ಮಧ್ಯಪ್ರದೇಶ: ಕಳೆದ 50 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲಾ. ಈಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸಹ ಇಲ್ಲಿ ಸುಳಿದಿಲ್ಲ.
ಅಂದ ಹಾಗೇ ಈ ಹಳ್ಳಿ ಇರುವುದು ಮಧ್ಯಪ್ರದೇಶದಲ್ಲಿ. ರೈಸನ್ ಜಿಲ್ಲೆಯ ಗೌಹರ್‌ಗಂಜ್ ತಹಸಿಲ್ ಪ್ರದೇಶದ ಲಂಕಾ ಎಂಬ ಹೆಸರಿನ ಹಳ್ಳಿಯಿದು. ಸದಾ ಹಸಿರು ಮತ್ತು ನದಿಯಿಂದ ಆವೃತವಾಗಿರುವುದರಿಂದ ಈ ಗ್ರಾಮಕ್ಕೆ ಲಂಕಾ ಎಂದು ಹೆಸರಿಡಲಾಗಿದೆ. ಈ ಲಂಕಾ ಕೊರೊನಾ ಸೋಂಕನ್ನು ರಾವಣನ ರೂಪದಲ್ಲಿ ತನ್ನಿಂದ ದೂರವಿರಿಸಿದೆ. ಹಳ್ಳಿಗರ ಪ್ರಕಾರ, ಹಸಿರು ತುಂಬಿದ ಹಸಿರು ವಾತಾವರಣದಿಂದಾಗಿ, ರೋಗಗಳು ಯಾವುದೇ ಪರಿಣಾಮ ಬೀರುವುದಿಲ್ಲ.
ಇಲ್ಲಿ ಮರಗಳ ಹಸಿರಿನಿಂದಾಗಿ ಪರಿಸರ ಯಾವಾಗಲೂ ಶುದ್ಧವಾಗಿರುತ್ತದೆ. ಅದಕ್ಕಾಗಿಯೇ ಜನರಲ್ಲಿ ಯಾವುದೇ ರೀತಿಯ ರೋಗವಿಲ್ಲ. ಹಳ್ಳಿಯ ಪರಿಸರವನ್ನು ಶುದ್ಧವಾಗಿಸಲು ಗಿಡಗಳನ್ನು ನೆಡಲಾಗಿದೆ. ಈ ಕಾರಣದಿಂದಾಗಿ ಇದರಿಂದ ನಮಗೆ ಯಾವ ರೋಗವು ತಟ್ಟಿಲ್ಲ ಎನ್ನುತ್ತಾರೆ ಸ್ಥಳೀಯರು.