ಕೈಲಾಸ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಕೆಲವೊಂದು ದೇಶಗಳು ಭಾರತದಿಂದ ಹೋಗುವ ಪ್ರವಾಸಿಗರ ಮೇಲೆ ಬ್ಯಾನ್ ಮಾಡಿ ಮಹತ್ವದ ಆದೇಶ ಹೊರ ಹಾಕಿವೆ. ಇದೀಗ ನಿತ್ಯಾನಂದನ ಕೈಲಾಸಕ್ಕೂ ಭಾರತೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
-
KAILASA's #PresidentialMandate
— KAILASA'S SPH JGM HDH Nithyananda Paramashivam (@SriNithyananda) April 20, 2021 " class="align-text-top noRightClick twitterSection" data="
Executive order directly from the #SPH for all the embassies of #KAILASA across the globe. #COVID19 #COVIDSecondWaveInIndia #CoronaSecondWave #Nithyananda #Kailaasa #ExecutiveOrder pic.twitter.com/I2D0ZvffnO
">KAILASA's #PresidentialMandate
— KAILASA'S SPH JGM HDH Nithyananda Paramashivam (@SriNithyananda) April 20, 2021
Executive order directly from the #SPH for all the embassies of #KAILASA across the globe. #COVID19 #COVIDSecondWaveInIndia #CoronaSecondWave #Nithyananda #Kailaasa #ExecutiveOrder pic.twitter.com/I2D0ZvffnOKAILASA's #PresidentialMandate
— KAILASA'S SPH JGM HDH Nithyananda Paramashivam (@SriNithyananda) April 20, 2021
Executive order directly from the #SPH for all the embassies of #KAILASA across the globe. #COVID19 #COVIDSecondWaveInIndia #CoronaSecondWave #Nithyananda #Kailaasa #ExecutiveOrder pic.twitter.com/I2D0ZvffnO
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಬ್ರಿಟನ್, ಅಮೆರಿಕ, ಹಾಂಕಾಂಗ್, ಸಿಂಗಾಪೂರ್ ದೇಶಗಳ ಭಾರತವನ್ನ ಕೆಂಪು ಪಟ್ಟಿಗೆ ಸೇರಿಸಿದ್ದು, ತಮ್ಮ ಪ್ರವಾಸ ಮುಂದೂಡಿಕೆ ಮಾಡುವಂತೆ ಸೂಚನೆ ನೀಡಿದೆ. ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತಮ್ಮ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.
ಇದನ್ನೂ ಓದಿ: ಮೋದಿ ಪ.ಬಂಗಾಳ ಚುನಾವಣಾ ರ್ಯಾಲಿ ರದ್ದು: ಕೋವಿಡ್ ಕುರಿತು ಉನ್ನತ ಮಟ್ಟದ ಸಭೆ!
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ನಿತ್ಯಾನಂದ ಭಾರತದ ಜತೆಗೆ ಬ್ರೆಜಿಲ್, ಯೂರೋಪಿಯನ್, ಮಲೇಷ್ಯಾದಿಂದ ಬರುವವರ ಮೇಲೆ ನಿರ್ಬಂಧ ವಿಧಿಸಿದ್ದಾರೆ. 2019ರಲ್ಲಿ ಭಾರತ ಬಿಟ್ಟು ಕೆಲ ಶಿಷ್ಯರೊಂದಿಗೆ ಪಲಾಯನ ಮಾಡಿರುವ ನಿತ್ಯಾನಂದ ಈಕ್ವಡಾರ್ನ ಬಳಿಯ ದ್ವೀಪದಲ್ಲಿ ಕೈಲಾಸ ಎಂಬ ದೇಶ ಸೃಷ್ಟಿ ಮಾಡಿದ್ದಾನೆ.