀಕರಿಸುವುದನ್ನು ನೋಡಲು ಅವರು ಕಾತುರದಿಂದ ಕಾಯುತ್ತಿದ್ದರು. ಇದು ಅವರ ಬಹುದಿನದ ಕನಸು. ನಿಮ್ಮನ್ನು ಇಲ್ಲಿಗೆ ಕರೆತರಲು ಅವರು ಮಾಡಿದ ಹೋರಾಟಗಳು ಮತ್ತು ತ್ಯಾಗವನ್ನು ಎಂದಿಗೂ ಮರೆಯಬಾರದು" ಎಂದು ರಿಲಯನ್ಸ್ ಅಧ್ಯಕ್ಷರು ಹಿತನುಡಿಗಳನ್ನು ಹೇಳಿದರು.

ಇದನ್ನೂ ಓದಿ: 2047ರ ವೇಳೆಗೆ ಭಾರತ 40 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ : ಮುಖೇಶ್ ಅಂಬಾನಿ

ಈ ಭಾಷಣದ ವಿಡಿಯೋ ಕ್ಲಿಪ್‌ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಂಬಾನಿ ಹಂಚಿಕೊಂಡಿದ್ದು, ಇದನ್ನು ಭಾರತೀಯ ಉದ್ಯಮಿ ಹರ್ಷ್ ಗೋಯೆಂಕಾ ಸೇರಿದಂತೆ ಹಲವರು ಶೇರ್​ ಮತ್ತು ರಿಟ್ವೀಟ್ ಮಾಡಿದ್ದಾರೆ. 4G ಮತ್ತು 5G ಗಿಂತ ಹೆಚ್ಚು ವಿಶ್ವಾಸಾರ್ಹವಾದದ್ದು ಯಾವುದು? ಎಂದು ಮುಕೇಶ್ ಅಂಬಾನಿ ತುಂಬಾ ಚೆನ್ನಾಗಿ ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

640 ಕೋಟಿಯ ಹೊಸ ಐಷಾರಾಮಿ ವಿಲ್ಲಾ ಖರೀದಿಸಿದ ಅಂಬಾನಿ.. ಇದರ ವೈಶಿಷ್ಟ್ಯ ಹೀಗಿದೆ

ಸೊಸೆ ಜೊತೆ ತಿರುಪತಿಗೆ ಭೇಟಿ ನೀಡಿದ ಮುಕೇಶ್​ ಅಂಬಾನಿ: 1.5 ಕೋಟಿ ರೂ. ದೇಣಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.