ETV Bharat / bharat

ನ್ಯಾಯಮೂರ್ತಿಗಳ ನೇಮಕ ವಿಳಂಬವೇಕೆ?: ಸುಪ್ರೀಂ ಕೋರ್ಟ್‌ನ ನಿ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಸಂದರ್ಶನ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು 'ಈಟಿವಿ ಭಾರತ್‌'ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಹಲವು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

Justice SK Kaul
ಸಂಜಯ್ ಕಿಶನ್ ಕೌಲ್
author img

By PTI

Published : Dec 30, 2023, 9:34 PM IST

ನವದೆಹಲಿ: ನ್ಯಾಯಮೂರ್ತಿಗಳ ನೇಮಕಾತಿ ವಿಳಂಬ ವಿಚಾರದಲ್ಲಿ ಸರ್ಕಾರವು ನ್ಯಾಯಾಂಗದ ವಿರುದ್ಧ ದ್ವೇಷ ಸಾಧಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಬಹುಮತದ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಸಮಸ್ಯೆ ಉಲ್ಬಣಗೊಳ್ಳತ್ತದೆ. ಇದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ಮಾತು.

ಪ್ರಶ್ನೆ: ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳು ನೇಮಿಸುತ್ತಾರೆ. ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರವು ಪ್ರಮುಖ ಪಾತ್ರ ಹೊಂದಿಲ್ಲ. ಅಸ್ತಿತ್ವದಲ್ಲಿರುವ ನ್ಯಾಯಮೂರ್ತಿಗಳ ನೇಮಕ ವ್ಯವಸ್ಥೆಯು ಸಾಕಷ್ಟು ಪಾರದರ್ಶಕವಾಗಿದೆ ಎಂದು ನೀವು ಭಾವಿಸುತ್ತೀರಾ?, ಅಥವಾ ಇನ್ನೂ ಕೆಲ ಕ್ರಮಗಳನ್ನು ತೆಗೆದುಕೊಳ್ಳಬಹುದೇ?.

