ETV Bharat / bharat

ಮುಂದಿನ ಮೂರು ವಾರ ಅತೀ ನಿರ್ಣಾಯಕ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

author img

By

Published : Apr 20, 2021, 10:00 PM IST

Updated : Apr 20, 2021, 10:38 PM IST

ಕೇಂದ್ರ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು. ನೀತಿ ಆಯೋಗದ ಸದಸ್ಯ ಡಾ.ವಿ ಕೆ ಪೌಲ್, ಡಿಹೆಚ್‌ಆರ್ ಕಾರ್ಯದರ್ಶಿ ಡಾ.ಬಲರಾಮ್ ಭಾರ್ಗವ ಮತ್ತು ಡಿಜಿ ಐಸಿಎಂಆರ್ ಕಾರ್ಯದರ್ಶಿಗಳು, ಡಿಜಿಪಿಗಳು ಹಾಗೂ ಭಾರತದ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಡಾ.ಹರ್ಷವರ್ಧನ್
ಡಾ.ಹರ್ಷವರ್ಧನ್

ನವದೆಹಲಿ: ದೇಶದ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಂದಿನ ಮೂರು ವಾರಗಳು ನಿರ್ಣಾಯಕ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಕೊರೊನಾವನ್ನು ಒಳಗೊಂಡಿರುವ ಸಾರ್ವಜನಿಕ ಆರೋಗ್ಯ ಕ್ರಮಗಳ ಕುರಿತು ಕೇಂದ್ರಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ, ಮುಂದಿನ ಮೂರು ವಾರಗಳು ನಿರ್ಣಾಯಕವಾಗಿವೆ.

ಇಂದು ನಡೆದ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಆಸ್ಪತ್ರೆಯ ಮೂಲಸೌಕರ್ಯ ಹೆಚ್ಚಿಸಲು, ಪರೀಕ್ಷೆ ಹೆಚ್ಚಿಸಲು ಹಾಗೂ ಕಂಟೇನ್​ಮೆಂಟ್​ ಝೋನ್​ಗಳನ್ನು ರಚಿಸಲು ಹಾಗೂ ಕೋವಿಡ್​ ಸೂಕ್ತ ನಡವಳಿಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಲಹೆ ನೀಡಲಾಗಿದೆ ಎಂದು ಡಾ.ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಕೋವಿಡ್​ ಸ್ಥಿತಿ, ನಿರ್ವಹಣೆ ಮತ್ತು ಪ್ರತಿಕ್ರಿಯೆ ಕಾರ್ಯತಂತ್ರ ಪರಿಶೀಲಿಸಿದರು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆದಿದೆ. ನೀತಿ ಆಯೋಗದ ಸದಸ್ಯ ಡಾ.ವಿ ಕೆ ಪೌಲ್, ಡಿಹೆಚ್‌ಆರ್ ಕಾರ್ಯದರ್ಶಿ ಡಾ.ಬಲರಾಮ್ ಭಾರ್ಗವ ಮತ್ತು ಡಿಜಿ ಐಸಿಎಂಆರ್ ಕಾರ್ಯದರ್ಶಿಗಳು, ಡಿಜಿಪಿಗಳು ಹಾಗೂ ಭಾರತದ ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು.

Last Updated : Apr 20, 2021, 10:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.