ಆಗ್ರಾ (ಉತ್ತರ ಪ್ರದೇಶ): ಭಾರತದ ಅತಿ ದೊಡ್ಡ ಹಾಗೂ 374 ವರ್ಷಗಳಷ್ಟು ಹಳೆಯದಾದ ಉತ್ತರ ಬಟೇಶ್ವರದಲ್ಲಿ ನಡೆಯುವ ಪ್ರಾಣಿಗಳ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಆಗ್ರಾ ಜಿಲ್ಲಾಡಳಿತ ಘೋಷಣೆ ಮಾಡಿದೆ.
1646ರಿಂದ ಈ ಜಾತ್ರೆ ನಡೆಯುತ್ತಿದ್ದು, ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಟೇಶ್ವರ ಪ್ರಾಣಿಗಳ ಜಾತ್ರೆಯನ್ನು ಆಯೋಜಿಸಲು ಅನುಮತಿ ನೀಡುವುದಿಲ್ಲ ಎಂದು ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್ ಸಿಂಗ್ ಜಿಲ್ಲಾ ಕೌನ್ಸಿಲ್ಗೆ ಸೂಚಿಸಿದ್ದಾರೆ.
ಪ್ರತಿವರ್ಷ ಲಕ್ಷಾಂತರ ಮಂದಿ ಈ ಐತಿಹಾಸಿಕ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಾರಿ ಜಾತ್ರೆಯನ್ನು ರದ್ದು ಮಾಡಲಾಗಿದೆ. ಇಲ್ಲಿ ಪುರಾಣ ಪ್ರಸಿದ್ಧ ಬಟೇಶ್ವರ ದೇವಾಲಯವೂ ಕೂಡಾ ಇದ್ದು, ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಥಳವೂ ಬಟೇಶ್ವರ ಆಗಿದೆ.