ಕೋಝಿಕ್ಕೋಡ್ (ಕೇರಳ): ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಇಬ್ಬರು ವ್ಯಕ್ತಿಗಳ ಸಾವಿಗೆ ನಿಫಾ ವೈರಸ್ ಕಾರಣ ಎಂದು ದೃಢಪಟ್ಟಿದೆ. ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಘಟನೆಯಲ್ಲಿ ಖಚಿತಪಡಿಸಿದ್ದರು. ಕೇರಳದ ಆರೋಗ್ಯ ಇಲಾಖೆ ಕಣ್ಣೂರು, ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.
ಆರೋಗ್ಯ ಇಲಾಖೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯನ್ನು (ಐಸಿಎಂಆರ್) ಸಂಪರ್ಕಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಿಫಾ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಮೊನೊಕ್ಲೋನಲ್ಆ್ಯಂಟಿಬಾಡಿಗಳನ್ನು ನೀಡುವುದಾಗಿ ಭರವಸೆ ನೀಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಜ್ವರದಿಂದ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಲಾಖೆ ಈಗಾಗಲೇ ಕೋಝಿಕ್ಕೋಡ್‌ನಲ್ಲಿ ಎಚ್ಚರಿಕೆ ನೀಡಿದೆ. ಇದು ನಿಫಾ ಸೋಂಕು ಎಂದು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಪುಣೆ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಸೋಂಕು ನಿಯಂತ್ರಣ ಪ್ರಯತ್ನಗಳನ್ನು ಸರ್ಕಾರ ಚುರುಕುಗೊಳಿಸಿದೆ ಎಂದು ಸಚಿವೆ ಮಾಹಿತಿ ನೀಡಿದರು.
ವೀಣಾ ಜಾರ್ಜ್ ನಿನ್ನೆ(ಮಂಗಳವಾರ) ರಾತ್ರಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆರೋಗ್ಯ ಸಚಿವೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಮೊಹಮ್ಮದ್ ರಿಯಾಜ್ ಕೋಝಿಕ್ಕೋಡ್‌ಗೆ ಭೇಟಿ ನೀಡಿ ಜಿಲ್ಲಾಡಳಿತದ ಚಟುವಟಿಕೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರು, ನೆರೆಪೀಡಿತ ಪ್ರದೇಶದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಇತರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲಾಯಿತು.
ಇದನ್ನೂ ಓದಿ: ನಿಫಾ ಸೋಂಕಿಗೆ ಕೇರಳದಲ್ಲಿ ಇಬ್ಬರು ಸಾವು ಶಂಕೆ: ರೋಗದ ಲಕ್ಷಣಗಳೇನು? ತಡೆ ಹೇಗೆ? ಸಂಪೂರ್ಣ ಮಾಹಿತಿ
ಸರ್ಕಾರದ ಪ್ರಕಟಣೆಯ ಪ್ರಕಾರ, ಜಿಲ್ಲೆಯಲ್ಲಿ ನಿಫಾ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ವೀಣಾ ಜಾರ್ಜ್ ಕೂಡ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ. ರೋಗಿಗಳ ಆರೈಕೆಗಾಗಿ ಪಿಪಿಇ ಕಿಟ್‌ಗಳು, ಎನ್95 ಮಾಸ್ಕ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇತರ ರಕ್ಷಣಾ ಸಾಧನಗಳ ಲಭ್ಯತೆಯನ್ನು ಸಚಿವರು ಪರಿಶೀಲಿಸಿದ್ದಾರೆ.
ಕಂಟೈನ್‌ಮೆಂಟ್ ವಲಯ ಘೋಷಣೆ: ಕೋಝಿಕ್ಕೋಡ್ ಜಿಲ್ಲಾಧಿಕಾರಿಗಳು ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಸುಗ್ರೀವಾಜ್ಞೆ 2020ರ ವಿಭಾಗ (4) ರ ಅಡಿಯಲ್ಲಿ ಕೆಳಗಿನ ಗ್ರಾಮ ಪಂಚಾಯತ್ ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಿದ್ದಾರೆ.
- ಆಯಂಚೇರಿ ಗ್ರಾಮ ಪಂಚಾಯತ್ನ - 1,2,3,4,5,12,13,1 ಮತ್ತು 15ನೇ ವಾರ್ಡ್.
- ಮಾರುತೋಂಕರ ಗ್ರಾಮಪಂಚಾಯತ್ನ - 1,2,3,4,5,12,13 ಮತ್ತು 14ನೇ ವಾರ್ಡ್
- ತಿರುವಳ್ಳೂರು ಗ್ರಾಮಪಂಚಾಯತ್ನ - 1,2 ಮತ್ತು 20ನೇ ವಾರ್ಡ್.
- ಕುಟ್ಟಿಯಾಡಿ ಗ್ರಾಮಪಂಚಾಯತ್ನ - 3,4,5,6,7,8,9,10ನೇ ವಾರ್ಡ್
- ಕಾಯಕ್ಕೋಡಿ ಗ್ರಾಮಪಂಚಾಯತ್ನ - 5,6,7,8,9,10ನೇ ವಾರ್ಡ್
- ವಿಲಿಯಪಲ್ಲಿ ಗ್ರಾಮಪಂಚಾಯತ್ನ - 6 ಮತ್ತು 7ನೇ ವಾರ್ಡ್
- ಕವಿಲುಂಪಾರ ಗ್ರಾಮಪಂಚಾಯತ್ನ - 2,10,11,12,13,14,15 ಮತ್ತು 16ನೇ ವಾರ್ಡ್.
ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪ್ರಸ್ತುತ ಎರಡು ಸಕ್ರಿಯ ಪ್ರಕರಣಳಿದ್ದು, ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಯಿಕ್ಕೋಡ್‌ನಲ್ಲಿ ಮೃತಪಟ್ಟ ಇಬ್ಬರಿಗೆ ನಿಫಾ ವೈರಸ್ ದೃಢಪಟ್ಟಿದೆ ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಕೇಂದ್ರ ಆರೋಗ್ಯ ತಜ್ಞರ ತಂಡ ಮಂಗಳವಾರ ಕೇರಳಕ್ಕೆ ಧಾವಿಸಿದೆ.
ಇದನ್ನೂ ಓದಿ: Nipah virus: ಕೇರಳದಲ್ಲಿ ನಿಫಾ ವೈರಸ್ನಿಂದ ಇಬ್ಬರು ಸಾವು.. ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