ಶ್ರೀನಗರ, ಜಮ್ಮು ಕಾಶ್ಮೀರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ, ಬದ್ಗಾಮ್ ಮತ್ತು ಇತರ ಪ್ರದೇಶಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳ ಜೊತೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜಲ್ದಾಗರ್ ನಿವಾಸಿ ಫಿರೋಜ್ ಅಹ್ಮದ್ ಅಹಂಗೇರ್ ಪುತ್ರ ಅರ್ಸಲಾನ್ ಫಿರೋಜ್ ಅಹಂಗೆರ್ ಅವರ ನಿವಾಸದ ಮೇಲೆ ಎನ್ಐಎ ತಂಡ ದಾಳಿ ನಡೆಸಿದೆ. ಅರ್ಸಲಾನ್ ಡಿಸೆಂಬರ್ 2021ರಿಂದ ಎನ್ಐಎ ವಶದಲ್ಲಿದ್ದಾರೆ. ಶ್ರೀನಗರದ ಮುಸ್ತಫಾಬಾದ್ ಜೈನಕೋಟೆ ಪ್ರದೇಶದ ನಿವಾಸಿ ಅಬ್ದುಲ್ ಸಮದ್ ದಾರ್ ಅವರ ಮಗ ಏಜಾಜ್ ಅಹ್ಮದ್ ದಾರ್ ಅವರ ಮನೆ ಮೇಲೂ ಸಂಸ್ಥೆ ದಾಳಿ ನಡೆಸಿದೆ.
ಬೋನಪೋರಾ ನೌಗಾಮ್ನಲ್ಲಿ ವೃತ್ತಿಯಲ್ಲಿ ಸೇಲ್ಸ್ಮನ್ ಆಗಿರುವ ಮೊಹಮ್ಮದ್ ಯಾಕೂಬ್ ಅವರ ಪುತ್ರ ಸಮೀರ್ ಅಹ್ಮದ್ ಗನಿ ಅವರ ಮನೆ ಮತ್ತು ನಿವೃತ್ತ ಸರ್ಕಾರಿ ನೌಕರ ಮಕ್ಬೂಲ್ ಭಟ್ ಅವರ ಮನೆಯ ಮೇಲೆಯೂ ದಾಳಿ ನಡೆದಿದೆ. ಚಾನ್ಪೋರಾದಲ್ಲಿ ಅವರ ನಿವಾಸವಿದ್ದು, ಕೂಲಂಕಷವಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಶ್ರೀನಗರದ ಬ್ಯಾಂಕ್ ಕಾಲೋನಿ ಬಾಗ್ ಮೆಹ್ತಾಬ್ ಪ್ರದೇಶ, ಬದ್ಗಾಮ್‌ನ ಅರಿಪಠನ್ ಗ್ರಾಮ, ಪಾಂಪೋರ್, ಬಾರಾಮುಲ್ಲಾದ ತಂಗ್‌ಮಾರ್ಗ್ ಪ್ರದೇಶ ಮತ್ತು ಇತರ ಹಲವಾರು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿರುವುದನ್ನು ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಪಾಕ್ನಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಯತ್ನ: ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