ETV Bharat / bharat

ಭಯೋತ್ಪಾದಕ ನಿಧಿ ಪ್ರಕರಣ: ಜಮ್ಮು-ಕಾಶ್ಮೀರದ ವಿವಿಧೆಡೆ ಎನ್ಐಎ ತನಿಖೆ, ಐವರ ಬಂಧನ - ಭಯೋತ್ಪಾದಕ ನಿಧಿ ಸಂಗ್ರಹ

ಐಸಿಸ್​ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಎನ್ಐಎ ಐದು ಜನರನ್ನು ಬಂಧಿಸಿದ್ದು, ಕೆಲವರನ್ನು ವಿಚಾರಣೆಗೆ ಒಳಪಡಿಸಿದೆ. ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

NIA
ಎನ್ಐಎ ತನಿಖೆ
author img

By

Published : Jul 11, 2021, 10:08 AM IST

ಅನಂತ್​ನಾಗ್​(ಜಮ್ಮು-ಕಾಶ್ಮೀರ): ಭಯೋತ್ಪಾದಕ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸುತ್ತಿದೆ. ಕೇಂದ್ರ ಪ್ರದೇಶವಾದ ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಐಸಿಸ್​ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಎನ್ಐಎ ಐದು ಜನರನ್ನು ಬಂಧಿಸಿದ್ದು, ಕೆಲವು ಜನರನ್ನು ವಿಚಾರಣೆಗೆ ಒಳಪಡಿಸಿದೆ. ಹಿಜ್ಬುಲ್​ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥರ ಪುತ್ರರು ಮತ್ತು ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಸೈಯದ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ತನ್ನ 11 ಉದ್ಯೋಗಿಗಳನ್ನು ಶನಿವಾರ ವಜಾ ಮಾಡಿದೆ.

ಸೈಯದ್ ಅಹ್ಮದ್ ಶಕೀಲ್, ಶಾಹಿದ್ ಯೂಸುಫ್, ಸಲಾಹುದ್ದೀನ್ ಕ್ರಮವಾಗಿ ಶೇರ್-ಐ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸ್ಕಿಮ್ಸ್) ಮತ್ತು ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಭಯೋತ್ಪಾದಕ ಸಂಘಟನೆಗೆ ಬೆಂಬಲ ಸೂಚಿಸಿದ್ದರು ಎನ್ನಲಾಗ್ತಿದೆ. ಸದ್ಯ ತನಿಖಾ ಸಂಸ್ಥೆ ಇವರ ಭಯೋತ್ಪಾದಕ ನಿಧಿಯ ಹಾದಿಗಳನ್ನು ಪತ್ತೆ ಮಾಡಿದೆ. ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಅವರ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹವಾಲಾ (ಬ್ಯಾಂಕೇತರ) ವಹಿವಾಟಿನ ಮೂಲಕ ಹಣವನ್ನು ಸಂಗ್ರಹಿಸುವುದು, ಸ್ವೀಕರಿಸುವುದು ಮತ್ತು ವರ್ಗಾವಣೆ ಮಾಡುವಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.