ನವದೆಹಲಿ: ಕೊರೊನಾ ಮೂರನೇ ಅಲೆಯ ಮಧ್ಯೆ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೊರೊನಾದಿಂದ ತಗ್ಗಿರುವ ಆರ್ಥಿಕತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಉತ್ತೇಜನ ನೀಡುತ್ತದೇಯೇ ಎಂಬ ಕುತೂಹಲ ಮೂಡಿದೆ.
ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಎಲ್ಲರ ಚಿತ್ತ ಅವರತ್ತ ನೆಟ್ಟಿದೆ. ಕಳೆದ ವರ್ಷ ಮೊದಲ ಬಾರಿಗೆ ಕಾಗದ ರಹಿತವಾಗಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಅದೇ ಹೊಸ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ.
ಇಂದು ಬೆಳಗ್ಗೆ 11ರಿಂದ ಸಂಸತ್ತಿನ ಅಧಿವೇಶನದಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಅಂದಾಜು 90 ರಿಂದ 120 ನಿಮಿಷಗಳ ಕಾಲ ಆಯವ್ಯಯ ಮಂಡಿಸಲಿದ್ದಾರೆ.
ಮಹಾಮಾರಿ ವೈರಸ್ನಿಂದ ಸಂಕಷ್ಟದಲ್ಲಿರುವ ಕೈಗಾರಿಕೆ, ಬ್ಯಾಂಕಿಂಗ್, ಸೇವಾ ವಲಯ, ಕೃಷಿ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳು ಹಾಗೂ ಸಾಮಾನ್ಯ ಜನರು ಈ ಬಜೆಟ್ಗಾಗಿ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲೂ ನಿರ್ಮಲಾ ಸೀತಾರಾಮನ್ ಯಾವ ರೀತಿ ಲೆಕ್ಕ ಮಾಡಿ, ಅನುದಾನ ಹಂಚಿದ್ದಾರೆ ಅನ್ನೋ ಪ್ರಶ್ನೆಗೆ ಇಂದು ಮಧ್ಯಾಹ್ನದ ವೇಳೆ ಉತ್ತರ ಸಿಗಲಿದೆ.
(ಇದನ್ನೂ ಓದಿ: ಬಜೆಟ್ 2022 : ಆರ್ಥಿಕ ಸಮೀಕ್ಷೆ ಮತ್ತು ಅದರ ಮಹತ್ವ..)
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