ಸೋನಿಪತ್, ಹರಿಯಾಣ: ಕೇಂದ್ರ ಸರ್ಕಾರದ ಮತ್ತು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ವಿಚಾರ ಹಲವು ತಿರುವುಗಳನ್ನು ನೀಡುತ್ತಿದೆ.
ಕೈ ಕತ್ತರಿಸಿ, ಬ್ಯಾರಿಕೇಡ್ಗೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಲಖ್ಬೀರ್ ಸಿಂಗ್ ಎಂಬಾತನದ್ದಾಗಿದ್ದು, ಕೆಲವು ನಿಹಾಂಗ್ ಸಮುದಾಯದ ಸದಸ್ಯರು ನಾವೇ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಈಗ ನಿಹಾಂಗ್ ಸಮುದಾಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಈ ವಿಡಿಯೋದಲ್ಲಿ ಲಖ್ಬಿರ್ ತಾನು ಕೊಲೆಯಾಗುವುದಕ್ಕೂ ಮುನ್ನ ಹಣ ಕೊಟ್ಟ ಕಾರಣದಿಂದ ರೈತ ಪ್ರತಿಭಟನಾ ಸ್ಥಳವಾದ ಕುಂಡ್ಲಿ ಗಡಿಗೆ ಬಂದಿದ್ದಾಗಿ ಒಪ್ಪಿಕೊಂಡಿರುವಂತೆ ಗೊತ್ತಾಗುತ್ತದೆ.
ಇದರ ಜೊತೆಗೆ ನಿಹಾಂಗ್ ಸಮುದಾಯದ ಸದಸ್ಯರಿಗೆ ಲಖ್ಬಿರ್ ಒಂದು ಫೋನ್ ನಂಬರ್ ಹಂಚಿಸಿಕೊಂಡಿರುವುದೂ ಬೆಳಕಿಗೆ ಬಂದಿದೆ
ಅಕ್ಟೋಬರ್ 15ರಂದು ಲಖ್ಬಿರ್ ಸಿಂಗ್ ಸಿಂಘು ಗಡಿ ಸಮೀಪದ ಕುಂಡ್ಲಿ ಗಡಿಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದರು. ಕೈ ಕತ್ತರಿಸಿ, ಬ್ಯಾರಿಕೇಡ್ಗೆ ನೇತುಹಾಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪೊಲೀಸರ ಮಂದೆ ಶರಣಾದ ಕೆಲವು ನಿಹಾಂಗ್ ಸಮುದಾಯದ ಸದಸ್ಯರು 'ಲಖ್ಬಿರ್ ಗುರುಗ್ರಂಥ ಸಾಹೀಬ್ಗೆ ಅಪಚಾರ ಮಾಡಲು ಯತ್ನಿಸಿದ್ದು, ಅದೇ ಕಾರಣದಿಂದ ಲಖ್ಬಿರ್ನನ್ನು ಕೊಲ್ಲಲಾಗಿದೆ ಎಂದಿದ್ದರು.
ಇದನ್ನೂ ಓದಿ: ಚೀನಾಗೆ ಸೆಡ್ಡು ಹೊಡೆಯಲು ಸಜ್ಜು.. ಅರುಣಾಚಲ ಗಡಿಯಲ್ಲಿ ಬೋಫೋರ್ಸ್ ಫಿರಂಗಿಗಳ ನಿಯೋಜನೆ!