ರಾಜ್‌ಕೋಟ್: ಗುಜರಾತ್ನ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿರುವ ಬೆಳೆಗಾರರಿಗೆ ಯೋಗ್ಯ ಬೆಲೆ ದೊರಕುತ್ತಿಲ್ಲ. ರಾಜ್ಯದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಈರುಳ್ಳಿಗೆ ಬೆಳೆಗೆ ಖರ್ಚು ಮಾಡಿದಷ್ಟು ಕೈಗೆ ಬಾರದಿದ್ದರಿಂದ ರೈತರು ನಷ್ಟ ಅನುಭವಿಸಿದ್ದಾರೆ.
ನಾಫೆಡ್‌ಗೆ ಈರುಳ್ಳಿ ತಂದು ಮಾರಾಟ ಮಾಡುವ ರೈತ: ಇದರಿಂದಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಈರುಳ್ಳಿ ಮತ್ತು ಆಲೂಗಡ್ಡೆ ರೈತರಿಂದ ಬೆಳೆ ಖರೀದಿಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ನಾಫೆಡ್ ಮೂಲಕ ಈರುಳ್ಳಿ ಖರೀದಿಸುವುದಾಗಿಯೂ ಭರವಸೆಯನ್ನೂ ನೀಡಿದೆ. ಆದರೆ ಕಳೆದ ಎರಡು ದಿನಗಳಿಂದ ರಾಜ್‌ಕೋಟ್ ಯಾರ್ಡ್‌ನಲ್ಲಿ ನಾಫೆಡ್ ಈರುಳ್ಳಿ ಖರೀದಿಸಲು ಶುರು ಮಾಡಿದೆ. ಆದರೆ ಇದೂ ವರೆಗೂ ಯಾವುದೇ ರೈತರು ನಾಫೆಡ್‌ಗೆ ಈರುಳ್ಳಿ ತಂದು ಮಾರಾಟ ಮಾಡಿಲ್ಲ.
ದರ ಹೆಚ್ಚಿಸಿದ ನಾಪೆಡ್: ನಾಫೆಡ್ ಗುರುವಾರ ತನ್ನ ಈರುಳ್ಳಿ ಬೆಲೆ ಕೆಜಿಗೆ 7.92 ರೂಪಾಯಿ ನಿಗದಿ ಮಾಡಿತು. ಇಂದು ನಾಫೆಡ್ ಈರುಳ್ಳಿ ಬೆಲೆಯನ್ನು ಸ್ವಲ್ಪ ಹೆಚ್ಚಿಸಿದೆ. ಈರುಳ್ಳಿ ಬೆಲೆ ಕೆಜಿಗೆ 09.15 ರೂ ದರ ನಿಗದಿ ಮಾಡಿದರೂ, ಎರಡು ದಿನಗಳಿಂದ ರಾಜ್‌ಕೋಟ್‌ನ ಜಿಲ್ಲೆಯಲ್ಲಿ ಒಬ್ಬ ರೈತನೂ ನಾಫೆಡ್‌ಗೆ ಈರುಳ್ಳಿ ತಂದು ಮಾರಾಟ ಮಾಡಿಲ್ಲ.
ಮುಕ್ತ ಮಾರುಕಟ್ಟೆಯತ್ತ ರೈತರು:ಆದರೆ ಇಂದು ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಒಂದು ಕೆಜಿ ಈರುಳ್ಳಿಗೆ 10 ರೂಪಾಯಿ ಸಿಗುತ್ತಿದೆ. ಇದರಿಂದ ರೈತರು ತಮ್ಮ ಈರುಳ್ಳಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ 10 ರಿಂದ 15 ರೂಪಾಯಿ ಬೆಲೆ:ಈ ಸಂಬಂಧ ರಾಜ್‌ಕೋಟ್ ಯಾರ್ಡ್‌ನ ನಾಫೆಡ್‌ನ ಖರೀದಿ ತಂಡದ ವ್ಯವಸ್ಥಾಪಕ ಸಿದ್ಧಾರ್ಥ್ ಸೌಂದರ್ವ ಮಾತನಾಡಿ, ಬೆಳಗ್ಗೆಯಿಂದ 15ರಿಂದ 20 ರೈತರು ಕೇಂದ್ರಕ್ಕೆ ಬಂದಿದ್ದರು. ಎಲ್ಲ ದಾಖಲೆಗಳ ವಿವರವನ್ನೂ ಪಡೆದುಕೊಳ್ಳಲಾಗಿದೆ. ಸದ್ಯ ರೈತರು ಈರುಳ್ಳಿ ತರುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚು ಈರುಳ್ಳಿ ಮಾರಾಟವಾಗುತ್ತಿದೆ. ಇಂದು ನಾಫೆಡ್ ಈರುಳ್ಳಿ ಬೆಲೆ ಕೆಜಿಗೆ 9.50 ರೂಪಾಯಿ ದರ ನಿಗದಿ ಮಾಡಿದರೆ, ರೈತರಿಗೆ ಮುಕ್ತ ಮಾರುಕಟ್ಟೆಯಲ್ಲಿ 10 ರಿಂದ 15 ರೂಪಾಯಿ ಸಿಗುತ್ತಿದೆ ಎಂದು ತಿಳಿಸಿದರು.
ಈರುಳ್ಳಿ ಬೆಲೆ ಏರಿಕೆ: ಕಳೆದ ಎರಡು ದಿನಗಳಿಂದ ಇದ್ದಕ್ಕಿದ್ದಂತೆ ನಾಫೆಡ್ ಈರುಳ್ಳಿ ಸಂಗ್ರಹಣೆ ಆರಂಭಿಸಿದೆ. ಆದರೆ ನಾಫೆಡ್ 1 ಕೆಜಿ ಈರುಳ್ಳಿಗೆ 9.50 ರೂಪಾಯಿ ನಿಗದಿ ಮಾಡಿರುವ ವಿಷಯ ಮಾರುಕಟ್ಟೆಯ ವರ್ತಕರಿಗೆ ತಿಳಿದ ನಂತರ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದೆ. ಇದರಿಂದ ರೈತರು ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ನಾಫೆಡ್ ಖರೀದಿ ಕೇಂದ್ರದತ್ತ ರೈತರು ಸುಳಿಯುತ್ತಿಲ್ಲ ಎಂದು ರಾಜ್‌ಕೋಟ್ ಯಾರ್ಡ್ ಅಧ್ಯಕ್ಷ ಜಯೇಶ್ ಬೋಗ್ರಾ ಮಾಹಿತಿ ನೀಡಿದರು.
ಇದನ್ನೂಓದಿ:40 ಪರ್ಸೆಂಟ್ ಕಮಿಷನ್ ಬಿಜೆಪಿಯನ್ನು 40 ಸೀಟಿಗೆ ಸೀಮಿತಗೊಳಿಸುವುದು ಕಾಂಗ್ರೆಸ್ ಗುರಿ: ಬಿ.ಕೆ.ಹರಿಪ್ರಸಾದ್