ಉತ್ತರ: 1950ರಿಂದ 1990ರ ವರೆಗೆ ಕಾರ್ಯನಿರ್ವಹಿಸಿದ ವ್ಯವಸ್ಥೆ ಸೇರಿ ಯಾವುದೇ ವ್ಯವಸ್ಥೆಯು ಪರಿಪೂರ್ಣವಾಗಿಲ್ಲ. ಅದು ತನ್ನದೇ ಆದ ಕೆಲಸ ಮಾಡಿದೆ. ಆದರೆ, ಕೆಲ ಹಂತದಲ್ಲಿ ವ್ಯವಸ್ಥೆ ಬದಲಾಯಿಸುವ ಅಗತ್ಯ ಅನಿಸಿದಾಗ ಕೊಲಿಜಿಯಂ ವ್ಯವಸ್ಥೆಯು ಅಸ್ತಿತ್ವಕ್ಕೆ ಬಂದಿತು. ಇದೇ ವೇಳೆ, ತಮ್ಮ ಪಾತ್ರವನ್ನು ಕಡಿಮೆ ಮಾಡಲಾಗಿದೆ ಎಂಬ ಅಸಮಾಧಾನ ರಾಜಕೀಯ ವಲಯದಲ್ಲಿದೆ. ಆದರೆ, ಬಹುಮತದ ಸರ್ಕಾರಗಳು ಅಧಿಕಾರಕ್ಕೆ ಬರುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಇದನ್ನು ಹೆಚ್ಚು ಪಾರದರ್ಶಕಗೊಳಿಸಲು ಪ್ರಯತ್ನಿಸಲಾಗಿದೆ. ಆದರೆ, ಪಾರದರ್ಶಕತೆ ಗಾಜಿನ ಮನೆಯಲ್ಲಿ ಕುಳಿತು ನೇಮಕಾತಿಗಳನ್ನು ಮಾಡುವುದಲ್ಲ. ಕೆಲವೊಮ್ಮೆ ವ್ಯವಸ್ಥೆಯು (ಕೊಲಿಜಿಯಂ) ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಜನರಿಗೆ ಅರ್ಥವಾಗುವುದಿಲ್ಲ.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡುತ್ತಾರೆ. ಬಳಿಕ ಇತರ ನ್ಯಾಯಮೂರ್ತಿಗಳು ಮತ್ತು ಬಾರ್‌ ಕೌನ್ಸಿಲ್​ನ ಕೆಲವು ಸದಸ್ಯರೊಂದಿಗೆ ಚರ್ಚಿಸಲಾಗುತ್ತದೆ. ಅಲ್ಲದೇ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಗುಪ್ತಚರ ಬ್ಯೂರೋಗಳಿಂದ ಅಭಿಪ್ರಾಯಗಳು ಬರುತ್ತವೆ. ಕೆಲವೊಮ್ಮೆ ದೂರುಗಳನ್ನೂ ಸಲ್ಲಿಸಲಾಗುತ್ತದೆ. ಅವುಗಳನ್ನೂ ಸಂಗ್ರಹಿಸಲಾಗುತ್ತದೆ. ಪ್ರತಿಯೊಬ್ಬರ ಹೇಳಿಕೆ ಮತ್ತು ಅವರ ದೃಷ್ಟಿಕೋನವೇನು ಎಂಬುವುದನ್ನು ಪರಿಶೀಲಿಸಲಾಗುತ್ತದೆ. ನಂತರ ಕೊಲಿಜಿಯಂ ಪರಿಶೀಲನೆ ನಡೆಸುತ್ತದೆ. ಆದ್ದರಿಂದ, ಈ ವ್ಯವಸ್ಥೆಯಲ್ಲಿ ಯಾವ ರೀತಿಯ ಹೆಚ್ಚಿನ ಪಾರದರ್ಶಕತೆ ಅಗತ್ಯವಿದೆ ಎಂದು ನನಗೆ ನಿಜವಾಗಿಯೂ ಅನಿಸುವುದಿಲ್ಲ.

