ಮುಂಬೈ: ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಅಂಬಾನಿ ಕುಟುಂಬದ ಭಾವಿ ಸೊಸೆ ರಾಧಿಕಾ ಅವರ ನೃತ್ಯ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ರಾಧಿಕಾ ಭರತನಾಟ್ಯ ಪ್ರದರ್ಶನಕ್ಕೆ ಮನಸೋತರು.
ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಎರಡನೇ ಪುತ್ರ ಅನಂತ್ ಅಂಬಾನಿ ಅವರಿಗೆ ನಿಶ್ಚಿತವಾಗಿರುವ ವಧು ರಾಧಿಕಾ ಮರ್ಚೆಂಟ್ ಭರತನಾಟ್ಯ ರಂಗಪ್ರವೇಶಕ್ಕೆ ಪದಾರ್ಪಣೆ ಮಾಡಿದ್ದಾರೆ. ಮುಂಬೈನ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ಅಂಬಾನಿ, ಮರ್ಚೆಂಟ್ ಅವರ ಕುಟುಂಬ ಸದಸ್ಯರು ಮತ್ತು ಅನೇಕ ಚಲನಚಿತ್ರ, ರಾಜಕೀಯ ಮತ್ತು ವ್ಯಾಪಾರ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.
ಎಲ್ಲ ಅತಿಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಅತಿಥಿಗಳು ರಾಧಿಕಾ ಅವರ ಮೊದಲ ನೃತ್ಯ ಪ್ರದರ್ಶನಕ್ಕೆ ಆಶೀರ್ವದಿಸಿದರು. ಅಂಬಾನಿ ಮತ್ತು ಮರ್ಚೆಂಟ್ ಕುಟುಂಬಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.
ಓದಿ: ಎಲಾನ್ ಮಸ್ಕ್ ವಿಶ್ವದ ಕುಬೇರ; ಮುಖೇಶ್ ಅಂಬಾನಿ ಭಾರತದ ಸಿರಿವಂತ
ರಾಧಿಕಾ ಅವರ ಚೊಚ್ಚಲ ಭರತನಾಟ್ಯ ಪ್ರದರ್ಶನ ವಿಶೇಷವಾಗಿ ಆಕರ್ಷಕವಾಗಿತ್ತು. ವೇದಿಕೆಯ ಮೇಲಿದ್ದ ದೇವರುಗಳು, ಶಿಕ್ಷಕರು ಮತ್ತು ಕಾರ್ಯಕ್ರಮವನ್ನು ವೀಕ್ಷಿಸಿದವರೆಲ್ಲರ ಶುಭಾಶಯಗಳನ್ನು ಕೋರುವುದರೊಂದಿಗೆ ನೃತ್ಯ ಪ್ರದರ್ಶನವು ಪ್ರಾರಂಭವಾಯಿತು. ಬಳಿಕ ಗಣೇಶನ ವಂದನೆಯಿಂದ ಭರತನಾಟ್ಯ ಸಾಗಿತು.
ಬಳಿಕ ಅಚ್ಯುತಮ್ .. ಕೇಶವಂ ಅಂತಾ ಶಬರಿಯು ರಾಮನಿಗಾಗಿ ಕಾಯುವುದು, ಗೋಪಿಯರೊಂದಿಗೆ ಕೃಷ್ಣನ ನೃತ್ಯ, ಬಾಲ ಕೃಷ್ಣನಾಗಿ ಯಶೋದಮ್ಮ ಜೊತೆ ಸಾಗುವ ತುಂಟಾಟಗಳ ನೃತ್ಯ ಪ್ರದರ್ಶನ ನೆರದಿದ್ದವರನ್ನು ಮನರಂಜಿಸಿತು. ಅದರ ನಂತರ, ರಾಧಿಕಾ ಅವರು ಮಾನವರಲ್ಲಿ ಅಂತರ್ಗತವಾಗಿರುವ ಭಾವನೆಗಳಾದ ಕರುಣೆ, ಭಯ, ವೀರತೆ, ಕ್ರೌರ್ಯ, ಬಿಭತ್ಸ, ಅದ್ಭುತ, ಶೃಂಗಾರ ಮತ್ತು ಹಾಸ್ಯಗಳ ತೋರುವ ನೃತ್ಯವನ್ನು ಮಾಡಿ ಎಲ್ಲರ ಗಮನ ಸೆಳೆದರು.
ರಾಧಿಕಾ ಅವರು ಕೊನೆಯಲ್ಲಿ ಪ್ರದರ್ಶಿಸಿದ ಥಿಲ್ಲಾನ ನೃತ್ಯವೂ ವೇದಿಕೆಯಲ್ಲಿ ಅದ್ಭುತವನ್ನು ಸೃಷ್ಟಿಸಿತು. ಪ್ರದರ್ಶನದ ನಂತರ, ಕೆಲವು ನಿಮಿಷಗಳ ಕಾಲ ಚಪ್ಪಾಳೆ ಸುರಿ ಮಳೆಯೇ ಸುರಿಯಿತು. ತಲೆಮಾರುಗಳ ಸಾಂಪ್ರದಾಯಿಕ ನೃತ್ಯವನ್ನು ಮತ್ತಷ್ಟು ಕೊಂಡೊಯ್ಯಲು ಮತ್ತೊಬ್ಬ ಅದ್ಭುತ ಕಲಾವಿದನನ್ನು ಕಂಡುಕೊಂಡಿದ್ದಕ್ಕಾಗಿ ಪ್ರೇಕ್ಷಕರು ಕಲಾಲೋಕವನ್ನು ಶ್ಲಾಘಿಸಿದರು.
ರಾಧಿಕಾ 8 ವರ್ಷಗಳಿಂದ ಭಾವನಾ ಠಾಕ್ರೆಯಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡ ಭರತನಾಟ್ಯದಲ್ಲಿ ಪ್ರವೀಣೆ. ಅವರು ಸಾಂದರ್ಭಿಕ ಪ್ರದರ್ಶನಗಳನ್ನು ಸಹ ನೀಡುತ್ತಾರೆ. ನೀತಾ ಈಗ ಅಂಬಾನಿ ಕುಟುಂಬದ ಎರಡನೇ ಕಲಾವಿದೆಯಾಗಿದ್ದಾರೆ.