ETV Bharat / bharat

ವಯನಾಡ್​ ಜಿಲ್ಲೆಯ ಬಾವಲಿಗಳಲ್ಲಿ ನಿಫಾ ವೈರಸ್​: ದೃಢಪಡಿಸಿದ ಐಸಿಎಂಆರ್​.. ಆರೋಗ್ಯ ಸಚಿವರಿಂದ ಎಚ್ಚರಿಕೆ - ನಿಫಾ ಇನ್ಕ್ಯುಬೇಷನ್​ ಅವಧಿ

"ಕೋಯಿಕ್ಕೋಡ್​ನ 42 ದಿನಗಳ ನಿಫಾ ಇನ್ಕ್ಯುಬೇಷನ್​ ಅವಧಿ ಗುರುವಾರ ಕೊನೆಗೊಳ್ಳಲಿದೆ. ಸದ್ಯ ಕೋಯಿಕ್ಕೋಡ್​ನಲ್ಲಿ ಹೊಸ ಪಾಸಿಟಿವ್​ ಪ್ರಕರಣ ಕಂಡುಬಂದಿಲ್ಲ." ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

Nipah virus in bats in Wayanad district: Health minister alerts to be cautious
ವಯನಾಡ್​ ಜಿಲ್ಲೆಯ ಬಾವಲಿಗಳಲ್ಲಿ ನಿಫಾ ವೈರಸ್: ಆರೋಗ್ಯ ಸಚಿವರಿಂದ ಎಚ್ಚರಿಕೆ
author img

By ETV Bharat Karnataka Team

Published : Oct 26, 2023, 7:17 AM IST

ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಬಾವಲಿಗಳ ಸ್ಯಾಂಪಲ್​ಗಳಲ್ಲಿ ನಿಫಾ ವೈರಸ್​ ಇರುವುದನ್ನು ಐಸಿಎಂಆರ್​ ದೃಢಪಡಿಸಿದ್ದು, ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

"ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಯನಾಡಿನ ಸುಲ್ತಾನ್​ ಬತ್ತೇರಿ ಹಾಗೂ ಮಾನಂತವಾಡಿಗಳ ಬಾವಲಿಗಳಿಂದ ಸಂಗ್ರಹಿಸಿದ ಸ್ಯಾಂಪಲ್​ಗಳಲ್ಲಿ ನಿಫಾ ವೈರಸ್​ ಇರುವುದು ಪತ್ತೆಯಾಗಿದೆ. ವಯನಾಡಿನಲ್ಲಿ ಎಮರ್ಜೆನ್ಸಿ ಆಧಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ, ಆದರೆ ಜಾಗೃತರಾಗಿರಿ. ಜೊತೆಗೆ ಯಾವುದೇ ಪ್ರಾಣಿಗಳು ಹಾಗೂ ಪಕ್ಷಿಗಳು ತಿಂದ ಹಣ್ಣುಗಳನ್ನು ತಿನ್ನಬೇಡಿ. ಹಾಗೂ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ" ಎಂದು ವಿನಂತಿಸಿದ್ದಾರೆ.

"ಇತರ ಜಿಲ್ಲೆಗಳಲ್ಲಿ ನಿಫಾ ವೈರಸ್​ ಇರುವಿಕೆಯ ಬಗ್ಗೆ ಅವಲೋಕನಗಳು ಹಾಗೂ ಅಧ್ಯಯನಗಳು ನಡೆಯುತ್ತಿವೆ. ವಯನಾಡಿನಲ್ಲಿ ಎಲ್ಲ ಮನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರಲ್ಲಿ ನಿಫಾ ಬಗ್ಗೆ ಜಾಗೃತಿ ಮೂಡಿಸಲು, ನಿಫಾ ಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷಿಸಲು ಆರೋಗ್ಯ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್​ ಸಂಶೋಧನೆಗಳ ಪ್ರಕಾರ, ದೇಶದ ಯಾವುದೇ ಭಾಗದಲ್ಲಿ ನಿಫಾ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಭಯ ಪಡುವುದು ಪರಿಹಾರವಲ್ಲ. ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಆತಂಕದ ಅಗತ್ಯವಿಲ್ಲ" ಎಂದು ತಿಳಿಸಿದರು.