ಪ್ರಶ್ನೆ: ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಿಳಂಬದ ವಿಷಯವನ್ನು ಎತ್ತುವ ಪ್ರಕರಣವನ್ನು ನೀವು ನಿರ್ವಹಿಸಿದ್ದೀರಿ. ಎನ್‌ಜೆಎಸಿಯನ್ನು ರದ್ದು ಮಾಡಿದ್ದರಿಂದ ಸರ್ಕಾರವು ನ್ಯಾಯಾಂಗದ ವಿರುದ್ಧ ದ್ವೇಷ ಸಾಧಿಸುತ್ತಿದೆ?, (2014ರಲ್ಲಿ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರವು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ)ದ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ, ಇದನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿತ್ತು) ನಾಯಮೂರ್ತಿಗಳಿಗೆ ಸಂಬಂಧಿಸಿದ ಎಲ್ಲ ಅಂಶಗಳಲ್ಲಿ (ವರ್ಗಾವಣೆ ಮತ್ತು ನೇಮಕಾತಿ) ವಿಳಂಬವಾಗುತ್ತದೆಯೇ ಎಂದು ನೀವು ಎಂದಾದರೂ ಭಾವಿಸಿದ್ದೀರಾ?.

ಉತ್ತರ: ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಸಾಕಷ್ಟು ಸ್ಪಷ್ಟವಾಗಿದೆ. ನಾವು ಕಾನೂನನ್ನು ಜಾರಿಗೆ ತಂದಾಗ ಅವರು (ನ್ಯಾಯಾಂಗದವರು) ಅದನ್ನು ರದ್ದುಗೊಳಿಸಿದ್ದಾರೆ ಎಂದು ವಿವಿಧ ರಾಜಕೀಯ ವ್ಯವಸ್ಥೆಗಳು ಹೇಳಿಕೆ ನೀಡಿವೆ. ಅದು ಅವರಿಗಿರುವ ಕೊರಗು. ಆದರೆ, ಇದು ಕೆಲವು ಸಮಸ್ಯೆಗಳನ್ನು ಹೊಂದಿತ್ತು. ಕಾನೂನನ್ನು ರೂಪಿಸಿದ ವಿಧಾನ. ಕಾನೂನಿನ ಕುರಿತು ಕೆಲವು ಪೂರ್ವ ಚರ್ಚೆಗಳು ಇದ್ದವು. ಅಲ್ಲಿ ಸ್ವಲ್ಪ ವಿಭಿನ್ನವಾದ ವ್ಯವಸ್ಥೆ ಅಥವಾ ಐದು ಸಮಿತಿಯ ಸಂಯೋಜನೆಯ ಸ್ವರೂಪವನ್ನು ಆರಕ್ಕೆ ಹೆಚ್ಚಿಸಿತ್ತು. ಮೂವರು ನ್ಯಾಯಮೂರ್ತಿಗಳು ಒಂದೇ ದೃಷ್ಟಿಕೋನ ಹೊಂದಿದ್ದರೂ, ಇತರ ಮೂವರು ಬಹುಮತದಿಂದ ಅದನ್ನು ನಿರ್ಬಂಧಿಸಬಹುದು ಎಂಬ ಸನ್ನಿವೇಶವನ್ನು ಅದು ಸೃಷ್ಟಿಸಿತ್ತು. ಸಿಜೆಐ ದೃಷ್ಟಿಕೋನಕ್ಕೆ ಸ್ವಲ್ಪ ಆದ್ಯತೆ ನೀಡಿದ್ದರೆ, ತಕ್ಷಣವೇ ನೇಮಕಾತಿಗಳನ್ನು ಮಾಡಬೇಕಿತ್ತು. ಅದನ್ನು ರದ್ದುಗೊಳಿಸುವಾಗ ಮೂಲಭೂತ ರಚನೆಯ ಸಿದ್ಧಾಂತದ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಲಾಗಿದೆ. ಏಕೆಂದರೆ, ಅದು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಅದನ್ನು ಬದಲಾವಣೆ ಮಾಡಬಹುದಿತ್ತು ಮತ್ತು ಅದು ಆಗಲಿಲ್ಲ.

ಪ್ರಶ್ನೆ: ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಅವರನ್ನು ಒಳಗೊಂಡ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಬೇಕು ಎಂದು ತೀರ್ಪು ನೀಡಿತ್ತು. ಆದರೆ, ಸರ್ಕಾರವು ಈ ತೀರ್ಪಿನ ವಿರುದ್ಧ ಕಾನೂನನ್ನು ತಂದಿದ್ದು, ಅದೇ ಮುಂದುವರಿಯುತ್ತದೆ. ತೀರ್ಪುಗಳಿಗೆ ವಿರುದ್ಧವಾಗಿ ಸರ್ಕಾರ ಹೋಗುವುದನ್ನು ತಡೆಯಲು ಆಗುವುದಿಲ್ಲವೇ?.

