ETV Bharat / bharat

ತಮ್ಮನ್ನ 'ನಿಜವಾದ ಸಮಾಜವಾದಿ' ಎಂದಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ನಿತೀಶ್ ಕುಮಾರ್ - Nitesh Kumar thanks PM Modi

ನಾವು 'ಪರಿವಾರವಾ'ದ ಬದಲು ಇಡೀ ಬಿಹಾರವನ್ನು ನಾವು ನಮ್ಮ ಕುಟುಂಬ ಎಂದು ಪರಿಗಣಿಸುತ್ತೇವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ನಿತೀಶ್ ಕುಮಾರ್

author img

By

Published : Feb 14, 2022, 7:47 PM IST

ಪಾಟ್ನಾ (ಬಿಹಾರ): ತಮ್ಮನ್ನು 'ನಿಜವಾದ ಸಮಾಜವಾದಿ' ಎಂದು ಕರೆದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.

ಇತ್ತೀಚೆಗೆ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಉತ್ತರಿಸುವ ವೇಳೆ ಜನತಾದಳ (ಯುನೈಟೆಡ್​)​ ಸಿಎಂ ನಿತೀಶ್ ಕುಮಾರ್ ಅವರನ್ನು ಹೊಗಳಿದ್ದರು. ನಿತೀಶ್​ ಒಬ್ಬ ನಿಜವಾದ ಸಮಾಜವಾದಿ. ಅವರ ಕುಟುಂಬದ ಯಾರೊಬ್ಬರೂ ರಾಜಕೀಯದಲ್ಲಿಲ್ಲ ಎಂದು ಶ್ಲಾಘಿಸಿದ್ದರು.

ಇದನ್ನೂ ಓದಿ: ಗೋರಖ್‌ಪುರ ಅಭ್ಯರ್ಥಿ ಹೆಸರು ಸೂಚಿಸಿದ ಬಳಿಕ ಕಾಂಗ್ರೆಸ್‌ನಲ್ಲಿ ರಾಜೀನಾಮೆಯ ಮಹಾಪರ್ವ..

ಈ ಬಗ್ಗೆ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಅದು ಅವರ ಕೃಪೆ. ಅವರಿಗೆ ಧನ್ಯವಾದ ಅರ್ಪಿಸ ಬಯಸುವೆ. ನಾವು 'ಪರಿವಾರವಾ'ದ (ಕುಟುಂಬ ರಾಜಕಾರಣ) ಬದಲು ಇಡೀ ಬಿಹಾರವನ್ನು ನಾವು ನಮ್ಮ ಕುಟುಂಬ ಎಂದು ಪರಿಗಣಿಸುತ್ತೇವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.