"ನಿಫಾ ಹರಡುವಿಕೆ ನಿಯಂತ್ರಣ ಹಾಗೂ ನಿಫಾ ಸಂಶೋಧನೆಗಾಗಿ ಗುರುವಾರದಿಂದ ಕೋಯಿಕ್ಕೋಡ್​ ವೈದ್ಯಕೀಯ ಕಾಲೇಜಿನಲ್ಲಿ ಒನ್​ ಹೆಲ್ತ್​ ಸೆಂಟರ್​ ಕಾರ್ಯನಿರ್ವಹಿಸಲಿದೆ. ಇದನ್ನು ಸಂಶೋಧನಾ ಸಂಸ್ಥೆಯಾಗಿ ಮೇಲ್ದರ್ಜೇಗೇರಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳು ಇದರ ಮೇಲ್ವಿಚಾರಣೆ ಮಾಡುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಸರ್ಕಾರ ಭವಿಷ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಒಂದು ಆರೋಗ್ಯ ಕೇಂದ್ರವನ್ನು ಸಂಶೋಧನಾ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸುತ್ತಿದೆ."

"ಕಳೆದ ಸೆಪ್ಟೆಂಬರ್​ನಲ್ಲಿ ವಯನಾಡ್​ಗೆ ಸಮೀಪವಿರುವ ಕೋಯಿಕ್ಕೋಡ್​ನಲ್ಲಿ ನಿಫಾ ಸೋಂಕು ನಾಲ್ಕನೇ ಬಾರಿ ವರದಿಯಾಗಿತ್ತು. ಇದುವರೆಗೆ ಒಟ್ಟು ಆರು ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ವರು ಚೇತರಿಸಿಕೊಂಡಿದ್ದು, ಎರಡು ಸಾವು ವರದಿಯಾಗಿತ್ತು. ಕೋಯಿಕ್ಕೋಡ್​ನ 42 ದಿನಗಳ ನಿಫಾ ಇನ್ಕ್ಯುಬೇಷನ್​ ಅವಧಿ ಗುರುವಾರ ಕೊನೆಗೊಳ್ಳಲಿದೆ. ಸದ್ಯ ಕೋಝಿಕ್ಕೋಡ್​ನಲ್ಲಿ ಹೊಸ ಪಾಸಿಟಿವ್​ ಪ್ರಕರಣ ಕಂಡುಬಂದಿಲ್ಲ."

"ನಿಫಾ ವೈರಸ್​ ಸಾವಿನ ಪ್ರಮಾಣ 70-90 ಶೇ ಇತ್ತು. ಆದರೆ, ಅದೇ ಈಗ ಕೋಝಿಕ್ಕೋಡ್​ನಲ್ಲಿ 33.3 ಶೇಕಡಾಕ್ಕೆ ಕಡಿಮೆಯಾಗಿದೆ. ಕೇರಳದಲ್ಲಿ ಮರುಕಳಿಸುತ್ತಿರುವ ನಿಫಾ ಸೋಂಕಿಗೆ ಕಾರಣಗಳನ್ನು ಕಂಡು ಹಿಡಿಯಲು ಅಧ್ಯಯನದ ಭಾಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. 42 ದಿನಗಳ ಇನ್ಕ್ಯುಬೇಷನ್​ ಅವಧಿ ಮುಗಿದ ನಂತರ ಕೋಯಿಕ್ಕೋಡ್​ ಅಧಿಕೃತವಾಗಿ ನಿಫಾ ಸೋಂಕು ಮುಕ್ತವಾಗಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕೋಝಿಕ್ಕೋಡ್​ನಲ್ಲಿ ನಿಫಾ ಆತಂಕ ದೂರ-ತೆರೆದ ಶಾಲೆಗಳು; ಮಾಸ್ಕ್​​, ಸ್ಯಾನಿಟೈಸರ್​ ಬಳಕೆ ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.