ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ಮಧ್ಯೆ ಕೆಲವೊಂದು ರಾಜ್ಯಗಳಲ್ಲಿ ಕೋವಿಡ್ ವ್ಯಾಕ್ಸಿನ್ ಅಭಾವ ಕೂಡ ಉದ್ಭವವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಹಂಚಿಕೊಂಡಿದೆ.
2021ರ ಅಂತ್ಯದ ವೇಳೆಗೆ ದೇಶದಲ್ಲಿ 200 ಕೋಟಿ ಕೋವಿಡ್ ಡೋಸ್ ಲಭ್ಯವಾಗಲಿದೆ ಎಂದಿದೆ. ಈ ವರ್ಷದ ಆಗಸ್ಟ್ನಿಂದ ಡಿಸೆಂಬರ್ ನಡುವೆ ಇಷ್ಟೊಂದು ವ್ಯಾಕ್ಸಿನ್ ದೇಶದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
-
Overall, 216 crore doses of vaccines will be manufactured in India between August-December - for India and for Indians. There should be no doubt that vaccine will be available for all as we move forward: Dr VK Paul, Member (Health), NITI Aayog#COVID19 pic.twitter.com/T2ELYt2H4q
— ANI (@ANI) May 13, 2021 " class="align-text-top noRightClick twitterSection" data="
">Overall, 216 crore doses of vaccines will be manufactured in India between August-December - for India and for Indians. There should be no doubt that vaccine will be available for all as we move forward: Dr VK Paul, Member (Health), NITI Aayog#COVID19 pic.twitter.com/T2ELYt2H4q
— ANI (@ANI) May 13, 2021Overall, 216 crore doses of vaccines will be manufactured in India between August-December - for India and for Indians. There should be no doubt that vaccine will be available for all as we move forward: Dr VK Paul, Member (Health), NITI Aayog#COVID19 pic.twitter.com/T2ELYt2H4q
— ANI (@ANI) May 13, 2021
ಸೀರಮ್ ಇನ್ಸ್ಸ್ಟಿಟ್ಯೂಪ್ ಆಫ್ ಇಂಡಿಯಾ ತಯಾರಿಸಿದ 75 ಕೋಟಿ ಅಸ್ಟ್ರಾಜೆನಿಕಾ, ಭಾರತ್ ಬಯೋಟೆಕ್ನ 55 ಕೋಟಿ ಡೋಸ್ ಕೊವ್ಯಾಕ್ಸಿನ್ ಸಹ ಇದರಲ್ಲಿ ಸೇರಿವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಮುಂದಿನ ಐದು ತಿಂಗಳಲ್ಲಿ 200 ಕೋಟಿ ಡೋಸ್ ಲಸಿಕೆ ತಯಾರಿಸಲಾಗುವುದು ಎಂದಿರುವ ಅವರು, ಮುಂದಿನ ವರ್ಷ ಈ ಸಂಖ್ಯೆ 300 ಕೋಟಿ ದಾಟಲಿದೆ ಎಂದಿದ್ದಾರೆ.
ಇದನ್ನೂ ಓದಿ: ಅತ್ಯಾಚಾರದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ.. ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಯತ್ನ
ಲಸಿಕೆ ತಯಾರಿಕೆಯಲ್ಲಿ ಭಾರತ ಜಾಗತಿಕ ಕೇಂದ್ರವಾಗಿದ್ದರೂ ಸದ್ಯ ಅನೇಕ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಲಭ್ಯವಾಗುತ್ತಿಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಅನೇಕ ರಾಜ್ಯಗಳು ವಾಗ್ದಾಳಿ ನಡೆಸಿವೆ.
ಮುಂದಿನ ವಾರದಿಂದ ಸ್ಪುಟ್ನಿಕ್ ಲಸಿಕೆ
ಕೋವಿಡ್ ವಿರುದ್ಧ ಹೋರಾಡಲು ಈಗಾಗಲೇ ಭಾರತಕ್ಕೆ ಆಗಮಿಸಿರುವ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಮುಂದಿನ ವಾರದಿಂದ ಮಾರುಕಟ್ಟೆಗೆ ಲಭ್ಯವಿರಲಿದೆ ಎಂದು ಕೇಂದ್ರ ತಿಳಿಸಿದೆ. ಇದೇ ವಿಚಾರವಾಗಿ ಮಾಹಿತಿ ನೀಡಿದ ಡಾ. ವಿ.ಕೆ. ಪೌಲ್, ಸ್ಪುಟ್ನಿಕ್ ಭಾರತಕ್ಕೆ ಬಂದಿದೆ. ಮುಂದಿನ ವಾರ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.