ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಾರಂಭಿಸಿದೆ.
ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಎನ್ಐಎ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಸದ್ಯ, ಪ್ರಕರಣವನ್ನು ಮರು ದಾಖಲಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮುಖೇಶ್ ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನಲ್ಲಿ 21 ಜಿಲೆಟಿನ್ ಕಡ್ಡಿ ಪತ್ತೆ: ತನಿಖೆಗೆ ಆದೇಶ
ಫೆಬ್ರವರಿ 25 ರಂದು ದಕ್ಷಿಣ ಮುಂಬೈಯ ಮುಖೇಶ್ ಅಂಬಾನಿ ನಿವಾಸ ಆ್ಯಂಟಿಲಿಯಾದ ಮುಂದೆ ಸ್ಕಾರ್ಫಿಯೋ ಕಾರಿನಲ್ಲಿ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಫೆಬ್ರವರಿ 18 ರಂದು ಐರೋಲಿ-ಮುಲುಂಡ್ ಸೇತುವೆಯಿಂದ ಈ ವಾಹನವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ವಾಹನದ ಮಾಲೀಕ ಹಿರೆನ್ ಮನ್ಸುಖ್ ಕಳೆದ ಶುಕ್ರವಾರ ಥಾಣೆಯ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದ.