ETV Bharat / bharat

ಆಹಾರ ಹುಡುಕಿ ಬಂದು ಬಾವಿಗೆ ಬಿದ್ದ ನೀಲಗಾಯಿ : ರಕ್ಷಿಸಿದ ಗ್ರಾಮಸ್ಥರು - ನೀಲಗಾಯಿ ರಕ್ಷಿಸಿದ ಗ್ರಾಮಸ್ಥರು

ಆಹಾರ ಹುಡುಕುತ್ತಾ ಬಂದು ತೆರೆದ ಬಾವಿಗೆ ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಪ್ರಾಣಿಯನ್ನು ಬಾವಿಯಿಂದ ಹೊರ ತೆಗೆದು ರಕ್ಷಿಸಿದ್ದಾರೆ..

nilgai-fell-in-the-well-in-garhwa-jharkhand

author img

By

Published : May 29, 2021, 10:54 PM IST

ಗರ್ಹ್ವಾ (ಜಾರ್ಖಂಡ್): ಮೇವು ಹಾಗೂ ನೀರು ಹುಡುಕಿಕೊಂಡು ಬಂದ ನೀಲಗಾಯಿ​ ಒಂದು ಡುಮಾರ್ಸೋಟ ಗ್ರಾಮದ ತೆರೆದ ಬಾವಿಗೆ ಬಿದ್ದಿತ್ತು.

ಇದನ್ನು ಗಮನಿಸಿದ ಗ್ರಾಮಸ್ಥರು ಪ್ರಾಣಿಯನ್ನು ಬಾವಿಯಿಂದ ಹೊರ ತೆಗೆದು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ನೀಲ್​ಗಾಯ್ ಬಾವಿಗೆ ಬಿದ್ದಿದ್ದು, ಮುಂಜಾನೆ ಗಮನಿಸಿದ ಗ್ರಾಮಸ್ಥರು ರಕ್ಷಣಾ ಕಾರ್ಯ ನಡೆಸಿದ್ದಾರೆ.

ನೀಲಗಾಯಿಯ ರಕ್ಷಣಾ ಕಾರ್ಯ..

ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಡುಮಾರ್ಸೋಟ ಗ್ರಾಮದ ಗ್ರಾಮಸ್ಥರು ನೀಲಗಾಯಿಯನ್ನು ಬಾವಿಯಲ್ಲಿ ನೋಡಿದ ತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಆದರೆ, ಅರಣ್ಯ ಇಲಾಖೆಯ ಬಳಿ ರಕ್ಷಣಾ ಕಾರ್ಯ ನಡೆಸಲು ಸೂಕ್ತ ಪರಿಕರವೇ ಇರಲಿಲ್ಲ. ಹೀಗಾಗಿ, ಸ್ವತಃ ಗ್ರಾಮಸ್ಥರೇ ನೀಲಗಾಯಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ನೀಲಗಾಯಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದರೆ, ನೀಲಗಾಯಿಯನ್ನು ರಕ್ಷಿಸಿದ ಸಂಪೂರ್ಣ ಮನ್ನಣೆ ಗ್ರಾಮಸ್ಥರಿಗೇ ಸೇರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.