ETV Bharat / bharat

ಐಸಿಸ್ ಸಂಘಟನೆಗೆ ಯುವಕರ ನೇಮಕ ಆರೋಪ: ಬೆಂಗಳೂರು ಮೂಲದ ಶಂಕಿತ ಉಗ್ರ ಅರೆಸ್ಟ್ - ಎನ್ಐಎ ಕಾರ್ಯಾಚರಣೆ

ಐಸಿಸ್‌ ಉಗ್ರ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿದ ಆರೋಪ ಮೇಲೆ ಬೆಂಗಳೂರು ನಿವಾಸಿಯಾಗಿದ್ದ ಮುಹಮ್ಮದ್ ತೌಕೀರ್ ಮಹಮೂದ್ ಎಂಬುವವನ್ನು ಎನ್ಐಎ ಬಂಧಿಸಿದೆ.

NIA
ಎನ್ಐಎ
author img

By

Published : Oct 24, 2021, 10:51 PM IST

ನವದೆಹಲಿ: ನಿಧಿ ಸಂಗ್ರಹಣೆ ಹಾಗೂ ಅಲ್ಪಸಂಖ್ಯಾತ ಯುವಕರನ್ನು ಸಂಘಟನೆಗೆ ಸೇರಿಸಲು ಸಿರಿಯಾಕ್ಕೆ ಕಳುಹಿಸಿದ ಆರೋಪದ ಮೇಲೆ ಎನ್ಐಎ ಅಧಿಕಾರಿಗಳು ಶಂಕಿತ ಐಸಿಸ್ ಉಗ್ರನನ್ನು ಬಂಧಿಸಿದ್ದಾರೆ.

ಮುಹಮ್ಮದ್ ತೌಕೀರ್ ಮಹಮೂದ್ (33) ಬಂಧಿತ ಭಯೋತ್ಪಾದಕ. ಈತ ಬೆಂಗಳೂರು ನಿವಾಸಿಯಾಗಿದ್ದು, ಶನಿವಾರ ಬಂಧಿಸಲಾಗಿದೆ ಎಂದು ಎನ್​​ಐಎ ತಿಳಿಸಿದೆ.

2013ರಲ್ಲಿ ಮಹಮೂದ್ ತನ್ನ ಸಹಚರನೊಂದಿಗೆ ಕಾನೂನುಬಾಹಿರವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದನು ಎಂಬ ಅಂಶ ತನಿಖೆಯಿಂದ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಅಹ್ಮದ್ ಅಬ್ದುಲ್ ಕ್ಯಾಡರ್ ಮತ್ತು ಇರ್ಫಾನ್ ನಾಸಿರ್ ಎಂಬ ಇಬ್ಬರು ಆರೋಪಿಗಳನ್ನು ತನಿಖಾ ಸಂಸ್ಥೆ ಬಂಧಿಸಿತ್ತು.

ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಐಎಸ್​​ಐಎಸ್​/ಐಎಸ್​​​ಐಎಲ್​​​/ಡೇಶ್ ನೊಂದಿಗೆ ಸಂಬಂಧ ಹೊಂದಿದ್ದು, ಆರೋಪಿಗಳ ಮೇಲೆ ಐಪಿಸಿ ಮತ್ತು ಯುಎ(ಪಿ)ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ 4 ದಿನಗಳ ಕಾಲ ಸೇನಾ ಕಮಾಂಡರ್​ಗಳ ಸಮಾವೇಶ: ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.