ETV Bharat / bharat

No Confidence Motion: ಲೋಕಸಭೆಯಲ್ಲಿ ಆಗಸ್ಟ್​​ 8, 9 ರಂದು ಅವಿಶ್ವಾಸ ನಿರ್ಣಯ ಚರ್ಚೆ.. 10 ರಂದು ಪ್ರಧಾನಿ ಮೋದಿ ಉತ್ತರ ನೀಡುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ಮಂಡನೆ ಮಾಡಿದ್ದು, ಈ ಬಗ್ಗೆ ಆಗಸ್ಟ್​ 8 ರಂದು ಚರ್ಚೆ, 10 ಮೋದಿ ಅವರು ಉತ್ತರ ನೀಡುವ ಸಾಧ್ಯತೆ ಇದೆ.

author img

By

Published : Aug 1, 2023, 5:49 PM IST

ಅವಿಶ್ವಾಸ ನಿರ್ಣಯ
ಅವಿಶ್ವಾಸ ನಿರ್ಣಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು, ಈ ಬಗ್ಗೆ ಆಗಸ್ಟ್​ 8 ಮತ್ತು 9 ರಂದು ಲೋಕಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಗಸ್ಟ್​ 10 ರಂದು ಪ್ರಧಾನಿ ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಜುಲೈ 26 ರಂದು ಇಂಡಿಯನ್​ ನ್ಯಾಷನಲ್​ ಡೆವಲಪ್​ಮೆಂಟಲ್​ ಇನ್​ಕ್ಲೂಸಿವ್​ ಅಲಯನ್ಸ್​ (INDIA) ಮೈತ್ರಿಕೂಟದ ಪರವಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಕೋರಿ ಸ್ಪೀಕರ್​ಗೆ ನೋಟಿಸ್ ನೀಡಿದ್ದರು. ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದರು.

ಮಣಿಪುರ ಹಿಂಸಾಚಾರದ ಕುರಿತು ವಿಸ್ತೃತ ಚರ್ಚೆ ಮತ್ತು ಆ ಬಗ್ಗೆ ಪ್ರಧಾನಿಯವರ ಹೇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಅವಿಶ್ವಾಸ ಮಂಡನೆ ಮಾಡಿದ್ದಾರೆ.

ದಿನಾಂಕ ನಿಗದಿ?; ಅವಿಶ್ವಾಸ ಮಂಡನೆ ನಿರ್ಣಯವನ್ನು ಅಂಗೀಕರಿಸಿರುವ ಸ್ಪೀಕರ್ ಓಂ ಬಿರ್ಲಾ ಅವರು ಆಗಸ್ಟ್​ 8, 9 ಕ್ಕೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಿದ್ದಾರೆ. ಇದರ ಬಳಿಕ 10 ರಂದು ಪ್ರಧಾನಿ ಇದರ ಮೇಲೆ ಉತ್ತರ ನೀಡಲಿದ್ದಾರೆ. ಆ ವೇಳೆ ಮಣಿಪುರ ವಿಚಾರ ಕುರಿತು ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ ಹೆಣೆದಿವೆ.

8 ವರ್ಷಗಳ ಬಳಿಕ ಅವಿಶ್ವಾಸ ಮಂಡನೆ: ಇನ್ನು, ಪ್ರಧಾನಿ ಮೋದಿ ವಿರುದ್ಧ ಒಗ್ಗೂಡಿರುವ 26 ವಿಪಕ್ಷಗಳು 8 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರದ ಮೇಲೆ ಅವಿಶ್ವಾಸ ಮಂಡಿಸಿದ್ದಾರೆ. ಕಾಂಗ್ರೆಸ್​ ಸಂಸದ ಗೌರವ್​ ಗೊಗೊಯ್ ಅವರಿಂದ 198 ರ ಅಡಿಯಲ್ಲಿ ಪ್ರಸ್ತಾಪ ಮಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿ ಆರ್ ಬಾಲು ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಆಪ್​ ನಾಯಕರು ಸೇರಿದಂತೆ INDIA ಮೈತ್ರಿಕೂಟದ ಸದಸ್ಯ ಪಕ್ಷಗಳ ಸಂಸದರು ಬೆಂಬಲ ನೀಡಿದ್ದಾರೆ.

ಅವಿಶ್ವಾಸಕ್ಕೆ ಸೋಲಾಗೋದು ಫಿಕ್ಸ್​; 26 ವಿರೋಧ ಪಕ್ಷಗಳ INDIA ಮೈತ್ರಿಕೂಟ ಕೇಂದ್ರ ಸರ್ಕಾರದ ವಿರುದ್ಧ ಪ್ರಸ್ತಾಪಿಸಿರುವ ಅವಿಶ್ವಾಸ ನಿರ್ಣಯಕ್ಕೆ ಅಂಕಿ - ಸಂಖ್ಯೆಗಳ ಪ್ರಕಾರ ಸೋಲಾಗುವುದು ಖಚಿತ. ಆದರೆ, ಗೊತ್ತುವಳಿಯ ಮೇಲೆ ನಡೆಯುವ ಚರ್ಚೆಯ ವೇಳೆ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಅವರನ್ನು ಸಿಲುಕಿಸುವ ಇರಾದೆಯನ್ನು ವಿಪಕ್ಷಗಳು ಹೊಂದಿವೆ.

ಸದ್ಯ ಸಂಸತ್ತಿನ 543 ಸ್ಥಾನಗಳಲ್ಲಿ, 5 ಸ್ಥಾನಗಳು ಖಾಲಿ ಇವೆ. ಇದರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 330 ಕ್ಕೂ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ. ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಮೈತ್ರಿಕೂಟ 140 ಸದಸ್ಯರು ಮತ್ತು 60 ಇತರ ಸದಸ್ಯರು ಇದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್​ ಪ್ರಸ್ತಾಪ, ದಿನಾಂಕ ನಿಗದಿಯೊಂದೇ ಬಾಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.