ETV Bharat / bharat

ಜಿ20 ಶೃಂಗಸಭೆ: ಅಮೆರಿಕ​ ಹಣಕಾಸು ಸಚಿವರ ಜೊತೆ ನಿರ್ಮಲಾ ಸೀತಾರಾಮನ್ ಸಭೆ​ - ಈಟಿವಿ ಭಾರತ ಕನ್ನಡ

ಜಿ20 ಶೃಂಗಸಭೆ- ಅಮೆರಿಕ​ ಹಣಕಾಸು ಕಾರ್ಯದರ್ಶಿ ಜಾನೆಟ್​ ಯೆಲೆನ್ ಜೊತೆ ನಿರ್ಮಲಾ ಸೀತಾರಾಮನ್ ಸಭೆ ​- ಮಹತ್ವದ ಚರ್ಚೆ

Nirmala Sitharaman
ಜಿ20 ಶೃಂಗಸಭೆ
author img

By

Published : Feb 23, 2023, 2:32 PM IST

ಬೆಂಗಳೂರು: ಬೆಂಗಳೂರಿನಲ್ಲಿ ಫೆಬ್ರವರಿ 24, ಶುಕ್ರವಾರದಿಂದ ನಡೆಯಲಿರುವ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್​ ಗವರ್ನರ್​ಗಳ ಸಭೆಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಅಮೆರಿಕ​ ಹಣಕಾಸು ಕಾರ್ಯದರ್ಶಿ ಜಾನೆಟ್​ ಯೆಲೆನ್​ ಅವರನ್ನು ಇಂದು ಭೇಟಿಯಾದರು. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಜಿ20 ಫೈನಾನ್ಸ್​ ಟ್ರ್ಯಾಕ್​ ಆದ್ಯತೆಗಳ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್​ಗಳನ್ನು ಬಲಪಡಿಸುವ, ಜಾಗತಿಕ ಸಾಲದ ದೋಷಗಳು, ಕ್ರಿಪ್ಟೋ ಸ್ವತ್ತುಗಳು ಮತ್ತು ಆರೋಗ್ಯ ಈ ಕುರಿತು ತಮ್ಮ ದೃಷ್ಟಿಕೋನದಲ್ಲಿ ಚರ್ಚಿಸಿದರು.

ಕೋವಿಡ್​ 19 ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳನ್ನು ಮರೆಯಬಾರದು ಮತ್ತು ಭವಿಷ್ಯದಲ್ಲಿ ಈ ರೀತಿಯ ಆಘಾತಗಳು ಉಂಟಾದಲ್ಲಿ ಅದಕ್ಕಾಗಿ ನಾವು ಎಲ್ಲ ರೀತಿಯಲ್ಲೂ ಸನ್ನದ್ಧರಾಗುವ ಅವಶ್ಯಕತೆಯಿದೆ ಎಂದು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ಹಣಕಾಸು ಇಲಾಖೆ ಟ್ವೀಟ್​ ಮಾಡಿದೆ. ಭಾರತದ ಜಿ20 ಪ್ರೆಸಿಡೆನ್ಸಿ ಅಡಿ ಎರಡನೇ ಹಣಕಾಸು ಮತ್ತು ಕೇಂದ್ರ ಬ್ಯಾಂಕ್​ ಡೆಪ್ಯೂಟೀಸ್​ ಸಭೆ ಬೆಂಗಳೂರಿನಲ್ಲಿ ಬುಧವಾರದಿಂದ ಪ್ರಾರಂಭವಾಗಿದೆ. ಕ್ರಿಪ್ಟೋ ಸ್ವತ್ತುಗಳ ನೀತಿ ಮಾರ್ಗ, ಸಾರ್ವಜನಿಕ ಮೂಲಸೌಕರ್ಯದ ವಿಚಾರ ಸಂಕಿರಣ ಇಂದು ಚರ್ಚಿಸಲಾಗುವ ವಿಷಯಗಳ ಪಟ್ಟಿಯಲ್ಲಿ ಸೇರಿವೆ.

ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ.. ಜಿ20 ಇಂಡಿಯಾ ಎನರ್ಜಿ ವೀಕ್​ಗೆ ಚಾಲನೆ

ನಾಳೆಯಿಂದ ಎರಡು ದಿನಗಳ ಕಾಲ ಅಂದರೆ ಫೆಬ್ರವರಿ 24 ಮತ್ತು 25 ರಂದು ಮೊದಲ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್​ ಗವರ್ನರ್​ಗಳ ಸಭೆ ನಡೆಯಲಿದೆ. ಸೀತಾರಾಮನ್​ ಮತ್ತು ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​ ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ 20 ಇಂಡಿಯಾದ ಫೈನಾನ್ಸ್​ ಟ್ರ್ಯಾಕ್​ ಆದ್ಯತೆಗಳ ಅಡಿ ಜಿ20 ಎಫ್​ಎಂಸಿಬಿಜಿ ಚರ್ಚೆಗಳನ್ನು ನಡೆಸಲಿದ್ದಾರೆ.

ಜಾಗತಿಕ ಆರ್ಥಿಕತೆ, ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಸುಸ್ಥಿರ ಹಣಕಾಸು, ಮೂಲ ಸೌಕರ್ಯ, ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ, ಹಣಕಾಸು ವಲಯದ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಮೊದಲ ಜಿ-20 ಸಭೆಗಾಗಿ ಸುಮಾರು 500 ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹಣಕಾಸು ಮಂತ್ರಿಗಳು, ಜಿ20 ಕೇಂದ್ರ ಬ್ಯಾಂಕ್​ ಗವರ್ನರ್​ಗಳು, ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜಿ20 ಸಭೆಯಲ್ಲಿ ಭಾಗವಹಿಸಲಿರುವ ದೇಶಗಳು: ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್​, ಕೆನಡಾ, ಚೀನಾ, ಪ್ರಾನ್ಸ್​, ಜರ್ಮನಿ, ಇಂಡೋನೇಷ್ಯಾ, ಜಪಾನ್​, ಇಟಲಿ, ಸೌತ್​ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್​ ಆಫ್ರಿಕಾ, ಟರ್ಕಿ, ಬ್ರಿಟನ್​, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಇವು ಜಿ20 ಗುಂಪಿನಲ್ಲಿರುವ ದೇಶಗಳು. ಈ ಬಾರಿ ಜಿ-20 ಸಭೆಗೆ 9 ದೇಶಗಳು ಸೇರ್ಪಡೆಯಾಗಿದೆ. ಬಾಂಗ್ಲಾದೇಶ, ಈಜಿಪ್ಟ್​, ಮಾರಿಷನ್, ನೆದರ್​ ಲೆಂಡ್ಸ್​, ನೈಜೀರಿಯಾ, ಓಮನ್​, ಸಿಂಗಾಪುರ, ಯುಎಇ ಮತ್ತು ಸ್ಪೇನ್​ ದೇಶಗಳು ವಿಶೇಷ ಆಹ್ವಾನ ಪಡೆದಿವೆ.

ಇದನ್ನೂ ಓದಿ: ಜಿ20 ದೇಶಗಳ ಪ್ರಸ್ತುತ ಆರ್ಥಿಕತೆಗೆ ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ ಅಗತ್ಯ: ಪ್ರಹ್ಲಾದ್ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.