ಉತ್ತರ: ಇದು ತೀರ್ಪಿಗೆ ವಿರುದ್ಧವಾಗಿಲ್ಲ. ಇದು ನಿರ್ವಾತವನ್ನು ತುಂಬುತ್ತಿದೆ ಎಂದು ತೀರ್ಪು ಸ್ವತಃ ಊಹಿಸಿದೆ. ಮತ್ತೊಂದೆಡೆ, ಅವರು (ಸರ್ಕಾರ) ಸರಿ ಹಾಗಾದರೆ, ನೀವು ನಿರ್ವಾತವನ್ನು ತುಂಬಿದ್ದೀರಿ. ಈಗ ನಾವು ಕಾನೂನನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಮಹಿಳೆಯರ ರಕ್ಷಣೆಗಾಗಿ ನಿರ್ವಾತವನ್ನು ತುಂಬಲಾಯಿತು ಮತ್ತು ಅದಕ್ಕೆ ಕಾನೂನು ತರಲಾಯಿತು. ಇದೇ ಮಾದರಿ. ಇಲ್ಲಿ ಏನಾಗುತ್ತಿದೆ ಎಂದರೆ, (ನೇಮಕಾತಿಗಾಗಿ ನ್ಯಾಯಮೂರ್ತಿಗಳು) ಹೆಸರುಗಳು ಸಿಲುಕಿಕೊಳ್ಳುತ್ತಿವೆ. ಕೆಲವರನ್ನು ಪರಿಗಣನೆಗೆ ತೆಗೆದುಕೊಂಡರೆ, ಕೆಲವರನ್ನು ತೆಗೆದುಕೊಳ್ಳದೆ. ಇರುವುದರಿಂದ ಹಿರಿತನಕ್ಕೆ ತೊಂದರೆಯಾಗುತ್ತದೆ. ಇಂದಿಗೂ, ನಾಲ್ಕು ಪುನರಾವರ್ತಿತ ಹೆಸರುಗಳು (ಕೊಲಿಜಿಯಂನಿಂದ) ಮತ್ತು 13 ಮೊದಲ ಬಾರಿಗೆ ಹೆಸರುಗಳನ್ನು (ಸರ್ಕಾರದಿಂದ) ಹಿಂತಿರುಗಿಸಲಾಗಿಲ್ಲ. 6 ನ್ಯಾಯಮೂರ್ತಿಗಳ ವರ್ಗಾವಣೆಗಳು ಬಾಕಿ ಇವೆ. ಅವರ ಬಗ್ಗೆ ಸರ್ಕಾರಕ್ಕೆ ಏನು ಆಕ್ಷೇಪವಿದೆಯೋ ಗೊತ್ತಿಲ್ಲ.

ಪ್ರಶ್ನೆ: ಒಳ್ಳೆಯ ಜನರನ್ನು ನ್ಯಾಯಮೂರ್ತಿಗಳನ್ನಾಗಿ ಪಡೆಯುವುದು ನಿಮ್ಮ ಕಾರ್ಯಗಳಲ್ಲಿ ಒಂದಾಗಿತ್ತು (ನೀವು ಸುಪ್ರೀಂ ಕೋರ್ಟ್ ಕೊಲಿಜಿಯಂನ ಭಾಗವಾಗಿದ್ದಾಗ). ನ್ಯಾಯಮೂರ್ತಿಗಳು ಅಭ್ಯರ್ಥಿಯನ್ನು ಆ ಹುದ್ದೆಗೆ ಶಿಫಾರಸು ಮಾಡುವುದು ತಪ್ಪೇ, ಅದು ಸಹಜವಲ್ಲವೇ?.

ಉತ್ತರ: ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ತರ್ಕಬದ್ಧವಾಗಿದೆ. ಅದೊಂದು ಸಲಹಾ ಪ್ರಕ್ರಿಯೆ. ಇದನ್ನು ಮುಖ್ಯಸ್ಥರು (ಸಿಜೆಐ) ಮಾತ್ರ ಮಾಡುತ್ತಾರೆ ಎಂದಲ್ಲ. ನಾನು ಹೈಕೋರ್ಟ್‌ನ ಮುಖ್ಯಸ್ಥನಾಗಿದ್ದಾಗ ಇತರ ನ್ಯಾಯಮೂರ್ತಿಗಳು ಸಲಹೆಗಳನ್ನು ನೀಡುತ್ತಾರೆ. ನಾವು ಅದನ್ನು ಚರ್ಚಿಸುತ್ತೇವೆ. ಆದ್ದರಿಂದ, ಸಲಹೆಗಳನ್ನು ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಹೆಸರು ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅದು ಅರ್ಹತೆಯ ಮೇಲೆ ನಿರ್ಧಾರವಾಗಬೇಕು.

ಪ್ರಶ್ನೆ: ರಾಜಕೀಯ ಸ್ವರೂಪದಲ್ಲಿರುವ ವಿವಾದಗಳ ನ್ಯಾಯಾಲಯಕ್ಕೆ ಬರಬಾರದು. ಅವುಗಳು ನ್ಯಾಯಾಲಯದ ಹೊರಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗಬೇಕು. ಅವು ನ್ಯಾಯಾಂಗಕ್ಕೆ ಹೊರೆಯಾಗುತ್ತವೆ ಎಂದು ನೀವು ಹೇಳಿದ್ದೀರಿ?. ಇಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಬರುತ್ತಲೇ ಇರುತ್ತವೆ. ನ್ಯಾಯಮೂರ್ತಿಗಳಿಗೆ ನೀವು ಏನು ಸಲಹೆ ನೀಡುತ್ತೀರಿ?.

