ETV Bharat / bharat

ಯುವಜನತೆ ನಿಮ್ಮ ಮನದ ಮಾತಿನಂತೆ ನಡೆದುಕೊಳ್ಳಿ, ನಕಲು ಮಾಡಬೇಡಿ: NIT-Kಯಲ್ಲಿ ಇಸ್ರೋ ಅಧ್ಯಕ್ಷ ಶಿವನ್ - ಸುಹಾಸ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್

ಭಾರತೀಯ ಬಾಹ್ಯಾಕಾಶ ವಲಯದಲ್ಲೂ ಆತ್ಮನಿರ್ಭರ ಭಾರತ್ ಯೋಜನೆಯ ಅಡಿಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗುತ್ತಿದೆ. ಈ ಮೂಲಕ ಬಾಹ್ಯಾಕಾಶ ವಲಯದಲ್ಲಿ ಬದಲಾವಣೆ ತಂದು ಅಲ್ಲಿಂದಲೂ ಕೂಡಾ ಆದಾಯ ಗಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಶಿವನ್ ಹೇಳಿದರು.

NIT-K graduates urged to respond to global challenges
ಅವರವರ ಮನಸ್ಸು ಹೇಳುವಂತೆ ಯುವಜನರು ನಡೆದುಕೊಳ್ಳಿ, ನಕಲು ಮಾಡಬೇಡಿ: ಇಸ್ರೋ ಅಧ್ಯಕ್ಷ ಶಿವನ್
author img

By

Published : Nov 7, 2021, 4:23 PM IST

ಮಂಗಳೂರು: ಪ್ರಸ್ತುತ ಜಾಗತಿಕವಾಗಿ ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳಂತಹ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಎದುರಿಸಲು ಉತ್ತಮ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಸಲಹೆ ನೀಡಿದರು.

ಮಂಗಳೂರಿನ ಸುರತ್ಕಲ್​ನಲ್ಲಿರುವ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NIT-K) ನಡೆದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿ, ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಗತ್ತಿನ ಪ್ರಸ್ತುತ ಸವಾಲುಗಳು ಭೂಮಿಯನ್ನೇ ಬದಲಾಯಿಸಬಹುದು. ಇವು ನಮ್ಮ ಜೀವದ ಮೇಲೂ ಪರಿಣಾಮ ಬೀರಬಹುದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಯು ತನ್ನನ್ನು ತಾನು ಉಳಿಸಿಕೊಳ್ಳಲು ಸವಾಲುಗಳನ್ನು ಎದುರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಟಾರ್ಟಪ್​ಗೆ ಉತ್ತಮ ಅವಕಾಶ:

ಇಂಜಿನಿಯರಿಂಗ್ ಪದವೀಧರರಿಗೆ ಉದ್ಯಮ ಸ್ಥಾಪನೆ ಹಾಗೂ ಸ್ಟಾರ್ಟಪ್​ಗಳ(ನವೋದ್ಯಮ) ಸ್ಥಾಪನೆಗೆ ವಿಫುಲ ಅವಕಾಶಗಳಿವೆ. ದೇಶದಲ್ಲಿ ಸ್ಟಾರ್ಟಪ್​ಗಳ ಬೆಳವಣಿಗೆ ಉತ್ತುಂಗದಲ್ಲಿದೆ. ಸಾಕಷ್ಟು ವೃತ್ತಿಪರರು ಅತಿ ಹೆಚ್ಚು ವೇತನ ನೀಡುವ ಉದ್ಯೋಗಗಳನ್ನು ತೊರೆದು ಸ್ಟಾರ್ಟಪ್ ಬ್ಯುಸಿನೆಸ್​ ಕಡೆಗೆ ವಾಲುತ್ತಿದ್ದಾರೆ. ಇದರೊಂದಿಗೆ ದೇಶಿಯ ಗ್ರಾಹಕರ ಅವಶ್ಯಕತೆಗಳ ಪೂರೈಕೆ ಕಡೆಗೆ ಗಮನಹರಿಸುತ್ತಿದ್ದಾರೆ ಎಂದು ಕೆ.ಶಿವನ್ ಹೇಳಿದ್ದಾರೆ.

