ಭೋಪಾಲ್: ರಾಜ್ಯದಲ್ಲಿ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಸರ್ಕಾರದ ಮುಂದಿನ ಆದೇಶದ ವರೆರೆ ಈ ನಿಯಮ ಜಾರಿಯಲ್ಲಿರಲಿದೆ.
ಹೊಸ ವರ್ಷವನ್ನು ಆಚರಿಸಲು ಬಯಸುವವರಿಗೆ ಎರಡೂ ಡೋಸ್ ಲಸಿಕೆ ಅಗತ್ಯ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ. ಕಳೆದ ಒಂದು ತಿಂಗಳಲ್ಲಿ ಇಂದೋರ್‌ಗೆ ಬಂದಿಳಿದ ನಂತರ 14 ಸಾಗರೋತ್ತರ ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದಾದ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಇದನ್ನೂ ಓದಿ: ಬೆಂಗಳೂರಿನ ಮತ್ತೆ ನಾಲ್ವರಲ್ಲಿ ಒಮಿಕ್ರಾನ್ ದೃಢ: ಕೋರಮಂಗಲ ಅಪಾರ್ಟ್ಮೆಂಟ್ ಸೀಲ್ಡೌನ್
30 ಹೊಸ ಪ್ರಕರಣಗಳೊಂದಿಗೆ ಮಧ್ಯಪ್ರದೇಶದಲ್ಲಿ ಇಂದಿಗೆ ಕೊರೊನಾ ಸಂಖ್ಯೆ 7,93,581 ಕ್ಕೆ ಏರಿದೆ. ಹಾಗೆ ಕೊರೊನಾ ಸೋಂಕಿತರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿದ ನಂತರ ಚೇತರಿಕೆಯ ಸಂಖ್ಯೆ 7,82,859 ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾವುದೇ ಸಾವು ನೋವು ಸಂಭವಿಸದ ಕಾರಣ ಸಾವಿನ ಸಂಖ್ಯೆ 10,531 ನಲ್ಲಿ ಬದಲಾಗದೇ ಉಳಿದಿದೆ. ಇನ್ನು ಕಳೆದ ತಿಂಗಳಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳ ಮೂಲಕ ವಿದೇಶದಿಂದ ಇಂದೋರ್‌ಗೆ ಬಂದಿದ್ದ 3,300 ಜನರಲ್ಲಿ 2,100 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಬಿ ಎಸ್ ಸೈತ್ಯ ತಿಳಿಸಿದ್ದಾರೆ.