ಉತ್ತರ: ಕಾನೂನಾತ್ಮಕ ಪರಿಣಾಮಗಳನ್ನು ಹೊಂದಿರುವ ಸಮಸ್ಯೆಗಳಿವೆ. ಇವು ರಾಜಕೀಯ ಪಾತ್ರವನ್ನು ಹೊಂದಿರಬಹುದು. ಅವುಗಳನ್ನು ನ್ಯಾಯಾಲಯದಲ್ಲಿ ಚರ್ಚಿಸಬಹುದು. ಕಾನೂನಿಗೆ ಅನುಸಾರವಾಗಿ ಪ್ರಕರಣವನ್ನು ನಿರ್ಧರಿಸಲು ನ್ಯಾಯಮೂರ್ತಿಗಳಿಗೆ ತರಬೇತಿ ನೀಡಲಾಗುತ್ತದೆ.

ಪ್ರಶ್ನೆ: ನಿಮ್ಮ ಬೀಳ್ಕೊಡುಗೆ ವೇಳೆ ನೀವು ನ್ಯಾಯಮೂರ್ತಿಗಳಿಗೆ ಧೈರ್ಯದಿಂದ ಇರಬೇಕು ಎಂದು ಹೇಳಿದ್ದೀರಿ.

ಉತ್ತರ: ಹೌದು, ನಾನು ಕೆಲವೊಮ್ಮೆ ಅಧಿಕಾರಶಾಹಿಯನ್ನು ಟೀಕಿಸುತ್ತೇವೆ. ಏಕೆಂದರೆ ಅನಗತ್ಯ ದಾವೆಗಳು ಹುಟ್ಟಿಕೊಳ್ಳುತ್ತವೆ ಅಥವಾ ಅವರು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರಿಗೆ ಸಾಂವಿಧಾನಿಕ ರಕ್ಷಣೆ ಇಲ್ಲ. ಅದನ್ನು ನ್ಯಾಯಾಲಯಕ್ಕೆ ಎಳೆದು ತಂದು ನಂತರ ಏನಾಗುತ್ತದೆ ಎಂದು ನೋಡುವ ಪ್ರವೃತ್ತಿ ಇದೆ. ನಾನು ಅನೇಕ ರೀತಿಯಲ್ಲಿ ಆಡಳಿತ ನಡೆಸಿದ್ದೇನೆ. ಅಲ್ಲಿ ಸಮಾಜದ ಉದಾರವಾದಿಗಳು ಎಂದು ಕರೆಯಲ್ಪಡುವವರು ನನ್ನ ನಿರ್ಧಾರಗಳನ್ನು ಬೆಂಬಲಿಸುತ್ತಾರೆ. ಇನ್ನೊಂದು ಕಡೆಯುವರಿಗೆ ಅದು ಸಂತೋಷ ನೀಡಿಲ್ಲ. ಹೀಗಾಗಿ ನಾನು ಸರಿಯಾದ ರೀತಿಯಲ್ಲಿ ನನ್ನ ಕಾರ್ಯ ಮಾಡಿದ್ದೇನೆ ಎಂಬ ಖಾತ್ರಿ ಇರಬೇಕು.

ಪ್ರಶ್ನೆ: ಸರಿಯಾದ ಚರ್ಚೆಯಿಲ್ಲದೆ ಶಾಸನವನ್ನು ಅಂಗೀಕರಿಸಬಾರದು ಎಂದು ನ್ಯಾಯಾಲಯಗಳು ಹೇಳುತ್ತವೆ. ಸಿಎಎ (ಇದನ್ನು ವಿರೋಧಿಸಿ 200ಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಕೆ), ಎನ್​ಸಿಆರ್​, 370ನೇ ವಿಧಿಯಂತಹ ಕಾನೂನುಗಳು ನ್ಯಾಯಾಲಯಕ್ಕೆ ಬಂದಿವೆ.

