ETV Bharat / bharat

ನಿಷೇಧಿತ ಹಿಜ್ಬ್-ಉತ್-ತಹರ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿ ಬಂಧನ - nia-arrests-madura

ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಫರ್ಕ ಹೊಂದಿರುವಾತನನ್ನು ಮಧುರೈನಲ್ಲಿ ಎನ್​ಐಎ ಬಂಧಿಸಿದೆ. ಉಗ್ರ ಬಾವಾ ಬಹ್ರುದ್ದೀನ್ ಅಲಿಯಾಸ್ ಮನ್ನಾ ಬಾವಾ ಜೊತೆ ಸೇರಿ ಹಲವು ಸಂಚು ರೂಪಿಸಿದ್ದ ಎಂದು ಎನ್​ಐಎ ತಿಳಿಸಿದೆ.

National Investigation Agency
ರಾಷ್ಟ್ರೀಯ ತನಿಖಾ ಸಂಸ್ಥೆ
author img

By

Published : Sep 19, 2021, 9:34 AM IST

ಮಧುರೈ (ತಮಿಳುನಾಡು): ಫೇಸ್​​​ಬುಕ್​ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಮಧುರೈನಲ್ಲಿ ಎನ್​ಐಎ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಬಂಧಿಸಿದ್ದಾರೆ.

ಈತ ಭಾರತದಲ್ಲಿ ನಿಷೇಧಿತ ಹಿಜ್ಬ್-ಉತ್-ತಹರ್ ಸಂಘಟನೆಯ ಸದಸ್ಯನಾಗಿದ್ದು, ಬಾವಾ ಬಹ್ರುದ್ದೀನ್ ಅಲಿಯಾಸ್ ಮನ್ನಾ ಬಾವಾ ಜೊತೆ ಹಲವಾರು ಸಂಚು ರೂಪಿಸಿದ್ದಾನೆ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.

2020ರಲ್ಲಿ ಫೇಸ್​​​ಬುಕ್​ ಪೇಜ್​ನಲ್ಲಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಸೆಂಥಿಲ್ ಕುಮಾರ್ ಕೆಲ ಸಮುದಾಯಗಳನ್ನು ಅವಹೇಳನ ಮಾಡುವ ಪೋಸ್ಟ್‌ ಸೇರಿದಂತೆ ಜಾತಿ ಮತ್ತು ಧಾರ್ಮಿಕ ಸಾಮರಸ್ಯದ ವಿರುದ್ಧ ಪೋಸ್ಟ್ ಮಾಡಿ ಸಾರ್ವಜನಿಕ ಶಾಂತಿ ಕದಡುವಂತಹ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದರು.

ಇಕ್ಬಾಲ್ ಬಾವಾ ಜೊತೆಗೆ ಮಧುರೈ, ಈರೋಡ್, ಸೇಲಂ ಮತ್ತು ತಂಜಾವೂರಿನಲ್ಲಿ ರಹಸ್ಯ ಸಭೆಗಳನ್ನು ನಡೆಸಿ, ಜನರನ್ನು ಹಿಜ್ಬ್-ಉತ್​​​-ತಹ್ರಿರ್ ಸಂಘಟನೆ ಸೇರುವಂತೆ ಪ್ರಚೋದಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ರಾಷ್ಟ್ರೀಯ ಗುಪ್ತಚರ ದಳ ಅಧಿಕಾರಿಗಳು ಇಲ್ಲಿನ ಮಣ್ಣಗುರ್ಡಿ ಮತ್ತು ಮನ್ಸೂರ್ ಅಲಿ ತೈಕ್ಕಲ್ ಪ್ರದೇಶದಲ್ಲಿ ದಾಳಿ ನಡೆಸಿ ಉಗ್ರ ಮನ್ನಾ ಬಾವಾನನ್ನು ಬಂಧಿಸಲಾಗಿತ್ತು. ಈತನಿಂದ 30 ಪುಸ್ತಕ, ಹಿಸ್ಬ್-ಉತ್-ತಹ್ರಿರ್ ಸಂಘಟನೆಗೆ ಸಂಬಂಧಿಸಿದ ಹಲವು ದಾಖಲೆಗಳು, ಮೂರು ಮೊಬೈಲ್​​ ಫೋನ್, ಹಾರ್ಡ್​ ಡಿಸ್ಕ್​ ಅನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಚೆಂಡು ಎಂದುಕೊಂಡು ಕಚ್ಚಾಬಾಂಬ್​ನಲ್ಲಿ ಮಕ್ಕಳ ಆಟ.. ಮುಂದಾಗಿದ್ದು ಮಾತ್ರ ಘೋರ ದುರಂತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.