'ಸ್ಟೇಸ್'​​ನಲ್ಲೂ ಆತ್ಮನಿರ್ಭರ:

ಭಾರತೀಯ ಬಾಹ್ಯಾಕಾಶ ವಲಯದಲ್ಲೂ ಆತ್ಮನಿರ್ಭರ ಭಾರತ್ ಅಡಿಯಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಈ ಮೂಲಕ ಬಾಹ್ಯಾಕಾಶ ವಲಯದಲ್ಲಿ ಸುಧಾರಣೆಗಳನ್ನು ತಂದು ಅಲ್ಲಿಂದಲೂ ಕೂಡಾ ಆದಾಯ ಗಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ನಿಮ್ಮ ಮನಸ್ಸಿನಂತೆ ನಡೆದುಕೊಳ್ಳಿ:

ಯುವಜನರು ಅವರ ಮನಸ್ಸು ಹೇಳುವ ಮಾತಿನಂತೆ ನಡೆದುಕೊಳ್ಳಬೇಕು. ಬೇರೆಯವರನ್ನು ನಕಲು ಮಾಡಲು ಹೋಗಬಾರದು. ಹೀಗಾದಾಗ ಮಾತ್ರ ಅವರ ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಧರ್ಮೇಂದ್ರ ಪ್ರಧಾನ್ ಶ್ಲಾಘನೆ:

ಇದೇ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ಜಾರಿಗೊಳಿಸಲು NIT-K ಸಮಿತಿಯೊಂದನ್ನು ರಚಿಸಿದೆ. 2021-22ರ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವೊಂದು ಅಂಶಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.

ಗೋಡಂಬಿಯಲ್ಲಿನ ತೇವಾಂಶ ಅಳೆಯುವ ಸಾಧನೆ ಮೆಚ್ಚುಗೆ:

ಇದರ ಜೊತೆಗೆ, ಗೋಡಂಬಿಯಲ್ಲಿನ ತೇವಾಂಶವನ್ನು ಅಳೆಯಲು NIT-K ಅಭಿವೃದ್ಧಿಪಡಿಸಿರುವ ಸಾಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನ್, ಈ ಸಾಧನದಿಂದ ಈ ಪ್ರದೇಶದಲ್ಲಿರುವ ಗೋಡಂಬಿ ಆಧಾರಿತ ಕೈಗಾರಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಪ್ಯಾರಾಲಿಂಪಿಯನ್‌ ಹಾಗು ಜಿಲ್ಲಾಧಿಕಾರಿ ಸುಹಾಸ್​ ಅವರಿಗೆ ಡಿಎಸ್​ಸಿ:

ಈ ಸಮಾರಂಭದಲ್ಲಿ ಸುಮಾರು 1,681 ಮಂದಿ ಪದವಿ ಪ್ರದಾನ ಮಾಡಲಾಗಿದೆ. ಇದರಲ್ಲಿ 120 ಮಂದಿಗೆ ಪಿಎಚ್​ಡಿ, 766 ಮಂದಿಗೆ ಸ್ನಾತಕೋತ್ತರ ಪದವಿ, 795 ಮಂದಿಗೆ ಪದವಿ ನೀಡಲಾಗಿದೆ. ಇದರ ಜೊತೆಗೆ ಈ ಬಾರಿಯ ಪ್ಯಾರಾಲಿಂಪಿಕ್ ಬೆಳ್ಳಿಯ ಪದಕ ವಿಜೇತರಾದ ಉತ್ತರ ಪ್ರದೇಶದ ಗೌತಮಬುದ್ಧ ನಗರ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (Honoris Causa- ಗೌರವ) ನೀಡಲಾಯಿತು.

ಇದನ್ನೂ ಓದಿ: ರಾಜ್ಯಗಳ ಬಳಿ ಇನ್ನೂ 15 ಕೋಟಿ ಕೋವಿಡ್ ಲಸಿಕೆ ಉಳಿದಿದೆ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.