ಚಂಡೀಗಢ: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಸಿಧು ಸೊಸೆ ಹಾಗೂ ಖ್ಯಾತ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಸಮನ್ಸ್ ಜಾರಿ ಮಾಡಿದ್ದು, ಐದು ಗಂಟೆಗಳ ಕಾಲ ವಿಚಾರಣೆ ಕೂಡಾ ನಡೆಸಿದೆ.
ಲಾರೆನ್ಸ್ ಗ್ಯಾಂಗ್ ಮತ್ತು ಕೊಲೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳು ಅಫ್ಸಾನಾ ಖಾನ್ ಬಾಂಬಿಹಾ ಗ್ಯಾಂಗ್‌ಗೆ ಹತ್ತಿರವಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ. ಲಾರೆನ್ಸ್ ಗ್ರೂಪ್‌ನ ರಾಡಾರ್‌ನಲ್ಲಿ ಸಿಧು ಏಕೆ ಇದ್ದರು? ಅವರ ಹೆಸರನ್ನು ಪದೇ ಪದೆ ಬಾಂಬಿಯಾ ಜತೆ ಏಕೆ ತಳಕು ಹಾಕಿಕೊಂಡಿದೆ ಎಂಬ ಬಗ್ಗೆ ಎನ್‌ಐಎ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಬಿಷ್ಣೋಯ್, ಬಂಬಿಹಾ ಮತ್ತು ರಿಂದಾ ಗ್ಯಾಂಗ್‌ಗಳ ಸದಸ್ಯರು ಸೇರಿದಂತೆ ಹಲವು ಮೋಸ್ಟ್ ವಾಂಟೆಡ್ ದರೋಡೆಕೋರರ ವಿರುದ್ಧ ಎನ್‌ಐಎ ಆರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದೆ.
ಅಫ್ಸಾನಾ ಖಾನ್ ಸಿಧು ಮೂಸೆವಾಲಾ ಅವರನ್ನು ತನ್ನ ಸಹೋದರ ಎಂದು ಪರಿಗಣಿಸಿದ್ದಾರೆ ಮತ್ತು ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಇಬ್ಬರೂ ಅನೇಕ ಹಿಟ್ ಪಂಜಾಬಿ ಹಾಡುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅನೇಕ ಪ್ರದರ್ಶನಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅವರ ಹಲವು ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ತನಿಖಾ ಸಂಸ್ಥೆ, ಸಿಧು ಹತ್ಯೆಯಲ್ಲಿ ಅಫ್ಸಾನಾ ಖಾನ್ ಪಾತ್ರ ಇರಬಹುದೆಂದು ಶಂಕಿಸಿದೆ. ಇದೇ ಕಾರಣಕ್ಕೆ ಅವರಿಗೆ ಸಮನ್ಸ್ ನೀಡಿದ ವಿಚಾರಣೆಗೂ ಎನ್‌ಐಎ ಒಳಪಡಿಸಿದೆ ಎನ್ನಲಾಗಿದೆ.
ಇದನ್ನು ಓದಿ:ದಲಿತ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದ ದುರುಳರು.. ತಲೆಮರೆಸಿಕೊಂಡ ಆರು ಮಂದಿಗಾಗಿ ಶೋಧ