ಶ್ರೀನಗರ, ಜಮ್ಮು ಕಾಶ್ಮೀರ: ಉಗ್ರರು ದಾಳಿ ನಡೆಸಿ, ನಾಗರಿಕರನ್ನು ಕೊಲ್ಲುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಾಹಿತಿ ನೀಡಿದೆ. ಇದರ ಜೊತೆಗೆ ಬಂಧಿತರಲ್ಲಿ ನಾಲ್ಕು ಮಂದಿ ವಿವಿಧ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಶ್ರೀನಗರ, ಪುಲ್ವಾಮಾ, ಕುಲ್ಗಾಂ ಮತ್ತು ಬಾರಾಮುಲ್ಲ ಸೇರಿದಂತೆ ಸುಮಾರು 11 ಸ್ಥಳಗಳಲ್ಲಿ ಎನ್ಐಎ ಬುಧವಾರ ದಾಳಿ ನಡೆಸಿದೆ. ಈ ವೇಳೆ ಕುಲ್ಗಾಂನ ಸುಹೇಲ್ ಅಹ್ಮದ್ ಥೋಕರ್, ಹಜ್ರತ್ಬಾಲ್ನ ಕಮ್ರಾನ್ ಅಶ್ರಫ್ ರೇಶಿ, ಶ್ರೀನಗರದ ರಯಿದ್ ಬಶೀರ್ ಮತ್ತು ಶ್ರೀನಗರದ ಹನನ್ ಗುಲ್ಜಾರ್ ದಾರ್ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬುಧವಾರ ಬಂಧಿತರಾಗಿರುವ ನಾಲ್ಕೂ ಮಂದಿ ಭಯೋತ್ಪಾದನಾ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಯೋತ್ಪಾದನಾ ಗುಂಪುಗಳಿಗೆ ಸಾಮಗ್ರಿಗಳು ಮತ್ತಿತರ ನೆರವನ್ನು ಇವರು ನೀಡುತ್ತಿದ್ದರು. ಇವರ ಜೊತೆಗೆ ಇದರ ಜೊತೆಗೆ ಕೆಲವೊಂದು ಶಸ್ತ್ರಗಳನ್ನು, ಜಿಹಾದಿ ಡಾಕ್ಯುಮೆಂಟ್ಗಳು ಹಾಗೂ ಪೋಸ್ಟರ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಂದು ಎನ್ಐಎ ಹೇಳಿದೆ.
ಅಕ್ಟೋಬರ್ 10ರಂದು ಜಮ್ಮು ಕಾಶ್ಮೀರದಲ್ಲಿ ನಾಗರಿಕ ಹತ್ಯೆಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಎನ್ಐಎ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಈವರೆಗೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಲ್ಪೈನ್ ಗರ್ಲ್ ಆಫ್ ಇಂಡಿಯಾ- ಬೆಂಗಳೂರು ನಿವಾಸಿ ನಮ್ರತಾ ಟ್ರೆಕ್ಕಿಂಗ್ ಸಾಧನೆ