ETV Bharat / bharat

ಪುರುಷರಿಗಿಂತ ಮಹಿಳೆಯರಿಗೆ ಲೈಂಗಿಕ ಸಂಗಾತಿಗಳು​ ಜಾಸ್ತಿ: NFHS ಸಮೀಕ್ಷಾ ವರದಿ

ದೇಶದ ಹಲವು ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತಿಳಿಸಿದೆ.

ಸೆಕ್ಸ್​ ಪಾರ್ಟನರ್ಸ್
sex partners
author img

By

Published : Aug 19, 2022, 3:29 PM IST

Updated : Aug 19, 2022, 3:50 PM IST

ನವದೆಹಲಿ: ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸರಾಸರಿ ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಹೀಗೆ ತಮ್ಮ ಸಂಗಾತಿ ಅಲ್ಲದ ಅಥವಾ ತಮ್ಮೊಂದಿಗೆ ವಾಸಿಸದ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯರ ಪ್ರಮಾಣ ಶೇ 4ರಷ್ಟಿದೆ. ಅದರಂತೆ ಇದೇ ರೀತಿಯ ಪುರುಷರ ಪ್ರಮಾಣ ಕೇವಲ ಶೇ 0.5 ಮಾತ್ರ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ವರದಿ ಹೇಳಿದೆ.

1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷರನ್ನೊಳಗೊಂಡು ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಬಹಳಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಈ ರಾಜ್ಯಗಳೆಂದರೆ ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯ ಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು.

ರಾಜಸ್ಥಾನದಲ್ಲಿ ಮಹಿಳೆಯರು ಹೊಂದಿರುವ ಪುರುಷ ಪಾಲುದಾರರ ಪ್ರಮಾಣ ಅತ್ಯಧಿಕವಾಗಿದ್ದು, ಸರಾಸರಿ 3.1 ರಷ್ಟಿದೆ. ಇದು ಪುರುಷರಲ್ಲಿ 1.8 ಆಗಿದೆ. ಆದರೆ, ಕಳೆದ ಹನ್ನೆರಡು ತಿಗಳ ಅವಧಿಯಲ್ಲಿ ತಮ್ಮ ಸಂಗಾತಿಗಳಲ್ಲದವರು ಅಥವಾ ಲಿವ್ ಇನ್ ಪಾರ್ಟನರ್ ಆಗಿಲ್ಲದಿರುವ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಪ್ರಮಾಣ ಶೇ 4 ರಷ್ಟಿದ್ದರೆ, ಇದು ಮಹಿಳೆಯರ ವಿಷಯದಲ್ಲಿ ಶೇ 0.5ರಷ್ಟಿದೆ.

2019-21ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5, 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಂದ ದೇಶದ 707 ಜಿಲ್ಲೆಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ರಾಷ್ಟ್ರೀಯ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆ ಗುಣಲಕ್ಷಣಗಳ ಡೇಟಾವನ್ನು ಸಹ ಒದಗಿಸುತ್ತದೆ. ಇದು ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತವಾಗಿದೆ.

Last Updated : Aug 19, 2022, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.