ಉತ್ತರ: ಕೆಲವು ಸಮಸ್ಯೆಗಳಿವೆ ಎಂಬುದು ಖಚಿತವಾಗಿದೆ. ಭಿನ್ನಾಭಿಪ್ರಾಯಗಳಿರುವ ಸಮಾಜವು ಇಂದು ಬಹಳಷ್ಟು ವಿಭಜನೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುತ್ತಿದೆ. ಎಲ್ಲವೂ ಸಮಸ್ಯೆ ಎಂದು ನ್ಯಾಯಾಲಯಕ್ಕೆ ಬರುತ್ತದೆ. ಕಾನೂನು ಜಾರಿ ಮಾಡುವುದು ಸರ್ಕಾರದ ಬಳಿ ಇದೆ. ಬಹುಮತದ ಸರ್ಕಾರವು ಸ್ವಲ್ಪ ಸಮಯದವರೆಗೆ ಆಳ್ವಿಕೆ ನಡೆಸಿದಾಗ ಅವರು ಸಂಸತ್ತನ್ನು ನಿಯಂತ್ರಿಸುತ್ತದೆ. ಏಕೆಂದರೆ, ಅದು ತನ್ನ ದಾರಿ ಹೊಂದಿದ್ದಾರೆ. ಆದರೆ, ಪ್ರತಿಪಕ್ಷವಾಗಿ ನನ್ನ ಪಾತ್ರವನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ. ಏಕೆಂದರೆ, ನಾವು ಸಂಖ್ಯೆಯಲ್ಲಿ ತುಂಬಾ ಕಡಿಮೆ ಇದೆ. ಆದ್ದರಿಂದ ನೀವು (ನ್ಯಾಯಾಲಯ) ಅದನ್ನು ಮಾಡಬೇಕಾಗುತ್ತದೆ.

ಪ್ರಶ್ನೆ: ಕೆಲವೊಮ್ಮೆ ನ್ಯಾಯಾಲಯದ ದೃಷ್ಟಿಕೋನವು ಪ್ರತಿಪಕ್ಷದ ಕಡೆಗೆ ವಾಲಬಹುದು. ಅಂತಹ ಸಮಸ್ಯೆಗಳನ್ನು ನ್ಯಾಯಾಲಯಗಳು ಹೇಗೆ ಪರಿಶೀಲಿಸಬೇಕು?.

ಉತ್ತರ: ಯಾರನ್ನಾದರೂ ಬೆಂಬಲಿಸುವುದು ಅಥವಾ ವಿರೋಧಿಸುವುದು ನ್ಯಾಯಮೂರ್ತಿಗಳ ಕೆಲಸವಲ್ಲ. ಕೆಲವೊಮ್ಮೆ ನ್ಯಾಯಾಲಯವು ತೆಗೆದುಕೊಳ್ಳುವ ದೃಷ್ಟಿಕೋನಗಳು ಆಡಳಿತದೊಂದಿಗೆ ಹೊಂದಬಹುದು, ಕೆಲವೊಮ್ಮೆ ಹೊಂದುವುದಿಲ್ಲ.

ಪ್ರಶ್ನೆ: ಭವಿಷ್ಯದಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ 2.0 ಬಂದರೆ, ನೀವು ಏನು ಹೇಳುತ್ತೀರಿ?.

ಉತ್ತರ: ಎನ್‌ಜೆಎಸಿಯ ಇನ್ನೊಂದು ಆವೃತ್ತಿಯನ್ನು ತರುವುದರಿಂದ ಸರ್ಕಾರವನ್ನು ಯಾವುದೂ ತಡೆಯುವುದಿಲ್ಲ. ಆದರೆ, ಹಿಂದಿನ ಕಾನೂನನ್ನು ಹೊಡೆದು ಹಾಕಲು ಕಾರಣವೇನು ಎಂಬುದನ್ನು ಅವರು ನೋಡಿಕೊಳ್ಳಬೇಕು. ಆದ್ದರಿಂದ ಅದು ಪುನರಾವರ್ತನೆಯಾಗುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.