ಶ್ರೀನಗರ (ಜಮ್ಮು-ಕಾಶ್ಮೀರ): ಸುಧಾರಿತ ಸ್ಫೋಟಕ ಸಾಧನ (IED) ಪ್ರಕರಣ ಹಾಗೂ 'ಐಸಿಸ್ -ವಾಯ್ಸ್ ಆಫ್ ಹಿಂದ್' ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಜಮ್ಮು ಮತ್ತು ಕಾಶ್ಮೀರದ 16 ಕಡೆಗಳಲ್ಲಿ ದಾಳಿ ನಡೆಸಿದೆ.
ಅನಂತನಾಗ್, ಶ್ರೀನಗರ, ಬಾರಾಮುಲ್ಲಾ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿದ್ದು, ಹಲವಾರು ಜನರನ್ನು ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲಖೀಮ್ಪುರ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್
'ಐಸಿಸ್ -ವಾಯ್ಸ್ ಆಫ್ ಹಿಂದ್', ಇದು ಆನ್‌ಲೈನ್ ಪತ್ರಿಕೆಯಾಗಿದ್ದು, ಕೋಮು ದ್ವೇಷದ ಭಾವನೆಯನ್ನು ಹುಟ್ಟುಹಾಕುತ್ತದೆ ಹಾಗೂ ಯುವಕರನ್ನು ಅಹಿತಕರ ಘಟನೆಗಳಿಗೆ ಪ್ರಚೋದಿಸುತ್ತದೆ. ಈ ಮೊದಲು ಬಂಧನವಾಗಿದ್ದ ಉಗ್ರ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಿಂದ ಈ ಪತ್ರಿಕೆಯನ್ನು ನಿರ್ವಹಿಸುತ್ತಾನೆ ಎಂದು ಹೇಳಲಾಗ್ತಿದೆ.
ಈ ಹಿಂದೆ ಬತಿಂದಿ ಪ್ರದೇಶದಲ್ಲಿ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಎರಡೂ ಪ್ರಕರಣಗಳ ಸಂಬಂಧ ಇಂದು ಎನ್ಐಎ ದಾಳಿ ನಡೆಸಿ, ಶೋಧ ಕಾರ್ಯ ಮುಂದುವರೆಸಿದೆ.